‘ಮತಾಂತರ ವಿರೋಧಿ ಕಾಯ್ದೆಯ ಅಗತ್ಯವಿತ್ತು’, ಎಂದೂ ಹೇಳಿಕೆ ನೀಡಿದರು

ಮುಂಬಯಿ, ಮಾರ್ಚ್ ೬ (ಸುದ್ದಿ) – ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರು ಮತಾಂತರ ವಿರೋಧಿ ಕಾಯ್ದೆಯ ಬಗ್ಗೆ ತೆಗೆದುಕೊಂಡಿರುವ ನಿರ್ಧಾರಕ್ಕಾಗಿ ನಾನು ಇಡೀ ಸಚಿವ ಸಂಪುಟವನ್ನು ವಿಶೇಷವಾಗಿ ಅಭಿನಂದಿಸುತ್ತೇನೆ. ಈ ಕ್ರಾಂತಿಕಾರಿ ಕಾಯ್ದೆಯು ಅಂಗೀಕಾರವಾಗುತ್ತಿದೆ. ಹಿಂದೂ ಧರ್ಮದ ರಕ್ಷಣೆಗಾಗಿ ಈ ಕಾಯ್ದೆಯ ಅಗತ್ಯವಿತ್ತು. ಹಿಂದೂ ಸಮಾಜವು ಸತತವಾಗಿ ಬೀದಿಗಿಳಿದು ಹೋರಾಡುತ್ತಿತ್ತು, ಪ್ರತಿದಿನ ಇಂತಹ ಘಟನೆಗಳು ನಡೆಯುತ್ತಿದ್ದವು. ಜನರನ್ನು ಪ್ರತಿದಿನ ಮತಾಂತರ ಮಾಡಲಾಗುತ್ತಿತ್ತು. ಹಣದ ಆಮಿಷ ಒಡ್ಡಲಾಗುತ್ತಿತ್ತು. ಕೆಲವೊಮ್ಮೆ ಪವಾಡಗಳ ಮೂಲಕ, ಇನ್ನು ಕೆಲವೊಮ್ಮೆ ಹಿಂದೂ ದೇವತೆಗಳನ್ನು ನಿಂದಿಸುವ ಮೂಲಕ ಮತಾಂತರ ಮಾಡಲಾಗುತ್ತಿತ್ತು. ಕೆಲವು ರಾಜ್ಯಗಳ ಬಹುತೇಕ ಎಲ್ಲಾ ಜನರು ಬೇರೆ ಧರ್ಮಕ್ಕೆ ಮತಾಂತರಗೊಂಡಿದ್ದಾರೆ. ಯಾರು ಆದಿವಾಸಿಗಳಾಗಿದ್ದರೋ, ಅವರು ಬೇರೆ ಧರ್ಮಕ್ಕೆ ಸೇರಿದ್ದಾರೆ. ಆದರೆ ದಾಖಲೆಗಳನ್ನು ಮಾತ್ರ ಆದಿವಾಸಿಗಳದ್ದೇ ಬಳಸುತ್ತಿದ್ದಾರೆ. ಮೀಸಲಾತಿಯನ್ನು ಪಡೆಯುವುದು ಮತ್ತು ಪೂಜಾ ಪದ್ಧತಿಯನ್ನು ಬದಲಾಯಿಸುವುದು ಸರ್ವೋಚ್ಚ ನ್ಯಾಯಾಲಯಕ್ಕೂ ಒಪ್ಪಿಗೆಯಿಲ್ಲ. ಆದ್ದರಿಂದ ಮತಾಂತರ ವಿರೋಧಿ ಕಾಯ್ದೆಯ ಅಗತ್ಯವಿತ್ತು ಎಂದು ಭಾಜಪ ಶಾಸಕ ಶ್ರೀ ಗೋಪಿಚಂದ ಪಡಳಕರ ಅವರು ವಿಧಾನಭವನದಲ್ಲಿ ಪತ್ರಕರ್ತರೊಂದಿಗೆ ಮಾತನಾಡುವಾಗ ಖಡಕ್ ಆಗಿ ಹೇಳಿದರು.
