ರೇಲ್ವೆಯಲ್ಲಿ ಅಘೋರಿ ಬಾಬಾಗಳ ಜಾಹೀರಾತು ಅಳವಡಿಸಿದ ಪ್ರಕರಣ

ಜಳಗಾಂವ – ರಾಜ್ಯದಲ್ಲಿ ಮೂಢನಂಬಿಕೆ ವಿರೋಧಿ ಕಾಯಿದೆ ಜಾರಿಯಲ್ಲಿದ್ದರೂ ಸಹ, ರೇಲ್ವೆ ಗಾಡಿಗಳಲ್ಲಿ ‘ಗುರು ಅರ್ಶದ್ ಜೀ’ ಹೆಸರಿನಲ್ಲಿ ಅಘೋರಿ ಬಾಬಾಗಳ ನೂರಾರು ಜಾಹೀರಾತುಗಳನ್ನು ಅಳವಡಿಸಲಾಗಿದೆ. ಇದರ ಮೂಲಕ ವಶೀಕರಣ (ಯಾರನ್ನಾದರೂ ತನ್ನ ಪ್ರಭಾವಕ್ಕೆ ಒಳಪಡಿಸುವುದು), ಪ್ರೇಮ ವಿವಾಹ, ವಿವಾಹ ವಿಚ್ಛೇದನ, ಮೂಢನಂಬಿಕೆಯ ಮಾಟ-ಮಂತ್ರ ಮುಂತಾದ ಅನೇಕ ದಾವೆಗಳನ್ನು ಮಾಡಲಾಗಿದೆ. ಈ ಜಾಹೀರಾತಿನಲ್ಲಿ ಸಂಪರ್ಕ ಸಂಖ್ಯೆಗಳನ್ನೂ ನೀಡಲಾಗಿದ್ದು, ಇದರ ಮೂಲಕ ಬಹಿರಂಗವಾಗಿ ಕ್ರಿಮಿನಲ್ ಸ್ವರೂಪದ ಕೃತ್ಯಗಳಿಗೆ ಮತ್ತು ಮೂಢನಂಬಿಕೆಗೆ ಪ್ರಚೋದನೆ ನೀಡಲಾಗುತ್ತಿದೆ. ಈ ಕುರಿತು ನವೆಂಬರ್ ೨೦೨೫ ರಲ್ಲಿ ಜಾಗೃತ ನಾಗರಿಕರೊಬ್ಬರು ರೇಲ್ವೆ ಇಲಾಖೆಗೆ ದೂರು ನೀಡಿದ್ದರು; ಆದರೆ ರೇಲ್ವೆ ಆಡಳಿತ ಮಂಡಳಿಗೆ ಎಚ್ಚರವಾಗಲು ೪ ತಿಂಗಳು ಬೇಕಾಯಿತು. ಮಾರ್ಚ್ ೨೦೨೬ ರಲ್ಲಿ ಅವರು ‘ಯೋಗ್ಯ ಕ್ರಮ ಕೈಗೊಳ್ಳುತ್ತೇವೆ’ ಎಂದು ಪತ್ರ ನೀಡಿದ್ದಾರೆ.
ಮೂಢನಂಬಿಕೆ ವಿರೋಧಿ ಕಾಯಿದೆಯ ಪ್ರಕಾರ ಇಂತಹ ಜಾಹೀರಾತುಗಳನ್ನು ಪ್ರಕಟಿಸುವುದು ಅಥವಾ ಅವುಗಳನ್ನು ಪ್ರಚಾರ ಮಾಡುವುದು ಶಿಕ್ಷಾರ್ಹ ಅಪರಾಧವಾಗಿದೆ. ಆದರೂ ರೇಲ್ವೆ ಆವರಣದಲ್ಲಿ ನಡೆಯುವ ಇಂತಹ ಕೃತ್ಯಗಳನ್ನು ತಡೆಯಲು ಯಾವುದೇ ಕಠಿಣ ವ್ಯವಸ್ಥೆಯನ್ನು ಜಾರಿಗೆ ತರುತ್ತಿಲ್ಲ. (ಕಾಯಿದೆಯ ಕಠಿಣ ಅನುಷ್ಠಾನ ಯಾವಾಗ ಆಗುವುದು? ಸಾಮಾನ್ಯವಾಗಿ ಹಿಂದೂಗಳ ಧಾರ್ಮಿಕ ಭಾವನೆಗಳ ವಿಷಯ ಬಂದಾಗ ಅವುಗಳನ್ನು ಮೂಢನಂಬಿಕೆ ಎಂದು ಕರೆಯುವವರು, ಇಂತಹ ಭೋಂದೂ ಬಾಬಾಗಳ ವಿರುದ್ಧ ಕ್ರಮ ಕೈಗೊಳ್ಳಲು ಮುಂದೆ ಬರುವುದಿಲ್ಲ! – ಸಂಪಾದಕರು)
ಸಂಪಾದಕೀಯ ನಿಲುವು೪ ತಿಂಗಳ ನಂತರವೂ ರೇಲ್ವೆ ಆಡಳಿತ ಮಂಡಳಿಯು ಕೇವಲ ನಾಮಮಾತ್ರದ ಉತ್ತರ ನೀಡುತ್ತಿದ್ದರೆ, ಸಾಮಾನ್ಯ ಜನರ ದೂರುಗಳನ್ನು ಅವರು ಹೇಗೆ ಪರಿಗಣಿಸಬಹುದು ಎಂಬುದನ್ನು ಊಹಿಸದಿರುವುದೇ ಲೇಸು! |
‘ಎನ್ಸಿಇಆರ್ಟಿ’ಯ 9ನೇ ತರಗತಿಯ ಪುಸ್ತಕದಲ್ಲಿ ತುರ್ತು ಪರಿಸ್ಥಿತಿಯ ಮಾಹಿತಿ ಸೇರ್ಪಡೆ : NCERT Introduces Emergency
ಆರೋಪಿ ಭೀಮರಾವ್ ಕಾಂಬ್ಳೆಗೆ ದೋಷಿ ಎಂದು ತೀರ್ಪು; ಜೂನ್ 29 ರಂದು ಅಂತಿಮ ಶಿಕ್ಷೆ ಪ್ರಕಟ : Nasrapur Case
ಎನ್ಸಿಇಆರ್ಟಿ ಪಠ್ಯದಲ್ಲಿ ಮರಾಠಾ ಸಾಮ್ರಾಜ್ಯದ ಇತಿಹಾಸ: ಮಹಾರಾಷ್ಟ್ರ ಶಿಕ್ಷಣ ಸಚಿವರ ಆಗ್ರಹ
ಶ್ರೀರಾಮಮಂದಿರದಲ್ಲಿ ದೇಣಿಗೆ ಕಳ್ಳತನ ಪ್ರಕರಣ: ಅಂತಿಮವಾಗಿ ದೂರು ದಾಖಲು
ಘಾಜಿಯಾಬಾದ್ (ಉತ್ತರ ಪ್ರದೇಶ) ಇಲ್ಲಿ ವೈದ್ಯ ನದೀಮ್ ನಿಂದ ರೋಗಿಯ ತಪ್ಪು ರಕ್ತನಾಳ ಕತ್ತರಿಸಿದ! : Doctor cuts wrong Vein
ದೇವತೆ, ಭಾರತಮಾತೆ ಮತ್ತು ರಾಜಕೀಯ ಹುತಾತ್ಮರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಲು ಸಾಧ್ಯವಿಲ್ಲ !