ಅಮೆರಿಕದ ‘ಕಾಂಗ್ರೆಸ್ ರಿಸರ್ಚ್ ಸರ್ವಿಸ್’ ವರದಿ !

ನವ ದೆಹಲಿ – ಪಾಕಿಸ್ತಾನವು ಇಂದಿಗೂ ಭಾರತದ ವಿರುದ್ಧ ಸಕ್ರಿಯವಾಗಿರುವ ಭಯೋತ್ಪಾದಕ ಗುಂಪುಗಳ ಸುರಕ್ಷಿತ ಕೇಂದ್ರವಾಗಿ ಮುಂದುವರಿದಿದೆ. ಅಮೆರಿಕದ ‘ಕಾಂಗ್ರೆಸ್ ರಿಸರ್ಚ್ ಸರ್ವಿಸ್’ ಇತ್ತೀಚೆಗೆ ಪ್ರಕಟಿಸಿದ ವರದಿಯಲ್ಲಿ ಈ ಮಾಹಿತಿ ನೀಡಲಾಗಿದೆ. ಈ ವರದಿಯಲ್ಲಿ, ಪಾಕಿಸ್ತಾನದಲ್ಲಿ ಅನೇಕ ಪ್ರಮುಖ ಭಯೋತ್ಪಾದಕ ಸಂಘಟನೆಗಳು ಸಕ್ರಿಯವಾಗಿದ್ದು, ಅವುಗಳ ಮುಖ್ಯ ಗುರಿ ಜಮ್ಮು-ಕಾಶ್ಮೀರ ಸೇರಿದಂತೆ ಇಡೀ ಭಾರತವಾಗಿದೆ ಎಂದು ಹೇಳಲಾಗಿದೆ. ಜಮ್ಮು-ಕಾಶ್ಮೀರವನ್ನು ಗುರಿಯಾಗಿಸಿಕೊಂಡಿರುವ ಈ ಸಂಘಟನೆಗಳು ಪಾಕಿಸ್ತಾನದ ಭೂಮಿಯಿಂದ ಯಾವುದೇ ಅಡೆತಡೆಯಿಲ್ಲದೆ ತಮ್ಮ ಸಂಚುಗಳನ್ನು ರೂಪಿಸುತ್ತಿವೆ.
೧. ಅನೇಕ ಗುಂಪುಗಳನ್ನು ಅಮೆರಿಕವು ಈಗಾಗಲೇ ‘ವಿದೇಶಿ ಭಯೋತ್ಪಾದಕ ಸಂಘಟನೆ’ ಎಂದು ಘೋಷಿಸಿದೆ !
ಮಾರ್ಚ್ ೨೫ ರಂದು ಪ್ರಕಟವಾದ ಈ ವರದಿಯಲ್ಲಿ ೧೫ ಭಯೋತ್ಪಾದಕ ಸಂಘಟನೆಗಳ ವಿವರವಾದ ವರ್ಣನೆ ನೀಡಲಾಗಿದೆ. ಇವುಗಳಲ್ಲಿ ಅನೇಕ ಗುಂಪುಗಳನ್ನು ಅಮೆರಿಕವು ‘ವಿದೇಶಿ ಭಯೋತ್ಪಾದಕ ಸಂಘಟನೆ’ ಎಂದು ಘೋಷಿಸಿದೆ. ಇದರಲ್ಲಿ ಮುಖ್ಯವಾಗಿ ಲಷ್ಕರ್-ಎ-ತೊಯ್ಬಾ, ಜೈಶ್-ಎ-ಮಹಮ್ಮದ್, ಹರ್ಕತ್-ಉಲ್-ಜಿಹಾದ್-ಇಸ್ಲಾಮಿ, ಹರ್ಕತ್-ಉಲ್-ಮುಜಾಹಿದ್ದೀನ್ ಮತ್ತು ಹಿಜ್ಬುಲ್ ಮುಜಾಹಿದ್ದೀನ್ ಒಳಗೊಂಡಿವೆ.
೨. ಪಾಕಿಸ್ತಾನದ ಮದರಸಾಗಳಿಂದ ಹಿಂಸಾತ್ಮಕ ಕಟ್ಟರತೆಗೆ ಪ್ರೋತ್ಸಾಹ !
ವರದಿಯ ಪ್ರಕಾರ, ಪಾಕಿಸ್ತಾನವು ಈ ಭಯೋತ್ಪಾದಕ ಸಂಘಟನೆಗಳನ್ನು ನಿರ್ಮೂಲನೆ ಮಾಡುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ. ಅಮೆರಿಕದ ವಿದೇಶಾಂಗ ಇಲಾಖೆಯು, ಪಾಕಿಸ್ತಾನವು ೨೦೨೩ ರಲ್ಲಿ ಕೆಲವು ಕ್ರಮಗಳನ್ನು ಕೈಗೊಂಡಿದ್ದರೂ ಸಹ, ಅಲ್ಲಿನ ಮದರಸಾಗಳಲ್ಲಿ ಇಂದಿಗೂ ಹಿಂಸಾತ್ಮಕ ಕಟ್ಟರತೆಯನ್ನು ಪ್ರಚೋದಿಸುವಂತಹ ವಿಚಾರಧಾರೆಗಳನ್ನೇ ಬೋಧಿಸಲಾಗುತ್ತಿದೆ ಎಂದು ಹೇಳಿದೆ.
