ದೂರದರ್ಶನದ ಉಚಿತ ವಾಹಿನಿಗಳನ್ನು ವೀಕ್ಷಿಸಲು ‘ಸೆಟ್-ಟಾಪ್ ಬಾಕ್ಸ್’ ಅಗತ್ಯವಿಲ್ಲ !

ಕೇಂದ್ರ ಸರಕಾರದ ಘೋಷಣೆ

(‘ಸೆಟ್-ಟಾಪ್ ಬಾಕ್ಸ್’ ಎಂದರೆ ದೂರದರ್ಶನ ಸಾಧನಕ್ಕೆ (ಟಿವಿ) ಜೋಡಿಸಲಾಗುವ ಒಂದು ಎಲೆಕ್ಟ್ರಾನಿಕ್ ಉಪಕರಣ. ಇದರ ಸಹಾಯದಿಂದ ಕೇಬಲ್, ಡಿಶ್ (ಡಿಟಿಎಚ್) ಅಥವಾ ಇಂಟರ್ನೆಟ್ ಮೂಲಕ ಬರುವ ಡಿಜಿಟಲ್ ದೂರದರ್ಶನ ಸಂಕೇತಗಳನ್ನು (ಸಿಗ್ನಲ್) ಟಿವಿಯಲ್ಲಿ ನೋಡಬಹುದು)

ನವದೆಹಲಿ – ‘ದೂರದರ್ಶನ’ದ ‘ಫ್ರೀ ಡಿಶ್ ಚಾನೆಲ್‌ಗಳನ್ನು’ ವೀಕ್ಷಿಸಲು ಯಾವುದೇ ಪ್ರತ್ಯೇಕ ‘ಸೆಟ್-ಟಾಪ್ ಬಾಕ್ಸ್’ ಅಗತ್ಯವಿರುವುದಿಲ್ಲ ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ಶ್ರೀ ಅಶ್ವಿನಿ ವೈಷ್ಣವ್ ಅವರು ಮಾಹಿತಿ ನೀಡಿದ್ದಾರೆ. ಅವರು ‘ಇನ್-ಬಿಲ್ಟ್ ಸ್ಯಾಟಲೈಟ್ ಟ್ಯೂನರ್’ ಮತ್ತು ‘ಸ್ಮಾರ್ಟ್ ಎಲೆಕ್ಟ್ರಾನಿಕ್ ಪ್ರೋಗ್ರಾಂ ಗೈಡ್’ ಹೊಂದಿರುವ ಹೊಸ ಟಿವಿಗಳನ್ನು ಪರಿಚಯಿಸಿದರು.

ಇಲ್ಲಿಯವರೆಗೆ ‘ಫ್ರೀ ಡಿಶ್’ ವೀಕ್ಷಿಸಲು ಟಿವಿಯೊಂದಿಗೆ ಪ್ರತ್ಯೇಕ ಸೆಟ್-ಟಾಪ್ ಬಾಕ್ಸ್ ಅಳವಡಿಸಬೇಕಾಗಿತ್ತು. ಈಗ ಹೊಸ ತಂತ್ರಜ್ಞಾನದಿಂದಾಗಿ ಟಿವಿಯಲ್ಲಿಯೇ ಸ್ಯಾಟಲೈಟ್ ಟ್ಯೂನರ್ ಅಳವಡಿಸಲಾಗಿರುತ್ತದೆ, ಇದರಿಂದಾಗಿ ಟಿವಿಯು ನೇರವಾಗಿ ಸ್ಯಾಟಲೈಟ್ ಸಂಕೇತಗಳನ್ನು ಸ್ವೀಕರಿಸಲು ಸಾಧ್ಯವಾಗುತ್ತದೆ. ಇದರಿಂದ ಗ್ರಾಹಕರು ಪ್ರತ್ಯೇಕ ಸೆಟ್-ಟಾಪ್ ಬಾಕ್ಸ್ ಖರೀದಿಸುವ ವೆಚ್ಚವನ್ನು ಭರಿಸಬೇಕಾಗಿಲ್ಲ.