ಬೆಂಗಳೂರು ಜೈಲಿನಲ್ಲಿ ಭಯೋತ್ಪಾದಕ ದಾಳಿಯ ಸಂಚು ರೂಪಿಸಿದ ಪ್ರಕರಣ

ಬೆಂಗಳೂರು – ‘ಲಷ್ಕರ್-ಎ-ತೊಯ್ಬಾ’ ಸಂಘಟನೆಗೆ ಸಂಬಂಧಿಸಿದ ಭಯೋತ್ಪಾದಕ ವಿಕ್ರಮ್ ಕುಮಾರ್ ಅಲಿಯಾಸ್ ‘ಚೋಟಾ ಉಸ್ಮಾನ್’ಗೆ ರಾಷ್ಟ್ರೀಯ ತನಿಖಾ ದಳದ (ಎನ್.ಐ.ಎ) ವಿಶೇಷ ನ್ಯಾಯಾಲಯವು 7 ವರ್ಷಗಳ ಕಠಿಣ ಜೈಲು ಶಿಕ್ಷೆಯನ್ನು ವಿಧಿಸಿದೆ. ಇದರಲ್ಲಿ 30 ಸಾವಿರ ರೂಪಾಯಿಗಳ ದಂಡವೂ ಸೇರಿದೆ. 2023ರ ಬೆಂಗಳೂರು ಜೈಲಿನಲ್ಲಿ ಭಯೋತ್ಪಾದಕ ದಾಳಿಯ ಸಂಚು ರೂಪಿಸಿದ ಪ್ರಕರಣದಲ್ಲಿ ಈ ಶಿಕ್ಷೆಯನ್ನು ವಿಧಿಸಲಾಗಿದೆ. ಈ ಪ್ರಕರಣದಲ್ಲಿ ಇದುವರೆಗೆ 8 ಜನರನ್ನು ಅಪರಾಧಿಗಳೆಂದು ಘೋಷಿಸಲಾಗಿದೆ.
Special court has sentenced another key LeT operative, Vikram Kumar @ Chota Usman, to 7 years RI, with fine, in the 2023 Bengaluru prison radicalisation case. Total convictions in the case has gone up to 8. pic.twitter.com/cMfl0RIC7g
— NIA India (@NIA_India) May 2, 2026
1. ಚೋಟಾ ಉಸ್ಮಾನ್ ಜೈಲಿನಲ್ಲಿ ಬಂಧಿಯಾಗಿದ್ದಾಗ ಕಟ್ಟರ್ ವಾದಿಯಾದನು ಮತ್ತು ಟಿ. ನಾಸೀರ್ ಹಾಗೂ ಸಹ ಆರೋಪಿ ಜುನೈದ್ ಅಹ್ಮದ್ ಸಂಪರ್ಕಕ್ಕೆ ಬಂದಿದ್ದನು. ಬಿಡುಗಡೆಯಾದ ನಂತರವೂ ಅವನು ಸತತವಾಗಿ ಅವರೊಂದಿಗೆ ಸಂಪರ್ಕದಲ್ಲಿದ್ದನು. ಮೇ 2023ರಲ್ಲಿ ಅವನು ಹರಿಯಾಣದ ಅಂಬಾಲಾದಿಂದ ಕೈಬಾಂಬ್‌ಗಳನ್ನು ಬೆಂಗಳೂರಿನಲ್ಲಿ ಮತ್ತೊಬ್ಬ ಆರೋಪಿಗೆ ತಲುಪಿಸಿದ್ದನು. ಪೊಲೀಸರು ಟಿ. ನಾಸೀರ್‌ನನ್ನು ಜೈಲಿನಿಂದ ನ್ಯಾಯಾಲಯಕ್ಕೆ ಕರೆದೊಯ್ಯುವಾಗ ಅವನನ್ನು ತಪ್ಪಿಸಿಕೊಂಡು ಹೋಗಲು ನೆರವಾಗುವ ಸಂಚಿನಲ್ಲೂ ಇವನು ಭಾಗಿಯಾಗಿದ್ದನು.