೩. ದ್ವಿಮುಖ ನೀತಿಯ ಪಾಕಿಸ್ತಾನ ! – ದಕ್ಷಿಣ ಏಷ್ಯಾ ತಜ್ಞ ಕೆ. ಅಲೆನ್ ಕ್ರೋನ್ ಸ್ಟಾಡ್
ದಕ್ಷಿಣ ಏಷ್ಯಾ ತಜ್ಞ ಕೆ. ಅಲೆನ್ ಕ್ರೋನ್ ಸ್ಟಾಡ್ ಸಿದ್ಧಪಡಿಸಿದ ಈ ವರದಿಯಲ್ಲಿ ಪಾಕಿಸ್ತಾನದ ದ್ವಿಮುಖ ಸ್ವರೂಪವನ್ನು ಬಹಿರಂಗಪಡಿಸಿದೆ. ಒಂದೆಡೆ ಪಾಕಿಸ್ತಾನವು ತನ್ನ ದೇಶದ ಆಂತರಿಕ ಹಿಂಸಾಚಾರದಿಂದ (ಬಲೂಚಿಸ್ತಾನ ಮತ್ತು ಖೈಬರ್ ಪಖ್ತುನ್ಖ್ವಾದಲ್ಲಿನ ಹದಗೆಟ್ಟ ಪರಿಸ್ಥಿತಿ) ಸಂಕಷ್ಟಕ್ಕೀಡಾಗಿದ್ದರೆ, ಇನ್ನೊಂದೆಡೆ ಭಾರತವನ್ನು ಗುರಿಯಾಗಿಸುವ ಭಯೋತ್ಪಾದಕ ಸಂಘಟನೆಗಳಿಗೆ ಆಶ್ರಯ ನೀಡುತ್ತಿದೆ.
ಸಂಪಾದಕೀಯ ನಿಲುವುಅಮೆರಿಕದಿಂದ ಇಂತಹ ವರದಿಗಳು ಪ್ರಕಟವಾಗುತ್ತಿವೆ ಮತ್ತು ಅವರದ್ದೇ ರಾಷ್ಟ್ರದ ಅಧ್ಯಕ್ಷರು ಇಂತಹ ದೇಶವನ್ನು ಮಡಿಲಲ್ಲಿ ಕೂರಿಸಿಕೊಂಡು ಭಾರತಕ್ಕೆ ತೊಂದರೆ ನೀಡುತ್ತಿದ್ದಾರೆ ! |
ಸಮಾಜವಾದಿ ಪಕ್ಷದ ಅಧಿಕಾರಾವಧಿಯಲ್ಲಿ ‘ವಕ್ಫ್ ಮಂಡಳಿ’ಯ ಶತಕೋಟಿ ರೂಪಾಯಿಗಳ ಹಗರಣ! – ಮೌಲಾನಾ ಶಹಾಬುದ್ದೀನ ರಿಜ್ವಿ ಬರೇಲವಿ
“ನಾನು ಛತ್ರಪತಿ ಶಿವಾಜಿ ಮಹಾರಾಜರ ಅನುಯಾಯಿಯಾಗಿದ್ದು ರಣರಂಗ ಬಿಟ್ಟು ಓಡಿಹೋಗುವವನಲ್ಲ!”
ಭೋಜಶಾಲೆಯ ಪ್ರಕರಣದಲ್ಲಿ ಮಧ್ಯಪ್ರದೇಶ ಉಚ್ಚ ನ್ಯಾಯಾಲಯದ ತೀರ್ಪಿಗೆ ತಡೆ ನೀಡಲು ಸರ್ವೋಚ್ಚ ನ್ಯಾಯಾಲಯದ ನಿರಾಕರಣೆ
ಮೇವು ಹಗರಣ ಪ್ರಕರಣದಲ್ಲಿ ಲಾಲು ಪ್ರಸಾದ್ ಯಾದವ್ ಅವರಿಗೆ ಮಂಜೂರಾದ ಜಾಮೀನು ರದ್ದುಗೊಳಿಸಲು ಸುಪ್ರೀಂ ಕೋರ್ಟ್ ನ ನಿರಾಕರಣೆ
ಭಗವಾನ್ ಜಗನ್ನಾಥರ ರಥಯಾತ್ರೆಗೂ ಮುನ್ನ ಗುಜರಾತ್ನಲ್ಲಿ ೫ ಭಯೋತ್ಪಾದಕರ ಬಂಧನ
ನ್ಯಾಯಾಧೀಶರ ಕುರ್ಚಿಯ ಮೇಲೆ ಮಾಟಮಂತ್ರ ಮಾಡಿದ ಆರೋಪದಡಿ ಮಹಿಳೆಯ ಬಂಧನ