|

ಮುಂಬಯಿ – ರಾಜ್ಯ ಸಚಿವ ಮಂಗಳಪ್ರಭಾತ್ ಲೋಧಾ ಅವರು ಜೈನ ಸಮುದಾಯಕ್ಕೆ ‘ಅಲ್ಪಸಂಖ್ಯಾತ ಸ್ಥಾನಮಾನವನ್ನು ತೊರೆದು ಹಿಂದೂಗಳಾಗಿ ಮುಖ್ಯವಾಹಿನಿಗೆ ಬನ್ನಿ’ ಎಂದು ಕರೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ‘ಜೈನ ಅಲ್ಪಸಂಖ್ಯಾತ ಆರ್ಥಿಕ ಅಭಿವೃದ್ಧಿ ಮಂಡಳಿ’ಯ ಅಧ್ಯಕ್ಷರಾದ ಲಲಿತ್ ಗಾಂಧಿ ಅವರು ಈ ಹೇಳಿಕೆಯನ್ನು ಖಂಡಿಸಿದ್ದಾರೆ. ಅವರು, ‘ಜೈನ ಸಮಾಜದ ಯಾರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳದೆ ಲೋಧಾ ಅವರು ಈ ಹೇಳಿಕೆ ನೀಡಿದ್ದಾರೆ. ಅವರ ಈ ಹೇಳಿಕೆಯು ಅಜ್ಞಾನದಿಂದ ಕೂಡಿದೆ ಅಥವಾ ಪೂರ್ವನಿಯೋಜಿತ ನಿಲುವಿನ ಒಂದು ಭಾಗವಾಗಿದೆ.’ ಎಂದು ಹೇಳಿದರು.
ಲಲಿತ್ ಗಾಂಧಿ ಅವರು ಮಾತು ಮುಂದುವರೆಸಿ,
೧. ಜೈನ ಧರ್ಮವು ಭಾರತದ ಒಂದು ಸ್ವತಂತ್ರ ಮತ್ತು ಪ್ರಾಚೀನ ಧರ್ಮವಾಗಿದೆ. ಇದು ತನ್ನದೇ ಆದ ತೀರ್ಥಂಕರರನ್ನು, ತನ್ನದೇ ಆದ ತತ್ವಮೀಮಾಂಸೆಯನ್ನು ಮತ್ತು ಮೋಕ್ಷ ಪರಂಪರೆಯನ್ನು ಹೊಂದಿದೆ. ನಾವು ಹಿಂದೂ ಸಂಸ್ಕೃತಿಯನ್ನು ಪಾಲಿಸುವವರಾಗಿದ್ದೇವೆ; ಆದರೆ ಜೈನ ಧರ್ಮವು ಹಿಂದೂ ಧರ್ಮದ ಶಾಖೆ ಅಥವಾ ಉಪಶಾಖೆಯಲ್ಲ. ಧರ್ಮ ಮತ್ತು ಸಂಸ್ಕೃತಿ ಇವೆರಡೂ ವಿಭಿನ್ನವಾದ ವಿಷಯಗಳಾಗಿವೆ. ಜೈನ ಧರ್ಮೀಯರಿಗೆ ಸಿಕ್ಕಿರುವ ಅಲ್ಪಸಂಖ್ಯಾತ ಸ್ಥಾನಮಾನವು ಯಾವುದೇ ಭಿಕ್ಷೆಯಲ್ಲ, ಬದಲಿಗೆ ಅದು ನಮ್ಮ ಸಾಂವಿಧಾನಿಕ ಹಕ್ಕಾಗಿದೆ.
