ಭೀಕರ ಬಡತನ ಮತ್ತು ಎಲ್ಲೆಡೆ ಯುದ್ಧದ ಭೀತಿಯಿದ್ದರೂ, ಕೆಲವು ಇಸ್ಲಾಮಿಕ್ ದೇಶಗಳಲ್ಲಿ ಆತ್ಮಹತ್ಯೆಯ ಪ್ರಮಾಣ ಇಳಿಕೆ !

ನವದೆಹಲಿ – ಗ್ರೀನ್‌ ಲ್ಯಾಂಡ್, ದಕ್ಷಿಣ ಕೊರಿಯಾ, ಸ್ವೀಡನ್ ಮತ್ತು ಜಪಾನ್‌ ನಂತಹ ಶ್ರೀಮಂತ ದೇಶಗಳಲ್ಲಿ ಆತ್ಮಹತ್ಯೆಯ ಪ್ರಮಾಣವು ತುಂಬಾ ಹೆಚ್ಚಿದೆ. ಇನ್ನೊಂದೆಡೆ ಪಾಕಿಸ್ತಾನ, ಸಿರಿಯಾ, ಲೆಬನಾನ್, ಪ್ಯಾಲೆಸ್ಟೈನ್‌ ನಂತಹ ಇಸ್ಲಾಮಿಕ್ ದೇಶಗಳಲ್ಲಿ ಆತ್ಮಹತ್ಯೆಯ ಪ್ರಮಾಣವು ಅತ್ಯಂತ ಕಡಿಮೆಯಿದೆ.

೧. ಪ್ಯಾಲೆಸ್ಟೈನ್‌ ನಲ್ಲಿ ಆತ್ಮಹತ್ಯೆಯ ಪ್ರಮಾಣವು ಅತ್ಯಂತ ಕಡಿಮೆ ಇದೆ. ಪ್ಯಾಲೆಸ್ಟೈನ್ ಬಡತನ ಮತ್ತು ಇಸ್ರೇಲ್ ಜೊತೆಗಿನ ಯುದ್ಧದ ಹೊಡೆತವನ್ನು ಅನುಭವಿಸುತ್ತಿದೆ. ೨೦೨೧ ರಲ್ಲಿ ಪ್ರತಿ ಒಂದು ಲಕ್ಷ ಜನರಲ್ಲಿ ಆತ್ಮಹತ್ಯೆಯ ಅಂಕಿಅಂಶವು ಕೇವಲ ೦.೭೮ ರಷ್ಟಿತ್ತು.

೨. ಸಿರಿಯಾ ಅಂತರ್ಯುದ್ಧ ಮತ್ತು ಅಧಿಕಾರ ಹಸ್ತಾಂತರದಂತಹ ಸಮಸ್ಯೆಗಳನ್ನು ಎದುರಿಸುತ್ತಿದೆ. ಇಲ್ಲಿ ಆತ್ಮಹತ್ಯೆಯ ಪ್ರಮಾಣವು ಪ್ರತಿ ಲಕ್ಷಕ್ಕೆ ಕೇವಲ ೦.೮೯ ರಷ್ಟಿದೆ.

೩. ಲೆಬನಾನ್‌ ನಲ್ಲಿಯೂ ಬಡತನವು ಉತ್ತುಂಗಕ್ಕೇರಿದೆ. ಈ ದೇಶವೂ ಯುದ್ಧದಲ್ಲಿ ಸಿಲುಕಿಕೊಂಡಿದೆ; ಆದರೆ ಲೆಬನಾನ್‌ ನಲ್ಲಿಯೂ ಆತ್ಮಹತ್ಯೆಯ ಪ್ರಮಾಣವು ಪ್ರತಿ ಲಕ್ಷಕ್ಕೆ ೦.೯೪ ರಷ್ಟಿದೆ.

೪. ಪಾಕಿಸ್ತಾನದಲ್ಲಿಯೂ ತುಂಬಾ ಬಡತನವಿದೆ, ಹೆಚ್ಚುತ್ತಿರುವ ಹಣದುಬ್ಬರದ ನಂತರವೂ ಪಾಕಿಸ್ತಾನದಲ್ಲಿ ಆತ್ಮಹತ್ಯೆಯ ಪ್ರಮಾಣವು ಅತ್ಯಂತ ಅಲ್ಪವಾಗಿದೆ.

