
ಮುಂಬಯಿ – ನಾನು ಬೇರೆ ಧಾರ್ಮಿಕ ಹಿನ್ನೆಲೆಯುಳ್ಳ ಪುರುಷನನ್ನು ಎಂದಿಗೂ ವಿವಾಹವಾಗುವುದಿಲ್ಲ. ಇಸ್ಲಾಂ ಧರ್ಮವನ್ನು ಪಾಲಿಸದ ವ್ಯಕ್ತಿಯೊಂದಿಗೆ ನಾನು ವಿವಾಹವಾಗಲು ಸಾಧ್ಯವಿಲ್ಲ. ನಾನು ಅತ್ಯಂತ ಧಾರ್ಮಿಕ ವ್ಯಕ್ತಿಯಾಗಿದ್ದು, ದಿನಕ್ಕೆ ೫ ಬಾರಿ ನಮಾಜ್ ಮಾಡುತ್ತೇನೆ ಎಂದು ಕಿರುತೆರೆ ಕ್ಷೇತ್ರದ ಪ್ರಸಿದ್ಧ ನಟಿ ರೀಮ್ ಶೇಖ್ ಹೇಳಿದ್ದಾರೆ. ಸಂದರ್ಶನವೊಂದರಲ್ಲಿ, ಶೇಖ್ ಅವರ ಸ್ವಂತ ಕುಟುಂಬದಲ್ಲೇ ಅಂತರ್ ಧರ್ಮೀಯ ವಿವಾಹದ ಉದಾಹರಣೆಯಿರುವಾಗ, ಅವರು ಬೇರೆ ಧರ್ಮದ ಪುರುಷನನ್ನು ಪ್ರೀತಿಸಲು ಸಾಧ್ಯವೇ ಎಂದು ಕೇಳಲಾಗಿತ್ತು. ಇದಕ್ಕೆ ಅವರು ಮೇಲಿನಂತೆ ಉತ್ತರಿಸಿದ್ದಾರೆ. ಶೇಖ್ ಅವರ ತಾಯಿ ಹಿಂದೂ, ಆದರೆ ತಂದೆ ಮುಸ್ಲಿಂ ಆಗಿದ್ದಾರೆ. ಅವರ ನಡುವೆ ಸಾಕಷ್ಟು ಭಿನ್ನಾಭಿಪ್ರಾಯಗಳಿದ್ದ ಕಾರಣ ೫ ವರ್ಷಗಳ ಹಿಂದೆ ಅವರು ವಿಚ್ಛೇದನ ಪಡೆದಿದ್ದಾರೆ.
ಸುಖಿ ವೈವಾಹಿಕ ಜೀವನಕ್ಕಾಗಿ ಪತಿ-ಪತ್ನಿ ಇಬ್ಬರ ಧರ್ಮವೂ ಒಂದೇ ಆಗಿರುವುದು ಅತ್ಯಂತ ಅವಶ್ಯಕ! – ರೀಮ್ ಶೇಖ್
ನಾನು ನನ್ನ ಧರ್ಮವನ್ನು ಅತ್ಯಂತ ಗಂಭೀರವಾಗಿ ಪಾಲಿಸುತ್ತೇನೆ ಎಂದು ರೀಮ್ ಮುಂದೆ ಸ್ಪಷ್ಟಪಡಿಸಿದರು. ನಾನು ರಂಜಾನ್ ತಿಂಗಳಲ್ಲಿ ಉಪವಾಸ ಮಾಡುತ್ತೇನೆ. ನನ್ನ ಜೀವನದಲ್ಲಿ ಯಾವುದೇ ಕಷ್ಟ ಬಂದಾಗ, ನಾನು ಮೊದಲು ದೇವರ ಮುಂದೆ ತಲೆಬಾಗಿ ಪ್ರಾರ್ಥಿಸುತ್ತೇನೆ. ಇದನ್ನು ಗಮನಿಸಿದರೆ, ನನ್ನ ನಂಬಿಕೆಯನ್ನು ಒಪ್ಪದ ಅಥವಾ ನನ್ನ ಧರ್ಮವನ್ನು ಪಾಲಿಸದ ವ್ಯಕ್ತಿಯೊಂದಿಗೆ ನಾನು ನನ್ನ ಜೀವನವನ್ನು ಕಳೆಯಲು ಸಾಧ್ಯವಿಲ್ಲ. ಅದು ನನಗೆ ಅಸಾಧ್ಯ. ಸುಖಿ ವೈವಾಹಿಕ ಜೀವನಕ್ಕಾಗಿ ಪತಿ-ಪತ್ನಿ ಇಬ್ಬರ ಧರ್ಮವೂ ಒಂದೇ ಆಗಿರುವುದು ಅತ್ಯಂತ ಅವಶ್ಯಕವಾಗಿದೆ, ಎಂದು ಹೇಳಿದರು.
ಗೋರೆಗಾಂವ್: ಸರಕಾರಿ ಭೂಮಿಯಲ್ಲಿದ್ದ ಅಕ್ರಮ ದರ್ಗಾ ನೆಲಸಮ !
TMC Cut Money : ಬಂಗಾಳ: ಲಂಚದ ಹಣವನ್ನು ಜನರಿಗೆ ಹಿಂತಿರುಗಿಸುತ್ತಿರುವ ತೃಣಮೂಲ ಕಾಂಗ್ರೆಸ್ ನಾಯಕರು!
Japan Illegal Mosque : ಜಪಾನ್ : ಪಾಕಿಸ್ತಾನ ನಿರ್ಮಿಸಿದ ಅಕ್ರಮ ಮಸೀದಿ ಧ್ವಂಸ !
ಇಂದಿನಿಂದ ಕರ್ಣಾವತಿ (ಗುಜರಾತ್)ಯಲ್ಲಿ ಮೊದಲ ವಿಶ್ವ ಯೋಗಾಸನ ಸ್ಪರ್ಧೆ !
‘ಕಳ್ಳಭಟ್ಟಿಗಳನ್ನು ಅಧಿಕೃತಗೊಳಿಸಿದರೆ ಸರಕಾರಕ್ಕೆ ಆದಾಯ ಸಿಗುತ್ತದೆ !’(ಅಂತೆ)
ಗೋಪಾಲಗಡ ಸರಕಾರದ್ದಾಗಿದ್ದು ಎಲ್ಲರಿಗೂ ಮುಕ್ತವಾಗಿದೆ : ವದಂತಿಗಳನ್ನು ನಂಬಿ ಕಾನೂನನ್ನು ಕೈಗೆತ್ತಿಕೊಳ್ಳಬೇಡಿ !