
ಜಬಲ್ಪುರ (ಮಧ್ಯಪ್ರದೇಶ) – ಒಬ್ಬ ಮುಸಲ್ಮಾನ್ ಪುರುಷನ ಮೊದಲ ಮದುವೆಯು ಕಾನೂನುಬದ್ಧವಾಗಿದ್ದರೂ ಸಹ, ಅವನು ಎರಡನೇ ಮದುವೆಯಾದರೆ ಭಾರತೀಯ ದಂಡ ಸಂಹಿತೆಯ ಕಲಂ ೪೯೪ ರ ಅಡಿಯಲ್ಲಿ ದ್ವಿಪತ್ನಿತ್ವದ ಅಪರಾಧ ಅನ್ವಯಿಸುವುದಿಲ್ಲ. ಮೊದಲ ಮದುವೆಯು ಚಾಲ್ತಿಯಲ್ಲಿರುವಾಗ ಎರಡನೇ ಮದುವೆಯು ಕಾನೂನುಬದ್ಧವಾಗಿ ಅಮಾನ್ಯ ಎಂದು ಪರಿಗಣಿಸಲ್ಪಟ್ಟಾಗ ಮಾತ್ರ ಕಲಂ ೪೯೪ ಅನ್ವಯಿಸುತ್ತದೆ; ಆದರೆ ‘ಮುಸ್ಲಿಂ ವೈಯಕ್ತಿಕ ಕಾನೂನಿನ’ ಪ್ರಕಾರ ಪುರುಷನಿಗೆ ಬಹುಪತ್ನಿತ್ವಕ್ಕೆ ಅನುಮತಿ ಇರುವುದರಿಂದ ಎರಡನೇ ಮದುವೆಯು ಅಕ್ರಮವಾಗುವುದಿಲ್ಲ. ಆದ್ದರಿಂದ ಈ ಕಲಂ ಅಡಿಯಲ್ಲಿ ಅಪರಾಧ ದಾಖಲಿಸಲು ಸಾಧ್ಯವಿಲ್ಲ,ಎಂದು ಮಧ್ಯಪ್ರದೇಶ ಉಚ್ಚ ನ್ಯಾಯಾಲಯವು ತೀರ್ಪು ನೀಡಿದೆ.
ಈ ಪ್ರಕರಣದಲ್ಲಿ ನ್ಯಾಯಾಲಯವು ಅರ್ಜಿದಾರನ ಅರ್ಜಿಯನ್ನು ಸ್ವೀಕರಿಸಿತು ಮತ್ತು ಆತನ ಮೇಲಿದ್ದ ದ್ವಿಪತ್ನಿತ್ವದ ಆರೋಪವನ್ನು ಸಂಪೂರ್ಣವಾಗಿ ರದ್ದುಗೊಳಿಸಿತು; ಆದರೆ ಭಾರತೀಯ ದಂಡ ಸಂಹಿತೆಯ ಕಲಂ ೪೯೮-ಎ (ಪತ್ನಿಯ ಮೇಲೆ ದೌರ್ಜನ್ಯ), ೩೪೨ (ಅಕ್ರಮ ಬಂಧನ), ೩೨೩ (ಗಾಯಗೊಳಿಸುವುದು) ಮತ್ತು ೫೦೬ (ಭಾಗ ೨) (ಬೆದರಿಕೆ) ಅಡಿಯಲ್ಲಿ ದಾಖಲಾದ ಇತರ ಅಪರಾಧಗಳನ್ನು ಹಾಗೆಯೇ ಉಳಿಸಿದೆ. ಈ ಪ್ರಕರಣದ ವಿಚಾರಣೆಯು ಕೆಳಹಂತದ ನ್ಯಾಯಾಲಯದಲ್ಲಿ ಮುಂದುವರಿಯಲಿದೆ.
ಏನಿದು ಪ್ರಕರಣ?