೫. ಅಫ್ಘಾನಿಸ್ತಾನದಲ್ಲಿ ಜನರು ಬಡತನ ಮತ್ತು ಅಪೌಷ್ಟಿಕತೆಯನ್ನು ಎದುರಿಸುತ್ತಿದ್ದಾರೆ. ಅಫ್ಘಾನಿಸ್ತಾನವು ದೀರ್ಘಕಾಲದಿಂದ ಯುದ್ಧದಲ್ಲಿ ಸಿಲುಕಿಕೊಂಡಿರುವುದರಿಂದ ಅಲ್ಲಿ ಹಣದುಬ್ಬರ ಮತ್ತು ನಿರುದ್ಯೋಗವಿದೆ. ಹೀಗಿದ್ದರೂ ಈ ದೇಶದಲ್ಲಿ ಆತ್ಮಹತ್ಯೆಯ ಪ್ರಮಾಣವು ಅತ್ಯಂತ ಕಡಿಮೆಯಿದೆ.

ಇಸ್ಲಾಂನಲ್ಲಿ ಆತ್ಮಹತ್ಯೆ ಹರಾಮ್

ಇಸ್ಲಾಮಿಕ್ ದೇಶಗಳಲ್ಲಿ ಆತ್ಮಹತ್ಯೆಯ ಪ್ರಮಾಣವು ಕಡಿಮೆಯಿದೆ; ಏಕೆಂದರೆ ಇಸ್ಲಾಂನಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವುದನ್ನು ‘ಹರಾಮ್’ (ಇಸ್ಲಾಂ ಪ್ರಕಾರ ಅಯೋಗ್ಯ) ಎಂದು ಪರಿಗಣಿಸಲಾಗುತ್ತದೆ. ಇದೇ ಕಾರಣದಿಂದ ಇಸ್ಲಾಮಿಕ್ ದೇಶಗಳಲ್ಲಿ ಆತ್ಮಹತ್ಯೆಯ ಪ್ರಮಾಣವು ಕಡಿಮೆಯಿದೆ. ವಿಶ್ವದ ಶ್ರೀಮಂತ ಮತ್ತು ಅಭಿವೃದ್ಧಿ ಹೊಂದಿದ ದೇಶಗಳ ಪೈಕಿ ಸ್ವೀಡನ್, ಬೆಲ್ಜಿಯಂ ಮತ್ತು ಗ್ರೀನ್‌ಲ್ಯಾಂಡ್‌ನಂತಹ ದೇಶಗಳಲ್ಲಿ ಆತ್ಮಹತ್ಯೆಯ ಪ್ರಮಾಣವು ಹೆಚ್ಚಿದೆ. ಅಲ್ಲಿ ‘ಇಚ್ಛಾ ಮರಣ’ಕ್ಕೆ (ಇರುವ ಕಾನೂನುಬದ್ಧ ಮಾನ್ಯತೆಯೂ ಇದಕ್ಕೆ ಒಂದು ಕಾರಣವಾಗಿದೆ.

ಭಾರತದಲ್ಲಿ ದೊಡ್ಡ ಪ್ರಮಾಣದಲ್ಲಿ ನಡೆಯುತ್ತವೆ ಆತ್ಮಹತ್ಯೆಗಳು !

ಭಾರತದಲ್ಲಿನ ಆತ್ಮಹತ್ಯೆಯ ಪ್ರಮಾಣಕ್ಕೆ ಸಂಬಂಧಿಸಿದಂತೆ ‘ನ್ಯಾಷನಲ್ ಕ್ರೈಮ್ ರೆಕಾರ್ಡ್ ಬ್ಯೂರೋ’ ೨೦೨೩ ರಲ್ಲಿ ಪ್ರಕಟಿಸಿದ ಅಧಿಕೃತ ಅಂಕಿಅಂಶಗಳ ಪ್ರಕಾರ, ಆತ್ಮಹತ್ಯೆಯ ಪ್ರಮಾಣವು ೧೨.೩ (ಪ್ರತಿ ೧ ಲಕ್ಷ ಜನಸಂಖ್ಯೆಗೆ) ರಷ್ಟಿದೆ. ೨೦೨೩ ರಲ್ಲಿ ಭಾರತದಲ್ಲಿ ಒಟ್ಟು ೧ ಲಕ್ಷ ೭೧ ಸಾವಿರದ ೪೧೮ ಜನರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ೨೦೨೨ ಕ್ಕೆ ಹೋಲಿಸಿದರೆ (೧ ಲಕ್ಷ ೭೦ ಸಾವಿರದ ೯೨೪) ಇದರಲ್ಲಿ ಅಂದಾಜು ಶೇ. ೦.೨೯ ರಷ್ಟು ಹೆಚ್ಚಳವಾಗಿದೆ.