೨. ಅಲ್ಪಸಂಖ್ಯಾತ ಸ್ಥಾನಮಾನವು ನಮ್ಮ ಪ್ರತ್ಯೇಕ ಗುರುತಿಗೆ ಸಂದಿರುವ ಗೌರವವಾಗಿದೆ. ಈ ಸ್ಥಾನಮಾನವನ್ನು ಬಿಟ್ಟುಕೊಡುವುದು ಎಂದರೆ ನಮ್ಮ ಸ್ವಂತ ಅಸ್ತಿತ್ವವನ್ನೇ ನಿರಾಕರಿಸಿದಂತೆ. ಇಂತಹ ಯಾವುದೇ ವಿಚಾರಧಾರೆಯನ್ನು ನಾವು ಎಲ್ಲಾ ಹಂತಗಳಲ್ಲೂ ತೀವ್ರವಾಗಿ ವಿರೋಧಿಸುತ್ತೇವೆ. ಈ ಸಾಂವಿಧಾನಿಕ ಹಕ್ಕನ್ನು ಕಸಿದುಕೊಳ್ಳುವ ಪ್ರಯತ್ನವನ್ನು ಸಂಪೂರ್ಣ ಶಕ್ತಿಯಿಂದ ವಿಫಲಗೊಳಿಸಲಾಗುವುದು. ಈ ಸ್ಥಾನಮಾನವು ಜೈನ ಸಮಾಜದ ಐಕ್ಯತೆಗೆ ಅತ್ಯಂತ ಪ್ರಮುಖವಾಗಿದೆ. ಜೈನ ಸಮಾಜವು ಇನ್ನು ಮುಂದೆ ಸುಮ್ಮನೆ ಕೂರುವುದಿಲ್ಲ ಎಂಬುದನ್ನು ಲೋಧಾ ಅವರು ನೆನಪಿನಲ್ಲಿಟ್ಟುಕೊಳ್ಳಬೇಕು, ಎಂದು ಹೇಳಿದರು.
ಮಹಿಳೆಯ ಎದೆಗೆ ಸ್ಪರ್ಶಿಸುವುದು ಅತ್ಯಾಚಾರದ ಪ್ರಯತ್ನವಲ್ಲ! – ಉಚ್ಚ ನ್ಯಾಯಾಲಯ : Attempt to Rape
ಅಮರಕಂಟಕ (ಮಧ್ಯಪ್ರದೇಶ)ಇಲ್ಲಿನ ನರ್ಮದಾ ಉಗಮ ದೇವಸ್ಥಾನದ ಚಿನ್ನ ಮತ್ತು ಬೆಳ್ಳಿ ನಾಪತ್ತೆ! : Amarkantak Temple Donation Scam
ಬೆಂಗಳೂರಿನಲ್ಲಿ ದೇಶದ ಮೊದಲ ‘ಎಐ’ ವಿಶ್ವವಿದ್ಯಾಲಯ ಆರಂಭ ! : Karnataka AI University
ಗುಜರಾತ್ ನ ಪ್ರಸಿದ್ಧ ಶಕ್ತಿಪೀಠ ಅಂಬಾಜಿ ದೇವಸ್ಥಾನದಲ್ಲೂ ನೋಟು ಎಣಿಕೆಯ ಸಮಯದಲ್ಲಿ ೨ ತಿಂಗಳ ಹಿಂದೆ ಕಳ್ಳತನ ನಡೆದಿರುವುದು ಬಹಿರಂಗ ! : Ambaji Temple Donation Theft
ಸಮಾಜವಾದಿ ಪಕ್ಷದ ಅಧಿಕಾರಾವಧಿಯಲ್ಲಿ ‘ವಕ್ಫ್ ಮಂಡಳಿ’ಯ ಶತಕೋಟಿ ರೂಪಾಯಿಗಳ ಹಗರಣ! – ಮೌಲಾನಾ ಶಹಾಬುದ್ದೀನ ರಿಜ್ವಿ ಬರೇಲವಿ
“ನಾನು ಛತ್ರಪತಿ ಶಿವಾಜಿ ಮಹಾರಾಜರ ಅನುಯಾಯಿಯಾಗಿದ್ದು ರಣರಂಗ ಬಿಟ್ಟು ಓಡಿಹೋಗುವವನಲ್ಲ!”