
ಶಿಲ್ಲಾಂಗ (ಮೇಘಾಲಯ) – ರಾಜಧಾನಿ ಶಿಲ್ಲಾಂಗ್ ನ ಲೋವರ್ ಲುಂಪಾರಿಂಗ್ ಪ್ರದೇಶದಲ್ಲಿ ಖಾಸಿ ವಿದ್ಯಾರ್ಥಿ ಸಂಘಟನೆಯು 2026ರ ಏಪ್ರಿಲ್ 14 ರಂದು ಅಕ್ರಮವಾಗಿ ನಿರ್ಮಿಸಲಾಗಿದ್ದ ಮಸೀದಿಯನ್ನು ಬಂದ್ ಮಾಡಿದ್ದರಿಂದ ಉದ್ವಿಗ್ನತೆ ನಿರ್ಮಾಣವಾಗಿದೆ. ಅನೇಕ ನಾಗರಿಕರು ಸಂಘಟನೆಯ ಈ ಕ್ರಮವನ್ನು ಬೆಂಬಲಿಸುತ್ತಿದ್ದು, ಅಕ್ರಮ ನಿರ್ಮಾಣವನ್ನು ತೆರವುಗೊಳಿಸಿ ಶಾಂತಿಯುತ ಮತ್ತು ಕಾನೂನುಬದ್ಧ ಮಾರ್ಗದ ಮೂಲಕ ಪರಿಹಾರ ಕಂಡುಕೊಳ್ಳುವ ಪರವಾಗಿದ್ದಾರೆ.
ಮಸೀದಿಯ ನಿರ್ಮಾಣವನ್ನು ಸ್ಥಳೀಯ ಆಡಳಿತದ ಅನುಮತಿ ಪಡೆಯದೆಯೇ ಮಾಡಲಾಗಿತ್ತು ಎಂದು ವಿದ್ಯಾರ್ಥಿ ಸಂಘಟನೆ ಹೇಳಿದೆ. ಇದರ ಬಗ್ಗೆ ಸ್ಥಳೀಯ ಸಂಸ್ಥೆಗಳಿಗೂ ಮಾಹಿತಿ ಇರಲಿಲ್ಲ. ಈ ಭೂಮಿಯು ಮೂಲತಃ ಸ್ಮಶಾನದ ಉಸ್ತುವಾರಿ ನೋಡಿಕೊಳ್ಳುವ ಕಾವಲುಗಾರನ ವಾಸಕ್ಕಾಗಿ ನೀಡಲಾಗಿತ್ತು, ಅದರ ಮೇಲೆ ಅಕ್ರಮವಾಗಿ ಮಸೀದಿಯನ್ನು ನಿರ್ಮಿಸಲಾಗಿದೆ ಎಂದು ಸಂಘಟನೆಯು ದಾವೆ ಮಾಡಿದೆ.
ಆಡಳಿತದ ನೋಟಿಸ್ ನಂತರವೂ ಕ್ರಮ ಕೈಗೊಂಡಿಲ್ಲ!
ಸಂಘಟನೆಯ ಪ್ರಕಾರ, ಸ್ಥಳೀಯ ಆಡಳಿತವು ಈ ಕಟ್ಟಡವನ್ನು ತೆರವುಗೊಳಿಸಲು ನೋಟಿಸ್ ನೀಡಿದ್ದರೂ ಸಹ ಅದನ್ನು ತೆಗೆದುಹಾಕಿರಲಿಲ್ಲ. ತದನಂತರ ಅನಿವಾರ್ಯವಾಗಿ ಸಂಘಟನೆಯು ಮಧ್ಯಪ್ರವೇಶಿಸಿ ಮಸೀದಿಯನ್ನು ಬಂದ್ ಮಾಡಬೇಕಾಯಿತು. ಮಸೀದಿಯ ಇಮಾಮ್ ಗೆ (ಮಸೀದಿಯಲ್ಲಿ ಪ್ರಾರ್ಥನೆ ಮಾಡಿಸುವವರು) ತಕ್ಷಣವೇ ಜಾಗವನ್ನು ಖಾಲಿ ಮಾಡುವಂತೆ ಸಂಘಟನೆಯು ಸೂಚಿಸಿದೆ. ಇಮಾಮ್ ಅಲ್ಲಿ ವಾಸಿಸುವುದು ಅಯೋಗ್ಯವಾಗಿದೆ ಮತ್ತು ಆ ಸ್ಥಳದಲ್ಲಿ ಧಾರ್ಮಿಕ ಚಟುವಟಿಕೆಗಳನ್ನು ನಡೆಸಲು ಸಾಧ್ಯವಿಲ್ಲ ಎಂದು ಹೇಳಲಾಗಿದೆ.
ಮೇಘಾಲಯದ ಬುಡಕಟ್ಟು ಪ್ರದೇಶಗಳಿಗೆ ಅನ್ವಯವಾಗುವ ಕಾನೂನುಗಳು ಮತ್ತು ಸಂಪ್ರದಾಯಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂಬುದು ಸಂಘಟನೆಯ ಆಗ್ರಹವಾಗಿದೆ.
ಮಹಿಳೆಯ ಎದೆಗೆ ಸ್ಪರ್ಶಿಸುವುದು ಅತ್ಯಾಚಾರದ ಪ್ರಯತ್ನವಲ್ಲ! – ಉಚ್ಚ ನ್ಯಾಯಾಲಯ : Attempt to Rape
ಅಮರಕಂಟಕ (ಮಧ್ಯಪ್ರದೇಶ)ಇಲ್ಲಿನ ನರ್ಮದಾ ಉಗಮ ದೇವಸ್ಥಾನದ ಚಿನ್ನ ಮತ್ತು ಬೆಳ್ಳಿ ನಾಪತ್ತೆ! : Amarkantak Temple Donation Scam
ಬೆಂಗಳೂರಿನಲ್ಲಿ ದೇಶದ ಮೊದಲ ‘ಎಐ’ ವಿಶ್ವವಿದ್ಯಾಲಯ ಆರಂಭ ! : Karnataka AI University
ಗುಜರಾತ್ ನ ಪ್ರಸಿದ್ಧ ಶಕ್ತಿಪೀಠ ಅಂಬಾಜಿ ದೇವಸ್ಥಾನದಲ್ಲೂ ನೋಟು ಎಣಿಕೆಯ ಸಮಯದಲ್ಲಿ ೨ ತಿಂಗಳ ಹಿಂದೆ ಕಳ್ಳತನ ನಡೆದಿರುವುದು ಬಹಿರಂಗ ! : Ambaji Temple Donation Theft
ಸಮಾಜವಾದಿ ಪಕ್ಷದ ಅಧಿಕಾರಾವಧಿಯಲ್ಲಿ ‘ವಕ್ಫ್ ಮಂಡಳಿ’ಯ ಶತಕೋಟಿ ರೂಪಾಯಿಗಳ ಹಗರಣ! – ಮೌಲಾನಾ ಶಹಾಬುದ್ದೀನ ರಿಜ್ವಿ ಬರೇಲವಿ
“ನಾನು ಛತ್ರಪತಿ ಶಿವಾಜಿ ಮಹಾರಾಜರ ಅನುಯಾಯಿಯಾಗಿದ್ದು ರಣರಂಗ ಬಿಟ್ಟು ಓಡಿಹೋಗುವವನಲ್ಲ!”