ಖಮೇನಿ ಅವರ ಮರಣದ ನಂತರ ಭಾರತದ ಹಲವೆಡೆ ಶಿಯಾ ಮುಸಲ್ಮಾನರಿಂದ ಪ್ರತಿಭಟನೆ Khamenei Death Protests India

ನವ ದೆಹಲಿ – ಇರಾನ್‌ ನ ಶಿಯಾ ಮುಸಲ್ಮಾನರ ಸರ್ವೋಚ್ಚ ಧರ್ಮಗುರು ಆಯಾತುಲ್ಲಾ ಖಮೇನಿ ಅವರು ದಾಳಿಯಲ್ಲಿ ಹತರಾದ ನಂತರ, ಭಾರತದ ಹಲವು ಸ್ಥಳಗಳಲ್ಲಿ ಶಿಯಾ ಮುಸಲ್ಮಾನರಿಂದ ಪ್ರತಿಭಟನೆ, ಶೋಕಸಭೆ ಮತ್ತು ನಿಷೇಧ ನಡೆಯುತ್ತಿವೆ. ಈ ಪ್ರತಿಭಟನೆಗಳಲ್ಲಿ ಅಮೆರಿಕ ಮತ್ತು ಇಸ್ರೇಲ್ ನಡೆಸಿದ ದಾಳಿಯನ್ನು ತೀವ್ರವಾಗಿ ಖಂಡಿಸಲಾಗುತ್ತಿದೆ.

೧. ಕಾಶ್ಮೀರದ ಶಿಯಾ ಮುಸಲ್ಮಾನರು ಕಪ್ಪು ಧ್ವಜಗಳನ್ನು ಪ್ರದರ್ಶಿಸುವ ಮೂಲಕ ಶ್ರೀನಗರದ ಲಾಲ್ ಚೌಕ್‌ ನಲ್ಲಿ ಪ್ರತಿಭಟನೆ ನಡೆಸಿದರು. ಅವರು ವಿಶ್ವಸಂಸ್ಥೆಯ ಕಚೇರಿಯ ಕಡೆಗೆ ಮೆರವಣಿಗೆ ನಡೆಸಲು ಪ್ರಯತ್ನಿಸಿದರು; ಆದರೆ ಭದ್ರತಾ ಪಡೆಗಳು ಅವರನ್ನು ತಡೆದವು.

೨. ಉತ್ತರ ಪ್ರದೇಶದ ರಾಜಧಾನಿ ಲಕ್ಷ್ಮಣಪುರಿ (ಲಕ್ನೋ) ಇಲ್ಲಿನ ‘ಚೋಟಾ ಇಮಾಮಬಾಡಾ’ ಮತ್ತು ಹಳೆಯ ನಗರದ ಭಾಗಗಳಲ್ಲಿ ಮುಸಲ್ಮಾನರು ಮೆರವಣಿಗೆ ನಡೆಸಿ ಖಮೇನಿ ಅವರ ಹತ್ಯೆಯನ್ನು ಪ್ರತಿಭಟಿಸಿದರು. ಭಾಗವಹಿಸಿದ್ದ ಮುಸಲ್ಮಾನರು ಕಪ್ಪು ಬಟ್ಟೆಗಳನ್ನು ಧರಿಸಿದ್ದರು. ಇದರೊಂದಿಗೆ ಉತ್ತರಪ್ರದೇಶದ ಆಗ್ರಾ, ಅಲಿಗಢ್, ಅಮ್ರೋಹಾ, ಮುಜಫರ್ ನಗರ, ಶಾಮ್ಲಿ ಮತ್ತು ಸಹರಾನ್ಪುರದಲ್ಲಿಯೂ ಪ್ರತಿಭಟನೆಗಳು ನಡೆದವು.

೩. ಬೆಂಗಳೂರು (ಕರ್ನಾಟಕ) ಮತ್ತು ಭಾಗ್ಯನಗರ (ಹಳೆಯ ನಗರ ) ಇಲ್ಲಿನ ಶಿಯಾ ಮುಸಲ್ಮಾನರು ಪ್ರತಿಭಟನೆ ನಡೆಸಿ ಅಮೆರಿಕ ಮತ್ತು ಇಸ್ರೇಲ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.