ಮಧ್ಯಪ್ರದೇಶ ಹೈಕೋರ್ಟ್‌ನಲ್ಲಿ ಧಾರ ಭೋಜಶಾಲೆ ಪ್ರಕರಣದ ದೈನಂದಿನ ವಿಚಾರಣೆ ಆರಂಭ

ಇಂದೋರ್ (ಮಧ್ಯಪ್ರದೇಶ) – ರಾಜ್ಯ ಹೈಕೋರ್ಟ್‌ನ ಇಂದೋರ್ ಪೀಠದಲ್ಲಿ ಧಾರ ಭೋಜಶಾಲೆ ಪ್ರಕರಣದ ದೈನಂದಿನ ವಿಚಾರಣೆ ಆರಂಭವಾಗಿದೆ. ಸುಪ್ರೀಂ ಕೋರ್ಟ್ ಈ ಪ್ರಕರಣವನ್ನು ವಿಚಾರಣೆಗಾಗಿ ಇಂದೋರ್ ಪೀಠಕ್ಕೆ ಕಳುಹಿಸಿದ ನಂತರ ಎಲ್ಲಾ ಕಕ್ಷಿದಾರರು ವಾದ ಮಂಡಿಸಲು ಪ್ರಾರಂಭಿಸಿದ್ದಾರೆ. ಹಿಂದೂ ಪಕ್ಷದ ಪರವಾಗಿ ವಕೀಲ ವಿಷ್ಣು ಶಂಕರ್ ಜೈನ್ ಅವರು ನ್ಯಾಯಾಲಯದ ಮುಂದೆ ಭೋಜಶಾಲೆಯ ಹಿಂದೂ ಕಾಲಘಟ್ಟದ ಇತಿಹಾಸ ಮತ್ತು ಪರಂಪರೆಯ ಬಗ್ಗೆ ವಾದ ಮಂಡಿಸಿದರು. ಅವರು ೧೦ ಮತ್ತು ೧೧ ನೇ ಶತಮಾನಗಳನ್ನು ಉಲ್ಲೇಖಿಸುತ್ತಾ ಸಂಸ್ಕೃತದಲ್ಲಿನ ಐತಿಹಾಸಿಕ ಉಲ್ಲೇಖಗಳನ್ನು ಮಂಡಿಸಿದರು, ಜೊತೆಗೆ ಶ್ರೀರಾಮಮಂದಿರ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿದ ಆದೇಶವನ್ನೂ ಉಲ್ಲೇಖಿಸಲಾಯಿತು. ಈ ಆಸ್ತಿ ವಕ್ಫ್ ಬೋರ್ಡ್‌ಗೆ ಸೇರಿದ್ದಲ್ಲ ಎಂದು ಹೇಳಿದ ಅವರು, ವಕ್ಫ್‌ಗೆ ಸಂಬಂಧಿಸಿದ ೨೦೨೫ ರ ಹೊಸ ಆದೇಶವನ್ನೂ ಉಲ್ಲೇಖಿಸಿದರು.
೧. ಹಿಂದೂ ಪಕ್ಷವು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ ಸಮೀಕ್ಷಾ ವರದಿಯನ್ನು ಉಲ್ಲೇಖಿಸಿ, ಪ್ರಾಚೀನ ಕಾಲದಿಂದಲೂ ಭೋಜಶಾಲೆ ಹಿಂದೂಗಳ ಶ್ರದ್ಧಾಕೇಂದ್ರವಾಗಿದೆ ಎಂದು ಹೇಳಿದೆ. ಸಮೀಕ್ಷೆಯ ಆವಿಷ್ಕಾರಗಳನ್ನು ಗಂಭೀರವಾಗಿ ಪರಿಗಣಿಸುವ ಅಗತ್ಯವಿದೆ ಎಂದು ಹೇಳಲಾಗಿದೆ.
೨. ವಿಚಾರಣೆಯ ಸಂದರ್ಭದಲ್ಲಿ ಭೋಜ ರಾಜವಂಶದ ಉಲ್ಲೇಖವನ್ನೂ ಮಾಡಲಾಯಿತು, ಹಾಗೆಯೇ ಇಸ್ಲಾಮಿಕ್ ಆಕ್ರಮಣಕೋರರು ಮಾಡಿದ ಹಾನಿ ಮತ್ತು ನಂತರ ಬ್ರಿಟಿಷ್ ಕಾಲದಲ್ಲಿ ಆದ ಬದಲಾವಣೆಗಳನ್ನೂ ಉಲ್ಲೇಖಿಸಲಾಯಿತು. ಭೋಜಶಾಲೆಯ ಐತಿಹಾಸಿಕ ಮತ್ತು ಪುರಾತತ್ವ ಮಹತ್ವವನ್ನು ಒತ್ತಿಹೇಳುತ್ತಾ ವಿವಿಧ ಪುರಾವೆಗಳನ್ನು ಸಲ್ಲಿಸಲಾಯಿತು. ಈ ಆವರಣವನ್ನು ೧೦ ಮತ್ತು ೧೧ ನೇ ಶತಮಾನದಿಂದ ‘ಸಂರಕ್ಷಿತ ಪರಂಪರೆ’ ಎಂದು ಗುರುತಿಸಲಾಗುತ್ತಿದೆ ಎಂದೂ ಹೇಳಲಾಯಿತು.
