ಅರಬ್ ದೇಶಗಳ ಕೆಲವು ಭಾಗಗಳ ಮೇಲೆ ಭಾರತದ ನಿಯಂತ್ರಣವಿರಲಿದೆ! India World Leader Prediction Shakahari Patrika

  • ೧೯೭೨ ರ ‘ಶಾಕಾಹಾರಿ ಪತ್ರಿಕೆ’ಯಲ್ಲಿ ಪ್ರಕಟವಾದ ಭವಿಷ್ಯವಾಣಿ

  • ಪಾಕಿಸ್ತಾನ ಎಂಬ ಯಾವುದೇ ದೇಶ ಉಳಿಯುವುದಿಲ್ಲ!

ಚಂಡೀಗಢ – ವಿಶ್ವ ಮಟ್ಟದಲ್ಲಿ ಹೆಚ್ಚುತ್ತಿರುವ ಯುದ್ಧ ಮತ್ತು ಉದ್ವಿಗ್ನತೆಯ ಹಿನ್ನೆಲೆಯಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ಹೊಸ ಮತ್ತು ಹಳೆಯ ಭವಿಷ್ಯವಾಣಿಗಳು ವೇಗವಾಗಿ ಹರಡುತ್ತಿವೆ. ಈ ಹಿನ್ನೆಲೆಯಲ್ಲಿ, ೧೯೭೨ ರ ‘ಶಾಕಾಹಾರಿ ಪತ್ರಿಕಾ’ ಎಂಬ ಹಿಂದಿ ಮಾಸಿಕವು ಪ್ರಕಟಿಸಿದ್ದ ಭವಿಷ್ಯವಾಣಿಯೊಂದು ಈಗ ಪ್ರಸಾರವಾಗುತ್ತಿದೆ. ಈ ನಿಯತಕಾಲಿಕೆಯು ಜನವರಿ 12, ೧೯೭೨ ರಂದು ಈ ಭವಿಷ್ಯವಾಣಿಯನ್ನು ಪ್ರಕಟಿಸಿರುವ ಆ ಸಮಯದ ಪುಟವೊಂದು ವೈರಲ್ ಆಗಿದೆ. ಇದರಲ್ಲಿ ಭವಿಷ್ಯದ ಮಹಾಯುದ್ಧಗಳು, ದೇಶಗಳ ವಿನಾಶ ಮತ್ತು ನರಮೇಧದಂತಹ ಗಂಭೀರ ಹಾಗೂ ಭಯಾನಕ ದಾವೆಗಳನ್ನು ಮಾಡಲಾಗಿದೆ. ಅದರಲ್ಲಿಯೇ ಇಸ್ರೇಲ್ ಮತ್ತು ಅರಬ್ ದೇಶಗಳ ನಡುವೆ ಯುದ್ಧ ನಡೆಯಲಿದ್ದು, ಹೆಚ್ಚಿನ ಅರಬ್ ರಾಷ್ಟ್ರಗಳು ಇಸ್ರೇಲ್‌ನ ನಿಯಂತ್ರಣಕ್ಕೆ ಬರಲಿವೆ. ಹಾಗೆಯೇ ಅರಬ್ ದೇಶಗಳ ಕೆಲವು ಭಾಗಗಳ ಮೇಲೆ ಭಾರತದ ನಿಯಂತ್ರಣವೂ ಇರಲಿದೆ ಎಂದು ಹೇಳಲಾಗಿದೆ. ಈ ಬಗ್ಗೆ ‘ಪಂಜಾಬ್ ಕೇಸರಿ’ ಎಂಬ ಹಿಂದಿ ದಿನಪತ್ರಿಕೆಯು ವರದಿಯನ್ನು ಪ್ರಕಟಿಸಿದೆ.

