ಮೌಲಾನಾ (ಇಸ್ಲಾಮಿನ ಧಾರ್ಮಿಕ ಮುಖಂಡ) ಸೇರಿದಂತೆ ೧೨ ಜನರ ವಿರುದ್ಧ ಪ್ರಕರಣ ದಾಖಲು !

ಅಹಿಲ್ಯಾನಗರ – ಶ್ರೀರಾಮಪುರ ನಗರದ ಗೊಂದವಣಿ ಪ್ರದೇಶದಿಂದ ಶ್ರೀರಾಮ ಮಂದಿರದತ್ತ ಹೊರಟಿದ್ದ ಭವ್ಯ ಶೋಭಾಯಾತ್ರೆಯ ಮೇಲೆ ಏಕಾಏಕಿ ಕಲ್ಲು ತೂರಾಟ ನಡೆಸಲಾಗಿದೆ. ಸೈಯದ್ ಬಾಬಾ ಚೌಕ್‌ನಲ್ಲಿರುವ ದರ್ಗಾ (ಮುಸ್ಲಿಮರ ಕಥಿತ ಸಿದ್ಧಪುರುಷರ ಸಮಾಧಿ ಸ್ಥಳ)ದ ಬಳಿ ಈ ಘಟನೆ ನಡೆದಿದೆ. ಈ ಘಟನೆಯಲ್ಲಿ ಇಬ್ಬರು ಗಾಯಗೊಂಡಿದ್ದು, ಒಬ್ಬರಿಗೆ ಗಂಭೀರ ಗಾಯಗಳಾಗಿವೆ. ಗಾಯಗೊಂಡ ಓರ್ವ ವ್ಯಕ್ತಿಯ ಒಂದು ಕಣ್ಣು ಶಾಶ್ವತವಾಗಿ ಹಾನಿಗೊಳಗಾಗಿದೆ. ಪೊಲೀಸರು ತಕ್ಷಣ ಧಾವಿಸಿ ಪರಿಸ್ಥಿತಿಯನ್ನು ಹತೋಟಿಗೆ ತಂದಿದ್ದಾರೆ. ಸದ್ಯ ಶ್ರೀರಾಮಪುರದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದೆ.
ಈ ಸಂಬಂಧ ಸುಯೋಗ್ ಝಿರಾಂಗೆ ಅವರು ಶ್ರೀರಾಮಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ದೂರಿನ ಆಧಾರದ ಮೇಲೆ ಪೊಲೀಸರು ಮಸೀದಿಯಲ್ಲಿದ್ದ ಮೌಲಾನಾ ಮತ್ತು ಇತರ ೧೦ ರಿಂದ ೧೨ ಅಪರಿಚಿತ ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಕಲ್ಲು ತೂರಾಟ ನಡೆಸಿದವರಿಗಾಗಿ ಹುಡುಕಾಟ ನಡೆಸಲಾಗುತ್ತಿದೆ. ಘಟನೆಯ ನಂತರ ಪೊಲೀಸರು ನಾಗರಿಕರಲ್ಲಿ ಶಾಂತಿ ಕಾಪಾಡುವಂತೆ ಮನವಿ ಮಾಡಿದ್ದಾರೆ. ಆರೋಪಿಗಳನ್ನು ಕೂಡಲೇ ಬಂಧಿಸಿ ಕಠಿಣ ಕ್ರಮ ಕೈಗೊಳ್ಳಬೇಕೆಂಬ ಬೇಡಿಕೆಗಾಗಿ ಹಾಗೂ ಘಟನೆಯನ್ನು ಖಂಡಿಸಿ ಮಾರ್ಚ್ ೨೭ ರಂದು ಸಮಸ್ತ ಹಿಂದೂ ಸಮಾಜವು ಒಗ್ಗೂಡಿತ್ತು.
ವಾರಾಣಸಿ: ದಾಲ್ಮಂಡಿ ರಸ್ತೆ ಅಗಲೀಕರಣ ಯೋಜನೆಯಡಿ ೫ ಮಸೀದಿಗಳ ಮೇಲೆ ಕ್ರಮ
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!