|

ಹರಿಯಾಣ – ಸೋನಿಪತ್ ನ ‘ಓಪಿ ಜಿಂದಾಲ್ ಗ್ಲೋಬಲ್ ವಿಶ್ವವಿದ್ಯಾಲಯ’ದ ಪ್ರಾಧ್ಯಾಪಕಿ ಸರೋವರ್ ಜೈದಿ ಅವರು ‘ಸರ್ಜಿಕಲ್ ಸ್ಟ್ರೈಕ್’ ಅನ್ನು ಶ್ಲಾಘಿಸಿದ್ದಕ್ಕಾಗಿ ವಿಶ್ವವಿದ್ಯಾಲಯದ ವಿದ್ಯಾರ್ಥಿಯೊಬ್ಬನಿಗೆ ಕಿರುಕುಳ ನೀಡಿದ್ದಾರೆ, ಅಷ್ಟೇ ಅಲ್ಲದೆ ಜೈದಿ ಅವರು ಪ್ರಧಾನಿ ಮೋದಿಯವರನ್ನು ಹಿಟ್ಲರ್ ಗೆ ಹೋಲಿಸಿದ್ದಾರೆ. ‘ಪ್ರಾಧ್ಯಾಪಕಿಯು ಮಗನಿಗೆ ಕಿರುಕುಳ ನೀಡಿದ್ದಾರೆ, ಆತನನ್ನು ಅವಮಾನಿಸಿದ್ದಾರೆ ಮತ್ತು ಆತನ ವಿರುದ್ಧ ತಾರತಮ್ಯ ಮಾಡಿದ್ದಾರೆ’ ಎಂದು ವಿದ್ಯಾರ್ಥಿಯ ತಂದೆ ಆರೋಪಿಸಿದ ನಂತರ ವಿಶ್ವವಿದ್ಯಾಲಯದ ಆಡಳಿತವು ಜೈದಿ ಅವರನ್ನು ಫೆಬ್ರವರಿ ೧ ರಿಂದ ಜುಲೈ ೩೧, ೨೦೨೬ ರವರೆಗೆ ಒಂದು ಶೈಕ್ಷಣಿಕ ಅವಧಿಗೆ ಅಮಾನತುಗೊಳಿಸಿದೆ.
Professor Sarovar Zaidi suspended for 6 months for harassing a student who praised the ‘Surgical Strike’ at O.P. Jindal Global University in Sonipat, Haryana
The Professor had also compared PM Narendra Modi to Hitler.
It says it all when a professor gets an eyesore over the… pic.twitter.com/PWQhrGwwHa
— Sanatan Prabhat (@SanatanPrabhat) March 1, 2026
೧. ಪದವಿಯ ವಿದ್ಯಾರ್ಥಿ ವಿಖ್ಯಾತನ ತಂದೆ ವಿಶ್ವ ಬಜಾಜ್ ಅವರು ನವೆಂಬರ್ ೨೦೨೫ ರಲ್ಲಿ ಹರಿಯಾಣ ಮಾನವ ಹಕ್ಕುಗಳ ಆಯೋಗದ ಮುಂದೆ ಈ ಬಗ್ಗೆ ದೂರು ನೀಡಿದ್ದರು. ತಮ್ಮ ಮಗನು ಇಬ್ಬರು ಪ್ರಾಧ್ಯಾಪಕರ ಕಿರುಕುಳವನ್ನು ಅನುಭವಿಸಬೇಕಾಯಿತು ಎಂದು ಬಜಾಜ್ ಅವರು ದೂರಿನಲ್ಲಿ ಆರೋಪಿಸಿದ್ದರು. ಅವರ ಮಗನು ಅಕ್ಟೋಬರ್ ೩೧, ೨೦೨೫ ರಂದು ‘ಉರಿ : ದ ಸರ್ಜಿಕಲ್ ಸ್ಟ್ರೈಕ್’ ಹೆಸರಿನ ಪ್ರಬಂಧವನ್ನು ಬರೆದಿದ್ದನು. ಇಬ್ಬರೂ ಶಿಕ್ಷಕರಿಗೆ ಈ ಪ್ರಬಂಧ ಇಷ್ಟವಾಗಲಿಲ್ಲ ಮತ್ತು ಅವರು ನವೆಂಬರ್ ೩, ೨೦೨೫ ರಂದು ಮಗನಿಗೆ ಕಿರುಕುಳ ನೀಡಲು ಪ್ರಾರಂಭಿಸಿದರು.