ಈ ಭವಿಷ್ಯವಾಣಿಯಲ್ಲಿ,

೧. ಪೂರ್ವ ಪಾಕಿಸ್ತಾನವು ಕೊನೆಗೊಂಡಿದೆ, ಈಗ ಪಶ್ಚಿಮ ಪಾಕಿಸ್ತಾನವೂ ಕೊನೆಗೊಳ್ಳಲಿದೆ. ಪಾಕಿಸ್ತಾನ ಎಂಬ ಹೆಸರಿನ ಯಾವುದೇ ದೇಶವು ಉಳಿಯುವುದಿಲ್ಲ.

೨. ಎಲ್ಲಾ ಮುಸ್ಲಿಂ ದೇಶಗಳು ತಮ್ಮತಮ್ಮಲ್ಲೇ ಹೋರಾಡಿ ನಾಶವಾಗಲಿವೆ. ಜಗತ್ತಿನ ಮುಸ್ಲಿಮರ ಸಂಖ್ಯೆಯು ಇತರ ಎಲ್ಲಾ ಧರ್ಮದವರಿಗಿಂತ ಕಡಿಮೆಯಾಗಲಿದೆ. ಉಳಿಯುವ ಮುಸ್ಲಿಮರು ಧರ್ಮಾತ್ಮರಾಗಿರುತ್ತಾರೆ.

೩. ಎಲ್ಲಾ ಸಣ್ಣ ದೇಶಗಳು ವಿಭಜನೆಗೊಂಡು ದೊಡ್ಡ ದೇಶಗಳಲ್ಲಿ ವಿಲೀನಗೊಳ್ಳಲಿವೆ ಮತ್ತು ಜಗತ್ತಿನ ಬಹುತೇಕ ರಾಷ್ಟ್ರಗಳ ನಡುವೆ ಯುದ್ಧ ನಡೆಯಲಿದೆ. ಜಗತ್ತಿನಲ್ಲಿ ದೊಡ್ಡ ಮಟ್ಟದ ನರಮೇಧದಂತಹ ಪರಿಸ್ಥಿತಿ ನಿರ್ಮಾಣವಾಗಲಿದೆ.

ಏನಿದು ‘ಶಾಕಾಹಾರಿ ಪತ್ರಿಕಾ’?

‘ಶಾಕಾಹಾರಿ ಪತ್ರಿಕಾ’ ಎಂಬುದು ಒಂದು ಹಿಂದಿ ಪ್ರಕಟಣೆಯಾಗಿತ್ತು. ಇದು ಪ್ರಮುಖವಾಗಿ ಶಾಕಾಹಾರ, ಧರ್ಮ, ಸಮಾಜ ಮತ್ತು ನೈತಿಕ ಮೌಲ್ಯಗಳಿಗೆ ಸಂಬಂಧಿಸಿದ ಲೇಖನಗಳನ್ನು ಪ್ರಕಟಿಸುತ್ತಿತ್ತು. ಜನರಲ್ಲಿ ಶಾಕಾಹಾರ, ಅಹಿಂಸೆ ಮತ್ತು ನೈತಿಕ ಜೀವನದ ಬಗ್ಗೆ ಜಾಗೃತಿ ಮೂಡಿಸುವುದು ಈ ಮಾಸಿಕದ ಉದ್ದೇಶವಾಗಿತ್ತು. ಈ ಮಾಸಿಕವನ್ನು ‘ಶಾಕಾಹಾರಿ ಸದಾಚಾರಿ ಬಾಲ ಸಂಘ’ದ ಮೂಲಕ ಪ್ರಕಟಿಸಲಾಗುತ್ತಿತ್ತು. ಇದನ್ನು ಅಕ್ಟೋಬರ್ 2, ೧೯೬೯ ರಂದು ಬಾಬಾ ಜಯಗುರುದೇವ್ ಅವರು ಸ್ಥಾಪಿಸಿದ್ದರು. ಈ ಸಂಘಟನೆಯ ಉದ್ದೇಶ ನೈತಿಕ ಶಿಕ್ಷಣ, ಶಾಕಾಹಾರ ಮತ್ತು ಆಧ್ಯಾತ್ಮಿಕ ಜೀವನವನ್ನು ಉತ್ತೇಜಿಸುವುದಾಗಿತ್ತು.