ಧರ್ಮದ ಕಾರ್ಯದಲ್ಲಿ ನಾನು ಬೆದರಿಕೆಗಳಿಗೆ ಅಂಜುವುದಿಲ್ಲ! – ಶಾಸಕ ಪಡಳಕರ
ಪಡಳಕರ ಅವರು ಮಾತು ಮುಂದುವರಿಸಿ, “ನಾವು ದೇವ ಮತ್ತು ಧರ್ಮದ ಕೆಲಸವನ್ನು ಕೈಗೆತ್ತಿಕೊಂಡಾಗ, ಬೆದರಿಕೆಗಳಿಗೆ ಸೊಪ್ಪು ಹಾಕುವುದಿಲ್ಲ. ಛತ್ರಪತಿ ಸಂಭಾಜಿ ಮಹಾರಾಜರು ಧರ್ಮಕ್ಕಾಗಿ ಬಲಿದಾನ ನೀಡಿದರು; ಆದರೆ ಅವರು ಎಂದೂ ತಲೆಬಾಗಲಿಲ್ಲ. ನಾವು ಅವರ ಸೈನಿಕರಾಗಿ ಧರ್ಮವನ್ನು ರಕ್ಷಿಸುವುದು ನಮ್ಮ ಕರ್ತವ್ಯವಾಗಿದೆ. ನನ್ನ ವಿರುದ್ಧ ಪ್ರತಿಭಟನೆಗಳು ನಡೆದವು; ಆದರೂ ನಾನು ಧರ್ಮದ ಕೆಲಸವನ್ನು ಬಿಡುವುದಿಲ್ಲ” ಎಂದು ಹೇಳಿದರು.
ಸಂಪಾದಕೀಯ ನಿಲುವುಇಂತಹ ಧರ್ಮಾಭಿಮಾನ ಎಷ್ಟು ಮಂದಿ ಹಿಂದೂ ಶಾಸಕರು ಮತ್ತು ಸಂಸದರಲ್ಲಿದೆ? |
ಶಬರಿಮಲೆ ಚಿನ್ನದ ಹಗರಣದಲ್ಲಿ ‘ತ್ರಾವಣಕೋರ್ ದೇವಸ್ವಂ ಮಂಡಳಿ’ ಮಂಡಳಿಯ ಮಾಜಿ ಅಧ್ಯಕ್ಷರ ವಿರುದ್ಧ ಸಿಕ್ಕ ಸಾಕ್ಷ್ಯಗಳು! : Sabarimala Gold Probe
ಶ್ರೀ ತುಳಜಾಭವಾನಿ ದೇವಿಯ ೪ ಸಾವಿರ ಎಕರೆ ಭೂಮಿ ಹಗರಣದ ಸಮಗ್ರ ತನಿಖೆ ನಡೆಸಿ! : Sri Tulja Bhavani Devi Land scam
ಜ್ಯೇಷ್ಠ ರಂಗಕರ್ಮಿ ವಿಜಯಾ ಮೆಹ್ತಾ ಅವರ ನಿಧನ
Gujarat HC Judgment : ಹಸು ಹತ್ಯೆ ಕುರಿತು ಗುಜರಾತ್ ಹೈಕೋರ್ಟ್ನ ಮಹತ್ವದ ತೀರ್ಪು
Shani Shingnapur : ಶನಿಶಿಂಗಣಾಪುರದಲ್ಲಿ ಶನಿದೇವರ ಮೂರ್ತಿಗೆ ವಿಶೇಷ ವಜ್ರಲೇಪನ!
Hindu Marriage Act : ಹಿಂದೂ ವಿವಾಹ: ಹೈಕೋರ್ಟ್ನ ಮಹತ್ವದ ಸ್ಪಷ್ಟನೆ