
ನವದೆಹಲಿ – ಸಂಸ್ಕೃತ ಕೇವಲ ಒಂದು ಭಾಷೆಯಲ್ಲ. ‘ಸಂಸ್ಕೃತ’ ಭಾರತದ ಆತ್ಮವಾಗಿದೆ; ನಮ್ಮ ವಿಚಾರ, ಜೀವನ ಮತ್ತು ಸಂಸ್ಕೃತಿಯ ಅತ್ಯಂತ ಪ್ರಾಚೀನ ಪರಂಪರೆಯಾಗಿದ್ದು, ಇಂದಿಗೂ ಜೀವಂತವಾಗಿದೆ. ಭಾರತೀಯರು ತಮ್ಮ ಕರ್ತವ್ಯವನ್ನು ಪೂರೈಸಬೇಕಾದರೆ, ಭಾರತವನ್ನು ಅರ್ಥಮಾಡಿಕೊಳ್ಳಬೇಕು ಮತ್ತು ಸ್ವತಃ ಭಾರತವಾಗಬೇಕು. ಭಾರತವನ್ನು ಅರ್ಥಮಾಡಿಕೊಳ್ಳಬೇಕಾದರೆ ಸಂಸ್ಕೃತವನ್ನು ತಿಳಿಯುವುದು ಅನಿವಾರ್ಯವಾಗಿದೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ.ಪೂ. ಸರಸಂಘಚಾಲಕ ಡಾ. ಮೋಹನಜೀ ಭಾಗವತ್ ಅವರು ಮಾರ್ಗದರ್ಶನ ಮಾಡಿದರು. ಅವರು ಇಲ್ಲಿ ‘ಸಂಸ್ಕೃತ ಭಾರತಿ’ ಸಂಸ್ಥೆಯ ಕೇಂದ್ರ ಕಾರ್ಯಾಲಯದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡುತ್ತಿದ್ದರು. ಸಂಸ್ಕೃತವನ್ನು ಒಂದು ಜೀವಂತ ಮತ್ತು ವ್ಯಾಪಕವಾಗಿ ಬಳಸಲ್ಪಡುವ ಭಾಷೆಯನ್ನಾಗಿ ಉತ್ತೇಜಿಸಲು ಈ ಸಂಸ್ಥೆ ಕಾರ್ಯ ನಿರ್ವಹಿಸುತ್ತಿದೆ.
ಪ.ಪೂ. ಸರಸಂಘಚಾಲಕರು ಮಂಡಿಸಿದ ಕೆಲ ಪ್ರಮುಖ ಅಂಶಗಳು:
ನಮ್ಮ ವಾತಾವರಣ ಮತ್ತು ನಿಯಮಿತ ಬಳಕೆಯಿಂದ ಭಾಷೆ ಕಲಿಯುವುದು ಸುಲಭವಾಗುತ್ತದೆ!
ನನ್ನ ಬಾಲ್ಯದಲ್ಲಿ ಶಾಲೆಯಲ್ಲಿ ಸಂಸ್ಕೃತ ಕಲಿಸುವಾಗ ಅದು ಕಠಿಣವೆನಿಸುತ್ತಿತ್ತು. ಪಠ್ಯಕ್ರಮದಲ್ಲಿ ಶ್ಲೋಕಗಳನ್ನು ಕಂಠಪಾಠ ಮಾಡಬೇಕಾಗುತ್ತಿತ್ತು, ಇದರಿಂದಾಗಿ ಸಂಸ್ಕೃತವು ಒಂದು ಕಷ್ಟವಾದ ಭಾಷೆ ಎಂಬ ಭಾವನೆ ಮೂಡಿತು; ಆದರೆ ಅದೇ ಶ್ಲೋಕಗಳು ಮನೆಯಲ್ಲಿ ಸಹಜವಾಗಿ ಕೇಳಸಿಗುತ್ತಿದ್ದಾಗ ಅವು ಎಂದಿಗೂ ಕಠಿಣವೆನಿಸಲಿಲ್ಲ. ಇದೇ ಸಮಸ್ಯೆ ಇಂದಿಗೂ ಮುಂದುವರಿದಿದೆ; ವಿದ್ಯಾರ್ಥಿಗಳಿಗೆ ಸಂಸ್ಕೃತವು ಕಠಿಣ ಭಾಷೆಯೆಂದು ಅನಿಸುತ್ತದೆ; ಆದರೆ ಪ್ರಶ್ನೆಯೇನೆಂದರೆ, ಅದು ಇಷ್ಟೊಂದು ಕಠಿಣವೇಕೆ ಅನಿಸುತ್ತದೆ? ವಾಸ್ತವವಾಗಿ ಭಾಷೆಯನ್ನು ಕಲಿಯುವ ಅತ್ಯಂತ ಸರಳ ಮತ್ತು ಪರಿಣಾಮಕಾರಿ ಪದ್ಧತಿಯೆಂದರೆ ಪಠ್ಯಪುಸ್ತಕಗಳಲ್ಲ, ಬದಲಾಗಿ ಸಂವಾದವಾಗಿದೆ. ಭಾಷೆಯನ್ನು ಕಲಿಯುವುದು ವಾತಾವರಣದಿಂದ ಮತ್ತು ನಿಯಮಿತ ಬಳಕೆಯಿಂದ ಸುಲಭವಾಗುತ್ತದೆ.
