ಪಠಾಣಕೋಟ (ಪಂಜಾಬ) ಇಲ್ಲಿನ ಘಟನೆ

ಪಠಾಣಕೋಟ (ಪಂಜಾಬ) – ಇಲ್ಲಿ ಸಿಸಿಟಿವಿ ಕ್ಯಾಮೆರಾಗಳ ಮೂಲಕ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐ.ಎಸ್.ಐ.ಗಾಗಿ (ಇಂಟರ್ ಸರ್ವಿಸಸ್ ಇಂಟೆಲಿಜೆನ್ಸ್ – ಅಂತರ್ ಸೇವಾ ಗುಪ್ತಚರ ವ್ಯವಸ್ಥೆ) ಬೇಹುಗಾರಿಕೆ ಮಾಡುತ್ತಿದ್ದ ಬಲಜೀತ ಸಿಂಹ ಅಲಿಯಾಸ್ ಬಿಟ್ಟೂನನ್ನು ಪೊಲೀಸರು ಬಂಧಿಸಿದರು. ಅವನು ಈ ಮೂಲಕ ಭಾರತೀಯ ಸೈನ್ಯ ಮತ್ತು ಅರೆಸೈನಿಕ ಪಡೆಯ ಚಲನವಲನಗಳ ಮಾಹಿತಿಯನ್ನು ಪಾಕಿಸ್ತಾನಕ್ಕೆ ನೀಡುತ್ತಿದ್ದನು.
೧. ಬಲಜೀತನು ಸುಜಾನಪುರದ ಹತ್ತಿರದ ರಾಷ್ಟ್ರೀಯ ಹೆದ್ದಾರಿ – ೪೪ ರಲ್ಲಿ ಅನೇಕ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿದ್ದನು. ಅವನು ಸೇತುವೆ ಕ್ರಮಾಂಕ ೪ ಮತ್ತು ೫ ರ ನಡುವಿನ ಅಂಗಡಿಗಳ ಮೇಲೆ ಈ ಕ್ಯಾಮೆರಾಗಳನ್ನು ಅಳವಡಿಸಿದ್ದನು. ಈ ಕ್ಯಾಮೆರಾಗಳನ್ನು ಬಳಸಿ ಸೈನಿಕರ ತುಕಡಿಗಳ ಚಲನವಲನಗಳ ಮೇಲೆ ನಿಗಾ ಇಡುತ್ತಿದ್ದನು. ಅವನು ಕ್ಯಾಮೆರಾಗಳಿಂದ ಸಿಗುವ ನೇರ ಚಿತ್ರೀಕರಣ ಮತ್ತು ಇತರ ಸೂಕ್ಷ್ಮ ಮಾಹಿತಿಯನ್ನು ಪಾಕಿಸ್ತಾನ ಮತ್ತು ವಿದೇಶದಲ್ಲಿ ಕುಳಿತಿರುವ ಹ್ಯಾಂಡ್ಲರ್ಸ್ ಗಳಿಗೆ (ಭಾರತದಲ್ಲಿ ಭಯೋತ್ಪಾದಕ ಚಟುವಟಿಕೆಗಳನ್ನು ಮಾಡಲು ನಿಯಂತ್ರಣ ಮತ್ತು ನಿರ್ವಹಣೆ ಮಾಡುವ ಜನರಿಗೆ) ಕಳುಹಿಸುತ್ತಿದ್ದನು. ದುಬೈನಲ್ಲಿ ಕುಳಿತಿರುವ ಓರ್ವ ವ್ಯಕ್ತಿಯಿಂದ ಅವನಿಗೆ ಆದೇಶ ಬರುತ್ತಿತ್ತು ಮತ್ತು ಅವನು ಈ ಮಾಹಿತಿಯನ್ನು ಪೂರೈಸುತ್ತಿದ್ದನು. ಇದಕ್ಕಾಗಿ ಅವನಿಗೆ ೪೦ ಸಾವಿರ ರೂಪಾಯಿಗಳು ಸಿಕ್ಕಿದ್ದವು.
೨. ಈ ಪ್ರಕರಣದಲ್ಲಿ ವಿಕ್ರಮಜೀತ ಸಿಂಹ ಅಲಿಯಾಸ್ ವಿಕ್ಕಾ, ಬಲವಿಂದರ ಸಿಂಹ ಅಲಿಯಾಸ್ ವಿಕ್ಕಿ ಮತ್ತು ತರಣಪ್ರೀತ ಸಿಂಹ ಅಲಿಯಾಸ್ ಟನ್ನೂ ಈ ಮೂವರ ಕೈವಾಡವೂ ಇರುವುದು ಬೆಳಕಿಗೆ ಬಂದಿದೆ. ಪೊಲೀಸರು ಈಗ ಈ ಸಂಪೂರ್ಣ ಜಾಲದ ಆಳವಾದ ತನಿಖೆ ಮಾಡುತ್ತಿದ್ದಾರೆ
ಹುಡುಗಿಯ ಮೃತದೇಹವು ಕೆರೆಯಲ್ಲಿ ತೇಲುತ್ತಿದ್ದ ಸ್ಥಿತಿಯಲ್ಲಿ ಪತ್ತೆ!
ನಾವು ಹಿಂದೂ ಧರ್ಮದ ಮೇಲಿನ ದ್ವೇಷದ ವಿರುದ್ಧ ದೃಢವಾಗಿ ನಿಲ್ಲಬೇಕು !
ಯುಕ್ರೇನ್-ರಷ್ಯಾ ಯುದ್ಧದಲ್ಲಿ ಭಾರತೀಯ ಸೈನಿಕರನ್ನು ಶಾಂತಿ ಕಾರ್ಯಾಚರಣೆಗಾಗಿ ಕಳುಹಿಸುವ ಉಪರಾಷ್ಟ್ರಪತಿ ಜೆ.ಡಿ. ವ್ಯಾನ್ಸ್ ಅವರ ಪ್ರಸ್ತಾವನೆ : Indian Peace Keeping for Ukraine
ಸಿಂಧೂ ನದಿ ನೀರು ಹಂಚಿಕೆ ಒಪ್ಪಂದದ ವಿಚಾರದಲ್ಲಿ ಪಾಕಿಸ್ತಾನದಿಂದ ಕಾಶ್ಮೀರ ಗಡಿಯಲ್ಲಿ 35 ಡ್ರೋನ್ ವಿರೋಧಿ ಘಟಕಗಳ ನಿಯೋಜನೆ! : Indus Water Treaty Crisis
‘ಮಾನವಾಧಿಕಾರ ಉಲ್ಲಂಘನೆಯಾದರೆ ಭಾರತದ ಮೇಲೆ ಟೀಕಿಸಲು ಹಿಂಜರಿಯುವುದಿಲ್ಲ!'(ವಂತೆ) : US Lawmakers
ಮಾನವ ಹಕ್ಕುಗಳ ಉಲ್ಲಂಘನೆ ವಿರುದ್ಧ ಧ್ವನಿ ಎತ್ತಿದ ಮೆಹರಂಗ್ ಬಲೋಚ್ ಗೆ ಪಾಕಿಸ್ತಾನದಿಂದ ಜೀವಾವಧಿ ಶಿಕ್ಷೆ !