2. ಈ ಪ್ರಕರಣವು ಜುಲೈ 2023ರಲ್ಲಿ ಬೆಳಕಿಗೆ ಬಂದಿತ್ತು, ಆಗ ಬೆಂಗಳೂರು ಕೇಂದ್ರ ಅಪರಾಧ ವಿಭಾಗವು (ಸಿಸಿಬಿ) ನಗರದಲ್ಲಿ ಭಯೋತ್ಪಾದಕ ದಾಳಿಗೆ ಸಂಚು ರೂಪಿಸಿದ್ದ ಆರೋಪಿಗಳಿಂದ ಶಸ್ತ್ರಾಸ್ತ್ರಗಳು, ಮದ್ದುಗುಂಡುಗಳು ಮತ್ತು ಸಂವಹನ ಉಪಕರಣಗಳನ್ನು ವಶಪಡಿಸಿಕೊಂಡಿತ್ತು. ನಂತರ ಅಕ್ಟೋಬರ್ 2023ರಲ್ಲಿ ರಾಷ್ಟ್ರೀಯ ತನಿಖಾ ದಳವು ಜೈಲು ಒಳಗೆ ಯುವಕರನ್ನು ಕಟ್ಟರ್ ವಾದಿಗಳನ್ನಾಗಿ ಮಾಡುವ ಮತ್ತು ನೇಮಕ ಮಾಡುವ ದೊಡ್ಡ ಜಾಲವನ್ನು ಬಯಲಿಗೆಳೆದಿತ್ತು.
ಮಹಿಳೆಯ ಎದೆಗೆ ಸ್ಪರ್ಶಿಸುವುದು ಅತ್ಯಾಚಾರದ ಪ್ರಯತ್ನವಲ್ಲ! – ಉಚ್ಚ ನ್ಯಾಯಾಲಯ : Attempt to Rape
ಅಮರಕಂಟಕ (ಮಧ್ಯಪ್ರದೇಶ)ಇಲ್ಲಿನ ನರ್ಮದಾ ಉಗಮ ದೇವಸ್ಥಾನದ ಚಿನ್ನ ಮತ್ತು ಬೆಳ್ಳಿ ನಾಪತ್ತೆ! : Amarkantak Temple Donation Scam
ಬೆಂಗಳೂರಿನಲ್ಲಿ ದೇಶದ ಮೊದಲ ‘ಎಐ’ ವಿಶ್ವವಿದ್ಯಾಲಯ ಆರಂಭ ! : Karnataka AI University
ಗುಜರಾತ್ ನ ಪ್ರಸಿದ್ಧ ಶಕ್ತಿಪೀಠ ಅಂಬಾಜಿ ದೇವಸ್ಥಾನದಲ್ಲೂ ನೋಟು ಎಣಿಕೆಯ ಸಮಯದಲ್ಲಿ ೨ ತಿಂಗಳ ಹಿಂದೆ ಕಳ್ಳತನ ನಡೆದಿರುವುದು ಬಹಿರಂಗ ! : Ambaji Temple Donation Theft
ಸಮಾಜವಾದಿ ಪಕ್ಷದ ಅಧಿಕಾರಾವಧಿಯಲ್ಲಿ ‘ವಕ್ಫ್ ಮಂಡಳಿ’ಯ ಶತಕೋಟಿ ರೂಪಾಯಿಗಳ ಹಗರಣ! – ಮೌಲಾನಾ ಶಹಾಬುದ್ದೀನ ರಿಜ್ವಿ ಬರೇಲವಿ
“ನಾನು ಛತ್ರಪತಿ ಶಿವಾಜಿ ಮಹಾರಾಜರ ಅನುಯಾಯಿಯಾಗಿದ್ದು ರಣರಂಗ ಬಿಟ್ಟು ಓಡಿಹೋಗುವವನಲ್ಲ!”