|

ಲಕ್ಷ್ಮಣಪುರಿ (ಉತ್ತರ ಪ್ರದೇಶ) – ರಾಜ್ಯದಲ್ಲಿ ಪೆಟ್ರೋಲ್, ಡೀಸೆಲ್ ಮತ್ತು ಎಲ್‌ಪಿಜಿ ಕಾಳಸಂತೆ ಮಾಡುತ್ತಿದ್ದವರ ವಿರುದ್ಧ ಯೋಗಿ ಆದಿತ್ಯನಾಥ್ ಸರಕಾರ ಕಠಿಣ ಕ್ರಮ ಜರುಗಿಸಿದೆ. ಮಾರ್ಚ್ 12 ರಿಂದ ಈವರೆಗೆ ರಾಜ್ಯಾದ್ಯಂತ ಒಟ್ಟು 12,732 ಸ್ಥಳಗಳಲ್ಲಿ ದಾಳಿ ನಡೆಸಲಾಗಿದ್ದು, 177 ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಈ ಪ್ರಕರಣದಲ್ಲಿ 16 ಜನರನ್ನು ಬಂಧಿಸಲಾಗಿದ್ದು, 185 ಶಂಕಿತರ ವಿರುದ್ಧ ಮುಂದಿನ ಕಾನೂನು ಕ್ರಮ ಜಾರಿಯಲ್ಲಿದೆ. ಈ ಭರ್ಜರಿ ಕಾರ್ಯಾಚರಣೆಯಿಂದಾಗಿ ರಾಜ್ಯಾದ್ಯಂತ ಇಂಧನ ಪೂರೈಕೆ ಮತ್ತೆ ಸುಗಮವಾಗಿದೆ ಎಂದು ಆಡಳಿತ ಮಂಡಳಿ ತಿಳಿಸಿದೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಆದೇಶದಂತೆ ಆಡಳಿತವು ಆಕ್ರಮಣಕಾರಿ ನಿಲುವು ತಳೆದು ಅಕ್ರಮ ಮಾರಾಟಕ್ಕೆ ಲಗಾಮು ಹಾಕಿದೆ.
ರಾಜ್ಯದಲ್ಲಿ ಇಂಧನ ಪೂರೈಕೆಯನ್ನು ಸ್ಥಿರಗೊಳಿಸಲು ಕೇಂದ್ರ ಸರಕಾರದ ಸಹಯೋಗದೊಂದಿಗೆ ಪ್ರಮುಖ ನಿರ್ಧಾರ ತೆಗೆದುಕೊಳ್ಳಲಾಗಿದೆ. ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ವಿತರಣೆಯಲ್ಲಿ ಶೇ. 20 ರಷ್ಟು ಹೆಚ್ಚಳಕ್ಕೆ ಅನುಮೋದನೆ ನೀಡಲಾಗಿದ್ದು, ಇದು 23 ಮಾರ್ಚ್ 2026 ರಿಂದ ಜಾರಿಗೆ ಬಂದಿದೆ. ಇದರಿಂದಾಗಿ ಉದ್ಯಮಿಗಳಿಗೂ ಸಕಾಲದಲ್ಲಿ ಗ್ಯಾಸ್ ಲಭ್ಯವಾಗುತ್ತಿದೆ. ರಾಜ್ಯದ ಎಲ್ಲಾ 4,108 ಎಲ್‌ಪಿಜಿ ವಿತರಕರಲ್ಲಿ ಸದ್ಯಕ್ಕೆ ಪೂರಕವಾದ ಸ್ಟಾಕ್ ಲಭ್ಯವಿದೆ ಎಂದು ಸರಕಾರ ಮಾಹಿತಿ ನೀಡಿದೆ. ಗ್ರಾಹಕರಿಗೆ ಸಕಾಲದಲ್ಲಿ ಸಿಲಿಂಡರ್ ಸಿಗುವಂತಾಗಲು ಮುಖ್ಯ ಕಾರ್ಯದರ್ಶಿಗಳು ಎಲ್ಲಾ ಜಿಲ್ಲಾಧಿಕಾರಿಗಳಿಗೆ ಅಗತ್ಯ ಸೂಚನೆ ನೀಡಿದ್ದಾರೆ.
ನಾಗರಿಕರ ಅನನುಕೂಲತೆಯನ್ನು ತಪ್ಪಿಸಲು ನಿಯಂತ್ರಣ ಕೊಠಡಿ!
