ಜಾನುವಾರುಗಳಿಗೆ ಮೇವು-ನೀರು ನೀಡದೆ ಕ್ರೂರವಾಗಿ ಕಟ್ಟಿಹಾಕಿರುವುದು ಪತ್ತೆ

ಭಟ್ಕಳ – ಜಾನುವಾರುಗಳನ್ನು ಹತ್ಯೆ ಮಾಡುವ ಉದ್ದೇಶದಿಂದ ಅವುಗಳಿಗೆ ಮೇವು ಮತ್ತು ನೀರು ನೀಡದೆ ಕ್ರೂರವಾಗಿ ಕಟ್ಟಿಹಾಕಿದ ಆರೋಪದ ಮೇಲೆ ಮುಜಫರ್ ನಾಥಗೇರಿ ಎಂಬ ವ್ಯಕ್ತಿಯ ವಿರುದ್ಧ ನಗರ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಿಸಲಾಗಿದೆ. ಮುಜಫರ್ ಮೂಲತಃ ಹೊನ್ನಾವರ ತಾಲೂಕಿನವನಾಗಿದ್ದು, ಸದ್ಯ ಭಟ್ಕಳದ ಮುಸಾನಗರದಲ್ಲಿ ವಾಸವಾಗಿದ್ದಾನೆ. ೪೦ ವರ್ಷದ ಮುಜಫರ್‌ನನ್ನು ಬಂಧಿಸಲಾಗಿದೆ.
ಮುಜಫರ್ ತನ್ನ ಸಹಚರರೊಂದಿಗೆ ಸುಮಾರು ೩ ಲಕ್ಷ ರೂಪಾಯಿ ಮೌಲ್ಯದ ೩ ಎತ್ತುಗಳು ಹಾಗೂ ೪೦ ಸಾವಿರ ರೂಪಾಯಿ ಮೌಲ್ಯದ ೨ ಗಂಡು ಕರುಗಳನ್ನು ಬಂದರು ರಸ್ತೆಯ ಒಂದು ಸ್ಥಳದಲ್ಲಿ ಇರಿಸಿದ್ದನು. ಅವುಗಳಿಗೆ ನೀರು ಮತ್ತು ಮೇವು ನೀಡದೆ ಕ್ರೂರವಾಗಿ ಕಟ್ಟಿಹಾಕಲಾಗಿತ್ತು ಎಂದು ದೂರಿನಲ್ಲಿ ತಿಳಿಸಲಾಗಿದೆ. ಖಚಿತ ಮಾಹಿತಿಯ ಮೇರೆಗೆ ಪೊಲೀಸರು ದಾಳಿ ನಡೆಸಿ ೩ ಎತ್ತುಗಳು ಮತ್ತು ೨ ಕರುಗಳನ್ನು ತಮ್ಮ ವಶಕ್ಕೆ ಪಡೆದಿದ್ದಾರೆ. ಈ ಪ್ರಕರಣದಲ್ಲಿ ನಗರ ಪೊಲೀಸ್ ಠಾಣೆಯ ಉಪನಿರೀಕ್ಷಕ ನವೀನ ನಾಯ್ಕ್ ಅವರು ದೂರು ನೀಡಿದ್ದು, ‘ಪಶುಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಕಾಯ್ದೆ’ಯ ಅಡಿಯಲ್ಲಿ ಉಪನಿರೀಕ್ಷಕ ಸೋಮನಾಥ ರಾಠೋಡ ಅವರು ಮೊಕದ್ದಮೆ ದಾಖಲಿಸಿದ್ದಾರೆ. ಪೊಲೀಸರು ಮುಂದಿನ ತನಿಖೆ ನಡೆಸುತ್ತಿದ್ದಾರೆ.
ಸಂಪಾದಕೀಯ ನಿಲುವುಸರಕಾರವು ಇಂತಹವರಿಗೆ ಇದೇ ರೀತಿಯಲ್ಲಿ ಕಟ್ಟಿಹಾಕುವ ಶಿಕ್ಷೆಯನ್ನು ನೀಡಬೇಕೆಂದು ಯಾರಾದರೂ ಒತ್ತಾಯಿಸಿದರೆ ಆಶ್ಚರ್ಯಪಡಬೇಕಿಲ್ಲ! |
ಸಮಾಜವಾದಿ ಪಕ್ಷದ ಅಧಿಕಾರಾವಧಿಯಲ್ಲಿ ‘ವಕ್ಫ್ ಮಂಡಳಿ’ಯ ಶತಕೋಟಿ ರೂಪಾಯಿಗಳ ಹಗರಣ! – ಮೌಲಾನಾ ಶಹಾಬುದ್ದೀನ ರಿಜ್ವಿ ಬರೇಲವಿ
“ನಾನು ಛತ್ರಪತಿ ಶಿವಾಜಿ ಮಹಾರಾಜರ ಅನುಯಾಯಿಯಾಗಿದ್ದು ರಣರಂಗ ಬಿಟ್ಟು ಓಡಿಹೋಗುವವನಲ್ಲ!”
ಭೋಜಶಾಲೆಯ ಪ್ರಕರಣದಲ್ಲಿ ಮಧ್ಯಪ್ರದೇಶ ಉಚ್ಚ ನ್ಯಾಯಾಲಯದ ತೀರ್ಪಿಗೆ ತಡೆ ನೀಡಲು ಸರ್ವೋಚ್ಚ ನ್ಯಾಯಾಲಯದ ನಿರಾಕರಣೆ
ಮೇವು ಹಗರಣ ಪ್ರಕರಣದಲ್ಲಿ ಲಾಲು ಪ್ರಸಾದ್ ಯಾದವ್ ಅವರಿಗೆ ಮಂಜೂರಾದ ಜಾಮೀನು ರದ್ದುಗೊಳಿಸಲು ಸುಪ್ರೀಂ ಕೋರ್ಟ್ ನ ನಿರಾಕರಣೆ
ಭಗವಾನ್ ಜಗನ್ನಾಥರ ರಥಯಾತ್ರೆಗೂ ಮುನ್ನ ಗುಜರಾತ್ನಲ್ಲಿ ೫ ಭಯೋತ್ಪಾದಕರ ಬಂಧನ
ಬ್ರಿಟನ್: ದೇವಸ್ಥಾನದ ಜಾಗ ಮುಸಲ್ಮಾನರಿಗೆ ಹರಾಜು !