ಭಾಷೆಯನ್ನು ಕಲಿಯುವ ಅತ್ಯುತ್ತಮ ಪದ್ಧತಿಯೆಂದರೆ ಆ ಭಾಷೆಯನ್ನು ಮಾತನಾಡುವ ಜನರೊಂದಿಗೆ ಬೆರೆಯುವುದು!
ನಾನು ಭಾರತದಾದ್ಯಂತ ಪ್ರವಾಸ ಮಾಡುವಾಗ, ನನಗೆ ವಿವಿಧ ಪ್ರಾದೇಶಿಕ ಭಾಷೆಗಳ ನಿರ್ದಿಷ್ಟ ಪದಗಳು ತಿಳಿಯದಿದ್ದರೂ, ಅದರ ಹಿಂದಿನ ಭಾವನೆ ಮತ್ತು ಅರ್ಥವನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತದೆ. ನಿರಂತರವಾಗಿ ಕೇಳಿಸಿಕೊಳ್ಳುವುದರಿಂದ ಮತ್ತು ಮಾತನಾಡುವುದರಿಂದ ಭಾಷೆಯು ಸಹಜವಾಗಿ ಮೈಗೂಡುತ್ತದೆ. ಆದ್ದರಿಂದ ಭಾಷೆಯನ್ನು ಕಲಿಯುವ ಅತ್ಯುತ್ತಮ ಪದ್ಧತಿಯೆಂದರೆ ಆ ಭಾಷೆಯನ್ನು ಮಾತನಾಡುವ ಜನರೊಂದಿಗೆ ಬೆರೆಯುವುದು, ಅವರ ಮಾತನ್ನು ಕೇಳಿಸಿಕೊಳ್ಳುವುದು ಮತ್ತು ನಿರಂತರವಾಗಿ ಮಾತನಾಡುವುದೇ ಸುಲಭ ಉಪಾಯವಾಗಿದೆ.
ಸಮಾಜವಾದಿ ಪಕ್ಷದ ಅಧಿಕಾರಾವಧಿಯಲ್ಲಿ ‘ವಕ್ಫ್ ಮಂಡಳಿ’ಯ ಶತಕೋಟಿ ರೂಪಾಯಿಗಳ ಹಗರಣ! – ಮೌಲಾನಾ ಶಹಾಬುದ್ದೀನ ರಿಜ್ವಿ ಬರೇಲವಿ
“ನಾನು ಛತ್ರಪತಿ ಶಿವಾಜಿ ಮಹಾರಾಜರ ಅನುಯಾಯಿಯಾಗಿದ್ದು ರಣರಂಗ ಬಿಟ್ಟು ಓಡಿಹೋಗುವವನಲ್ಲ!”
ಭೋಜಶಾಲೆಯ ಪ್ರಕರಣದಲ್ಲಿ ಮಧ್ಯಪ್ರದೇಶ ಉಚ್ಚ ನ್ಯಾಯಾಲಯದ ತೀರ್ಪಿಗೆ ತಡೆ ನೀಡಲು ಸರ್ವೋಚ್ಚ ನ್ಯಾಯಾಲಯದ ನಿರಾಕರಣೆ
ಮೇವು ಹಗರಣ ಪ್ರಕರಣದಲ್ಲಿ ಲಾಲು ಪ್ರಸಾದ್ ಯಾದವ್ ಅವರಿಗೆ ಮಂಜೂರಾದ ಜಾಮೀನು ರದ್ದುಗೊಳಿಸಲು ಸುಪ್ರೀಂ ಕೋರ್ಟ್ ನ ನಿರಾಕರಣೆ
ಭಗವಾನ್ ಜಗನ್ನಾಥರ ರಥಯಾತ್ರೆಗೂ ಮುನ್ನ ಗುಜರಾತ್ನಲ್ಲಿ ೫ ಭಯೋತ್ಪಾದಕರ ಬಂಧನ
ನ್ಯಾಯಾಧೀಶರ ಕುರ್ಚಿಯ ಮೇಲೆ ಮಾಟಮಂತ್ರ ಮಾಡಿದ ಆರೋಪದಡಿ ಮಹಿಳೆಯ ಬಂಧನ