೩. ವಕೀಲ ವಿಷ್ಣು ಶಂಕರ್ ಜೈನ್ ಅವರು ೧೯೩೫ ರ ಫಲಕವೊಂದನ್ನು ಉಲ್ಲೇಖಿಸಿ, ಆ ಕಾಲದ ನಂತರ ಆವರಣದಲ್ಲಿ ವಿವಾದಗಳು ಸೃಷ್ಟಿಯಾದವು ಮತ್ತು ಈ ಆವರಣವನ್ನು ಅಕ್ರಮವಾಗಿ ವಶಪಡಿಸಿಕೊಳ್ಳಲು ಪ್ರಾರಂಭಿಸಲಾಯಿತು ಎಂದು ಹೇಳಿದರು. ಭಾರತೀಯ ಪುರಾತತ್ವ ಇಲಾಖೆಯ ವರದಿ, ಕಂಬಗಳ ಮೇಲಿನ ಕೆತ್ತನೆಗಳು ಮತ್ತು ಐತಿಹಾಸಿಕ ದಾಖಲೆಗಳ ಆಧಾರದ ಮೇಲೆ ಅವರು ನ್ಯಾಯಾಲಯದ ಮುಂದೆ ತಮ್ಮ ವಾದವನ್ನು ಮಂಡಿಸಿದರು.
ಏನಿದು ಪ್ರಕರಣ ?
ಧಾರದ ಭೋಜಶಾಲೆಯಲ್ಲಿ ಶ್ರೀ ಸರಸ್ವತಿದೇವಿಯ ಮಂದಿರವಿತ್ತು. ಮುಸ್ಲಿಂ ಆಕ್ರಮಣಕೋರರು ಅದನ್ನು ಕೆಡವಿ ಅಲ್ಲಿ ಅತಿಕ್ರಮಣ ಮಾಡಿದರು. ಈ ಸ್ಥಳ ೧೧ ನೇ ಶತಮಾನದ ಕಮಾಲ್ ಮೌಲಾ ಮಸೀದಿ ಎಂದು ಮುಸ್ಲಿಂ ಪಕ್ಷದ ವಾದವಾಗಿದೆ. ಪ್ರಸ್ತುತ ಈ ಆವರಣವು ಭಾರತೀಯ ಪುರಾತತ್ವ ಇಲಾಖೆಯ (ASI) ವ್ಯಾಪ್ತಿಯಲ್ಲಿದೆ. ನ್ಯಾಯಾಲಯದ ಆದೇಶದಂತೆ ಇಲ್ಲಿ ಉತ್ಖನನ ಮತ್ತು ಸಮೀಕ್ಷೆ ನಡೆಸಲಾಗಿತ್ತು. ಈ ವೇಳೆ ವಿವಿಧ ಮೂರ್ತಿಗಳು ಪತ್ತೆಯಾಗಿವೆ ಎಂದು ಹಿಂದೂ ಕಕ್ಷಿದಾರರು ಮಾಹಿತಿ ನೀಡಿದ್ದಾರೆ.
ಸಮಾಜವಾದಿ ಪಕ್ಷದ ಅಧಿಕಾರಾವಧಿಯಲ್ಲಿ ‘ವಕ್ಫ್ ಮಂಡಳಿ’ಯ ಶತಕೋಟಿ ರೂಪಾಯಿಗಳ ಹಗರಣ! – ಮೌಲಾನಾ ಶಹಾಬುದ್ದೀನ ರಿಜ್ವಿ ಬರೇಲವಿ
“ನಾನು ಛತ್ರಪತಿ ಶಿವಾಜಿ ಮಹಾರಾಜರ ಅನುಯಾಯಿಯಾಗಿದ್ದು ರಣರಂಗ ಬಿಟ್ಟು ಓಡಿಹೋಗುವವನಲ್ಲ!”
ಭೋಜಶಾಲೆಯ ಪ್ರಕರಣದಲ್ಲಿ ಮಧ್ಯಪ್ರದೇಶ ಉಚ್ಚ ನ್ಯಾಯಾಲಯದ ತೀರ್ಪಿಗೆ ತಡೆ ನೀಡಲು ಸರ್ವೋಚ್ಚ ನ್ಯಾಯಾಲಯದ ನಿರಾಕರಣೆ
ಮೇವು ಹಗರಣ ಪ್ರಕರಣದಲ್ಲಿ ಲಾಲು ಪ್ರಸಾದ್ ಯಾದವ್ ಅವರಿಗೆ ಮಂಜೂರಾದ ಜಾಮೀನು ರದ್ದುಗೊಳಿಸಲು ಸುಪ್ರೀಂ ಕೋರ್ಟ್ ನ ನಿರಾಕರಣೆ
ಭಗವಾನ್ ಜಗನ್ನಾಥರ ರಥಯಾತ್ರೆಗೂ ಮುನ್ನ ಗುಜರಾತ್ನಲ್ಲಿ ೫ ಭಯೋತ್ಪಾದಕರ ಬಂಧನ
ಬ್ರಿಟನ್: ದೇವಸ್ಥಾನದ ಜಾಗ ಮುಸಲ್ಮಾನರಿಗೆ ಹರಾಜು !