ರತ್ನಗಿರಿ ಭ್ರಷ್ಟಾಚಾರ ವಿರೋಧಿ ದಳದ (ACB) ಕಾರ್ಯಾಚರಣೆ!

ರಾಜಾಪುರ – ಪತ್ನಿಯ ಹೆಸರನ್ನು ಪಹಣಿ (ಸಾತ-ಬಾರಾ) ಪತ್ರದಲ್ಲಿ ದಾಖಲಿಸಲು 25 ಸಾವಿರ ರೂಪಾಯಿ ಲಂಚಕ್ಕೆ ಬೇಡಿಕೆಯಿಟ್ಟು, ಅಂತಿಮವಾಗಿ 20 ಸಾವಿರ ರೂಪಾಯಿ ಪಡೆಯುತ್ತಿದ್ದ ತಾಲ್ಲೂಕಿನ ಕೊತ್ವಾಲ್ (ಕಂದಾಯ ಇಲಾಖೆಯ ಕಿರಿಯ ನೌಕರರು) ಸಂಜನಾ ಮಾನೆ ಮತ್ತು ಮಂಡಲ ಅಧಿಕಾರಿ ಪೂನಂ ಗಾವಿತ್ ಅವರನ್ನು ಭ್ರಷ್ಟಾಚಾರ ವಿರೋಧಿ ದಳದವರು ಬಂಧಿಸಿದ್ದಾರೆ.
Two Revenue personnel, Kotwal Sanjana Mane and Circle Officer Poonam Gavit were caught accepting a bribe of ₹20,000 by the ACB in Rajapur (Ratnagiri district)
This incident shows that women competing shoulder to shoulder with men in every field are not lagging behind even in… pic.twitter.com/XhoDCnuOO6
— Sanatan Prabhat (@SanatanPrabhat) May 16, 2026
1. ಮೌಜೆ ಜವಳೆಥರ್ ಎಂಬಲ್ಲಿ ದೂರುದಾರರ ಪಿತ್ರಾರ್ಜಿತ ಭೂಮಿ ಇದೆ. ಪಹಣಿ ಪತ್ರದಲ್ಲಿ ಪತ್ನಿಯ ಹೆಸರು ಇಲ್ಲದ ಕಾರಣ ಅವರು ಬದಲಾವಣೆಗಾಗಿ (Mutation) ಅರ್ಜಿ ಸಲ್ಲಿಸಿದ್ದರು. ಮೇ 13 ರಂದು ಮಿಳಂದ್ ತಲಾಠಿ ಕಚೇರಿಯಲ್ಲಿ, ಮಂಡಲ ಅಧಿಕಾರಿ ಪೂನಂ ಜಸ್ಸೀಂಗ್ ಗಾವಿತ್ ಅವರು ಅನುಮೋದನೆ ನೀಡಲು 25 ಸಾವಿರ ರೂಪಾಯಿ ಕೇಳಿದ್ದಾರೆ ಎಂದು ಕೊತ್ವಾಲ್ ಸಂಜನಾ ನಂದಕುಮಾರ್ ಮಾನೆ ದೂರುದಾರರ ಬಳಿ ಹಣಕ್ಕೆ ಬೇಡಿಕೆಯಿಟ್ಟಿದ್ದರು.
2. ದೂರುದಾರರು ಭ್ರಷ್ಟಾಚಾರ ವಿರೋಧಿ ದಳಕ್ಕೆ ದೂರು ನೀಡಿದ ನಂತರ, ಮೇ 14 ರಂದು ನಡೆಸಿದ ಪರಿಶೀಲನೆಯಲ್ಲಿ ಕೊತ್ವಾಲ್ ಮಾನೆ ಅವರು ಮಂಡಲ ಅಧಿಕಾರಿ ಗಾವಿತ್ ಪರವಾಗಿ 20 ಸಾವಿರ ರೂಪಾಯಿ ಲಂಚ ಕೇಳಿ ಅದನ್ನು ಸ್ವೀಕರಿಸಲು ಒಪ್ಪಿಕೊಂಡಿದ್ದರು. ಅದರಂತೆ ಎಸಿಬಿ ತಂಡವು ಬಲೆ ಬೀಸಿತ್ತು.
3. ಮಿಳಂದ್ ತಲಾಠಿ ಕಚೇರಿಯಲ್ಲಿ ಸಾಕ್ಷಿಗಳ ಸಮ್ಮುಖದಲ್ಲಿ ಕೊತ್ವಾಲ್ ಸಂಜನಾ ಮಾನೆ ಅವರು 20 ಸಾವಿರ ರೂಪಾಯಿ ಸ್ವೀಕರಿಸಿದರು. ನಂತರ ಮಂಡಲ ಅಧಿಕಾರಿ ಪೂನಂ ಗಾವಿತ್ ಅವರಿಗೆ ಫೋನ್ ಮೂಲಕ ಈ ವಿಷಯ ತಿಳಿಸಿದಾಗ ಅವರು ಒಪ್ಪಿಗೆ ಸೂಚಿಸಿದರು. ಈ ಹಿನ್ನೆಲೆಯಲ್ಲಿ ಇಬ್ಬರನ್ನೂ ಭ್ರಷ್ಟಾಚಾರ ವಿರೋಧಿ ದಳದ ತಂಡವು ವಶಕ್ಕೆ ಪಡೆದಿದೆ.
ಕೇರಳಮ್ದಲ್ಲಿ ‘ಇಸ್ಲಾಂ ಫ್ರೆಂಡ್ಲಿ’ ಜಿಮ್ ಕುರಿತು ವಿವಾದ
ಪುಣೆ ನಗರದಲ್ಲಿ ಮತ್ತೆ ‘ಕಾರ್ಪೊರೇಟ್ ಜಿಹಾದ್’ ಪ್ರಕರಣ
‘ದಾರುಲ್ ಉಲೂಮ್ ದೇವಬಂದ್’ ಭಯೋತ್ಪಾದಕರ ಕೇಂದ್ರವಾಗಿರುವುದರಿಂದ ಅದನ್ನು ನೆಲಸಮ ಮಾಡಿ ! – ಹಿಂದೂ ರಕ್ಷಾ ದಳದ ಬೇಡಿಕೆ
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭಗವಾನ್ ಶಿವನ ರೂಪದಲ್ಲಿ ತೋರಿಸಿದ ‘ವಿಶ್ವವಾಣಿ’ ಪತ್ರಿಕೆ !
‘ಭಂಡಾರ ಎಂದರೆ ಶುದ್ಧ ಅರಿಶಿನ’ ಎಂದು ಘೋಷಿಸುವಂತೆ ಅನ್ನ ಮತ್ತು ಔಷಧ ಆಡಳಿತಕ್ಕೆ (FDA) ಆಗ್ರಹ!
ಪಾನ್ ಮಸಾಲಾ, ಗುಟ್ಕಾ ಮತ್ತು ಕಲಬೆರಕೆ ಆಹಾರ ಪದಾರ್ಥಗಳ ಒಂದೂವರೆ ಕೋಟಿಗೂ ಹೆಚ್ಚು ಮೌಲ್ಯದ ದಾಸ್ತಾನು ವಶ