ನಾಗರಿಕರಿಗೆ ತೊಂದರೆಯಾಗದಂತೆ ನೋಡಿಕೊಳ್ಳಲು ಆಹಾರ ಆಯುಕ್ತರ ಕಚೇರಿ ಮತ್ತು ಗೃಹ ಇಲಾಖೆಯಲ್ಲಿ 24 ಗಂಟೆಗಳ ನಿಯಂತ್ರಣ ಕೊಠಡಿಯನ್ನು (Control Room) ಪ್ರಾರಂಭಿಸಲಾಗಿದೆ. ಇಲ್ಲಿ ಅಧಿಕಾರಿಗಳನ್ನು ಶಿಫ್ಟ್‌ಗಳ ಆಧಾರದ ಮೇಲೆ ನೇಮಿಸಲಾಗಿದ್ದು, ಇಂಧನ ಪೂರೈಕೆಗೆ ಸಂಬಂಧಿಸಿದ ದೂರುಗಳನ್ನು ತಕ್ಷಣವೇ ಪರಿಹರಿಸಲಾಗುತ್ತಿದೆ. ಇದಲ್ಲದೆ, ಜಿಲ್ಲಾ ಪೂರೈಕಾ ಅಧಿಕಾರಿಗಳು ಮತ್ತು ಸ್ಥಳೀಯ ಆಡಳಿತದ ತಂಡಗಳು ಪ್ರತ್ಯಕ್ಷವಾಗಿ ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡುತ್ತಿವೆ. ಇಂಧನ ಮತ್ತು ಗ್ಯಾಸ್ ಪೂರೈಕೆಯು ಯಾವುದೇ ಅಡೆತಡೆಯಿಲ್ಲದೆ ಸಾಮಾನ್ಯ ಜನರಿಗೆ ತಲುಪುವಂತೆ ಮಾಡಲು ಸರಕಾರವು ನಿರಂತರ ನಿಗಾ ಇರಿಸಿದೆ.
ಸಂಪಾದಕೀಯ ನಿಲುವುಇತರ ರಾಜ್ಯಗಳಲ್ಲೂ ಇಂತಹ ಕಠಿಣ ಕ್ರಮ ಕೈಗೊಳ್ಳಬೇಕು, ಆಗ ಮಾತ್ರ ಕಾಳಸಂತೆಕೋರರಲ್ಲಿ ಭಯ ಹುಟ್ಟಲು ಸಾಧ್ಯ! |
‘ಎನ್ಸಿಇಆರ್ಟಿ’ಯ 9ನೇ ತರಗತಿಯ ಪುಸ್ತಕದಲ್ಲಿ ತುರ್ತು ಪರಿಸ್ಥಿತಿಯ ಮಾಹಿತಿ ಸೇರ್ಪಡೆ : NCERT Introduces Emergency
ಆರೋಪಿ ಭೀಮರಾವ್ ಕಾಂಬ್ಳೆಗೆ ದೋಷಿ ಎಂದು ತೀರ್ಪು; ಜೂನ್ 29 ರಂದು ಅಂತಿಮ ಶಿಕ್ಷೆ ಪ್ರಕಟ : Nasrapur Case
ಎನ್ಸಿಇಆರ್ಟಿ ಪಠ್ಯದಲ್ಲಿ ಮರಾಠಾ ಸಾಮ್ರಾಜ್ಯದ ಇತಿಹಾಸ: ಮಹಾರಾಷ್ಟ್ರ ಶಿಕ್ಷಣ ಸಚಿವರ ಆಗ್ರಹ
ಶ್ರೀರಾಮಮಂದಿರದಲ್ಲಿ ದೇಣಿಗೆ ಕಳ್ಳತನ ಪ್ರಕರಣ: ಅಂತಿಮವಾಗಿ ದೂರು ದಾಖಲು
ಘಾಜಿಯಾಬಾದ್ (ಉತ್ತರ ಪ್ರದೇಶ) ಇಲ್ಲಿ ವೈದ್ಯ ನದೀಮ್ ನಿಂದ ರೋಗಿಯ ತಪ್ಪು ರಕ್ತನಾಳ ಕತ್ತರಿಸಿದ! : Doctor cuts wrong Vein
ದೇವತೆ, ಭಾರತಮಾತೆ ಮತ್ತು ರಾಜಕೀಯ ಹುತಾತ್ಮರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಲು ಸಾಧ್ಯವಿಲ್ಲ !