೨೦೦೨ ರಲ್ಲಿ ಮದುವೆಯಾದ ನಂತರ ಮಕ್ಕಳಾಗಿಲ್ಲ ಎಂಬ ಕಾರಣಕ್ಕೆ ಪತಿಯು ತನ್ನ ಮೇಲೆ ದೈಹಿಕ ಮತ್ತು ಮಾನಸಿಕ ದೌರ್ಜನ್ಯ ಎಸಗಿದ್ದಾನೆ ಎಂದು ಅರ್ಜಿದಾರನ ಪತ್ನಿ ಆರೋಪಿಸಿದ್ದಳು. ಅಲ್ಲದೆ ೨೦೨೨ ರಲ್ಲಿ ಆತ ಎರಡನೇ ಮದುವೆಯಾಗಿದ್ದು, ನನ್ನ ಮೇಲೆ ‘ಖುಲಾ’ (ಮುಸಲ್ಮಾನ್ ಮಹಿಳಯಿಂದ ನೀಡುವ ವಿಚ್ಛೇದನ) ಮೂಲಕ ವಿಚ್ಛೇದನ ನೀಡುವಂತೆ ಒತ್ತಡ ಹೇರಿದ್ದನು ಎಂದು ನೊಂದ ಮಹಿಳೆ ದೂರಿನಲ್ಲಿ ತಿಳಿಸಿದ್ದಳು.
ಸಂಪಾದಕೀಯ ನಿಲುವುಇದರಿಂದಾಗಿಯೇ ದೇಶದಲ್ಲಿ ಸಮಾನ ನಾಗರಿಕ ಸಂಹಿತೆ ಜಾರಿಗೆ ತರುವ ಅಗತ್ಯವಿದೆ! |
ಸಮಾಜವಾದಿ ಪಕ್ಷದ ಅಧಿಕಾರಾವಧಿಯಲ್ಲಿ ‘ವಕ್ಫ್ ಮಂಡಳಿ’ಯ ಶತಕೋಟಿ ರೂಪಾಯಿಗಳ ಹಗರಣ! – ಮೌಲಾನಾ ಶಹಾಬುದ್ದೀನ ರಿಜ್ವಿ ಬರೇಲವಿ
“ನಾನು ಛತ್ರಪತಿ ಶಿವಾಜಿ ಮಹಾರಾಜರ ಅನುಯಾಯಿಯಾಗಿದ್ದು ರಣರಂಗ ಬಿಟ್ಟು ಓಡಿಹೋಗುವವನಲ್ಲ!”
ಭೋಜಶಾಲೆಯ ಪ್ರಕರಣದಲ್ಲಿ ಮಧ್ಯಪ್ರದೇಶ ಉಚ್ಚ ನ್ಯಾಯಾಲಯದ ತೀರ್ಪಿಗೆ ತಡೆ ನೀಡಲು ಸರ್ವೋಚ್ಚ ನ್ಯಾಯಾಲಯದ ನಿರಾಕರಣೆ
ಮೇವು ಹಗರಣ ಪ್ರಕರಣದಲ್ಲಿ ಲಾಲು ಪ್ರಸಾದ್ ಯಾದವ್ ಅವರಿಗೆ ಮಂಜೂರಾದ ಜಾಮೀನು ರದ್ದುಗೊಳಿಸಲು ಸುಪ್ರೀಂ ಕೋರ್ಟ್ ನ ನಿರಾಕರಣೆ
ಭಗವಾನ್ ಜಗನ್ನಾಥರ ರಥಯಾತ್ರೆಗೂ ಮುನ್ನ ಗುಜರಾತ್ನಲ್ಲಿ ೫ ಭಯೋತ್ಪಾದಕರ ಬಂಧನ
ಬ್ರಿಟನ್: ದೇವಸ್ಥಾನದ ಜಾಗ ಮುಸಲ್ಮಾನರಿಗೆ ಹರಾಜು !