ಛತ್ರಪತಿ ಸಂಭಾಜಿನಗರದಲ್ಲಿ ಮಾಜಿ ನಗರಸೇವಕ ಮತೀನ್ ಪಟೇಲ್ ಅವರ ಅನಧಿಕೃತ ಮನೆಗೆ ಬುಲ್ಡೋಜರ್!

ಟಿ.ಸಿ.ಎಸ್. ನಲ್ಲಿನ ‘ಕಾರ್ಪೊರೇಟ್ ಜಿಹಾದ್’; ಮುಖ್ಯ ಆರೋಪಿ ನಿದಾ ಖಾನ್‌ಗೆ ಆಶ್ರಯ ನೀಡಿದ ಪ್ರಕರಣ;

ಛತ್ರಪತಿ ಸಂಭಾಜಿನಗರ – ನಾಸಿಕ್‌ ನ ಬಹುಚರ್ಚಿತ ‘ಟಿ.ಸಿ.ಎಸ್.’ ನಲ್ಲಿನ ಕಾರ್ಪೊರೇಟ್ ಜಿಹಾದ್ ಪ್ರಕರಣದ ಮುಖ್ಯ ಆರೋಪಿ ನಿದಾ ಖಾನ್‌ ಗೆ ಆಶ್ರಯ ನೀಡಿದ ಪ್ರಕರಣದಲ್ಲಿ, ‘ಎಮ್.ಐ.ಎಮ್.’ನ ಮಾಜಿ ನಗರಸೇವಕ ಮತೀನ್ ಪಟೇಲ್ ಅವರ ಅನಧಿಕೃತ ಮನೆಯನ್ನು ಮಹಾನಗರ ಪಾಲಿಕೆಯ ಆಡಳಿತ ಮೇ ೧೩ ರಂದು ಬೆಳಿಗ್ಗೆ ಬುಲ್ಡೋಜರ್ ಮೂಲಕ ಧ್ವಂಸಗೊಳಿಸಿದೆ.

ಹಿಂದೂದ್ವೇಷಿ ಆರೋಪಿಗೆ ಸಹಾಯ ಮಾಡಿದ ಪರಿಣಾಮಗಳು!

ಪೊಲೀಸರ ತನಿಖೆಯ ಪ್ರಕಾರ, ಮತಾಂಧ ನಿದಾ ಖಾನ್ ಮತ್ತು ಆಕೆಯ ಕುಟುಂಬದವರಿಗೆ ಛತ್ರಪತಿ ಸಂಭಾಜಿನಗರದಲ್ಲಿ ಸುರಕ್ಷಿತ ಆಶ್ರಯ ಕಲ್ಪಿಸಿಕೊಡುವಲ್ಲಿ ಮತೀನ್ ಪಟೇಲ್ ಪ್ರಮುಖ ಪಾತ್ರ ವಹಿಸಿದ್ದನು. ಖಾನ್ ಮತ್ತು ಆಕೆಯ ಕುಟುಂಬದವರಿಗೆ ಕೇವಲ ಉಳಿದುಕೊಳ್ಳುವ ವ್ಯವಸ್ಥೆ ಮಾತ್ರವಲ್ಲದೆ, ಕಾನೂನಿನ ಕಪಿಮುಷ್ಟಿಯಿಂದ ಪಾರಾಗಲು ಕೂಡ ಅವನು ಎಲ್ಲಾ ರೀತಿಯ ಸಹಾಯ ಮಾಡಿದ್ದನು. ಈ ಕ್ರಿಮಿನಲ್ ಕೆಲಸಕ್ಕಾಗಿ ಪೊಲೀಸರು ಆತನನ್ನು ಈ ಪ್ರಕರಣದಲ್ಲಿ ಸಹ-ಆರೋಪಿಯನ್ನಾಗಿ ಮಾಡಿದ್ದಾರೆ.

ಆಡಳಿತದ ಕ್ರಮಕ್ಕೆ ನಾಗರಿಕರಿಂದ ಪುಷ್ಪವೃಷ್ಟಿ ಮಾಡಿ ಸ್ವಾಗತ!

ಬೆಳಿಗ್ಗೆ ೬ ಗಂಟೆಗೆ ಮಹಾನಗರ ಪಾಲಿಕೆಯು ಈ ಕಾರ್ಯಾಚರಣೆಯನ್ನು ಪ್ರಾರಂಭಿಸಿತು. ನಿದಾ ಖಾನ್ ೭ ದಿನಗಳ ಕಾಲ ಅಡಗಿ ಕುಳಿತಿದ್ದ ಆ ಮನೆಯ ಮೇಲೆಯೂ ಶೀಘ್ರದಲ್ಲೇ ಕ್ರಮ ಕೈಗೊಳ್ಳಲಾಗುವುದು. ವಿಶೇಷವೆಂದರೆ, ಈ ಕಾರ್ಯಾಚರಣೆ ನಡೆಯುತ್ತಿರುವಾಗ ಅಲ್ಲಿನ ಜಾಗೃತ ನಾಗರಿಕರು ಸಂತೋಷ ವ್ಯಕ್ತಪಡಿಸುತ್ತಾ ಆಡಳಿತದ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ಮೇಲೆ ಪುಷ್ಪವೃಷ್ಟಿ ಮಾಡಿದರು ಮತ್ತು ಆಯುಕ್ತರನ್ನು ಅಭಿನಂದಿಸಿದರು. ಪರಿಸ್ಥಿತಿ ನಿಯಂತ್ರಣದಲ್ಲಿಡಲು ಪ್ರದೇಶದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿತ್ತು.