ಭಾರತದಲ್ಲಿನ ಆತ್ಮಹತ್ಯೆಗೆ ಪ್ರಮುಖ ಕಾರಣಗಳು

೧. ಕೌಟುಂಬಿಕ ಸಮಸ್ಯೆಗಳು: ಅಂದಾಜು ಶೇ. ೩೩ ರಷ್ಟು ಪ್ರಕರಣಗಳಲ್ಲಿ ಇದು ಮುಖ್ಯ ಕಾರಣವಾಗಿದೆ.
೨. ಅನಾರೋಗ್ಯ: ಶೇ. ೧೮ ಕ್ಕಿಂತ ಹೆಚ್ಚು ಜನರು ದೈಹಿಕ ಅಥವಾ ಮಾನಸಿಕ ಅನಾರೋಗ್ಯದ ಕಾರಣದಿಂದ ಆತ್ಮಹತ್ಯೆಯಂತಹ ತೀವ್ರ ನಿರ್ಧಾರ ತೆಗೆದುಕೊಳ್ಳುತ್ತಾರೆ.
೩. ವಿವಾಹಕ್ಕೆ ಸಂಬಂಧಿಸಿದ ಸಮಸ್ಯೆಗಳು: ಅಂದಾಜು ಶೇ. ೫ ರಷ್ಟು ಪ್ರಕರಣಗಳು.
೪. ಮಾದಕ ವಸ್ತುಗಳ ಸೇವನೆ: ಶೇ. ೬ ಕ್ಕಿಂತ ಹೆಚ್ಚು ಪ್ರಕರಣಗಳು.
೫. ಆರ್ಥಿಕ ಬಿಕ್ಕಟ್ಟು (ಸಾಲ/ಬಡತನ): ಅಂದಾಜು ಶೇ. ೪ ರಿಂದ ಶೇ. ೭ ರಷ್ಟು ಪ್ರಕರಣಗಳು.
೬. ವಿದ್ಯಾರ್ಥಿಗಳಲ್ಲಿನ ಆತ್ಮಹತ್ಯೆಯ ಪ್ರಮಾಣವು ಅಂದಾಜು ಶೇ. ೮ ರಷ್ಟಿದೆ.

೧೮ ರಿಂದ ೪೫ ವಯೋಮಾನದ ಯುವಕರು ಭಾರತದ ಒಟ್ಟು ಆತ್ಮಹತ್ಯೆಗಳಲ್ಲಿ ಶೇ. ೬೬ ರಷ್ಟು ಪಾಲನ್ನು ಹೊಂದಿದ್ದಾರೆ, ಇದು ಅತ್ಯಂತ ಕಳವಳಕಾರಿ ವಿಷಯವಾಗಿದೆ.

ಸಂಪಾದಕೀಯ ನಿಲುವು

  • ಇಸ್ಲಾಂನಲ್ಲಿ ಆತ್ಮಹತ್ಯೆಯು ಅಯೋಗ್ಯವೆಂದು ಹೇಳಿರುವುದರಿಂದ ಮುಸಲ್ಮಾನರು ಅದನ್ನು ಪಾಲಿಸುತ್ತಾರೆ; ಆದರೆ ಹಿಂದೂ ಧರ್ಮದಲ್ಲಿಯೂ ಆತ್ಮಹತ್ಯೆ ಮಾಡಿಕೊಳ್ಳುವುದು ಪಾಪವೆಂದು ಹೇಳಿದ್ದರೂ ಸಹ, ಹಿಂದೂಗಳಿಗೆ ಧರ್ಮಶಿಕ್ಷಣವಿಲ್ಲದ ಕಾರಣ ಅವರು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ !
  • ಇಸ್ಲಾಂನಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವುದು ಅಯೋಗ್ಯವಾಗಿದ್ದರೂ, ಧರ್ಮಕ್ಕಾಗಿ ಜಿಹಾದಿ ಭಯೋತ್ಪಾದಕರು ಆತ್ಮಹತ್ಯಾ ದಾಳಿಗಳ ಸಮಯದಲ್ಲಿ ದೇಹಕ್ಕೆ ಬಾಂಬ್ ಕಟ್ಟಿಕೊಂಡು ಇತರರೊಂದಿಗೆ ತಮ್ಮನ್ನೂ ಸ್ಫೋಟಿಸಿಕೊಳ್ಳುತ್ತಾರೆ !