೨. ಜೈದಿ ಅವರು ಬೋಧಿಸುತ್ತಿದ್ದ ‘ರಾಜಕೀಯದ ಪ್ರಾತಿನಿಧ್ಯ’ ವಿಷಯದ ತರಗತಿಯ ಸಮಯದಲ್ಲಿ ತಮ್ಮ ಮಗನು ಪದೇ ಪದೇ ರಾಜಕೀಯವಾಗಿ ಅವಮಾನಕರ, ಪ್ರಚೋದನಕಾರಿ ಮತ್ತು ತೊಂದರೆದಾಯಕ ಟಿಪ್ಪಣಿಗಳನ್ನು ಎದುರಿಸಬೇಕಾಯಿತು ಎಂದು ಬಜಾಜ್ ಹೇಳಿದ್ದಾರೆ. ಪ್ರಾಧ್ಯಾಪಕಿಯ ಟೀಕೆಗಳಲ್ಲಿ ಭಾರತದ ಪ್ರಧಾನ ಮಂತ್ರಿಯವರನ್ನು ಅಡಾಲ್ಫ್ ಹಿಟ್ಲರ್ ಗೆ ಹೋಲಿಸುವುದು ಮತ್ತು ರಾಷ್ಟ್ರೀಯ ಭದ್ರತಾ ಕಾರ್ಯಾಚರಣೆಗಳನ್ನು ಪ್ರಧಾನ ಮಂತ್ರಿಗಳು ತಮ್ಮ ಸ್ವಂತ ಪ್ರಾಮುಖ್ಯತೆಯನ್ನು ಹೆಚ್ಚಿಸಿಕೊಳ್ಳಲು ಮಾಡುತ್ತಿದ್ದಾರೆ ಎಂದು ಬಣ್ಣಿಸುವುದು ಸೇರಿತ್ತು. ಪ್ರಧಾನಿ ಮೋದಿ ಮತ್ತು ಭಾರತೀಯ ಸೈನ್ಯವನ್ನು ಶ್ಲಾಘಿಸಿದ್ದಕ್ಕಾಗಿ ಕೆಲವು ಪ್ರಾಧ್ಯಾಪಕರು ಉದ್ದೇಶಪೂರ್ವಕವಾಗಿ ನನ್ನ ಮಗನನ್ನು ಗುರಿ ಮಾಡತೊಡಗಿದರು. ಅವರು ಉದ್ದೇಶಪೂರ್ವಕವಾಗಿ ಪರೀಕ್ಷೆಯಲ್ಲಿ ಮಗನ ಅಂಕಗಳನ್ನು ಕಡಿಮೆ ಮಾಡಿದರು, ಇದರಿಂದಾಗಿ ಆತ ಆ ವಿಷಯದಲ್ಲಿ ಅನುತ್ತೀರ್ಣನಾದನು.
೩. ಈ ಬಗ್ಗೆ ಬಜಾಜ್ ಅವರು ವಿಶ್ವವಿದ್ಯಾಲಯದ ಕುಲಪತಿಗಳಿಗೆ ದೂರು ನೀಡಿದ ನಂತರ ನಡೆದ ತನಿಖೆಯಲ್ಲಿ ವಿಖ್ಯಾತ ನ ಪರೀಕ್ಷೆಯ ಅಂಕಗಳನ್ನು ಅನ್ಯಾಯದ ರೀತಿಯಲ್ಲಿ ಕಡಿತಗೊಳಿಸಿರುವುದು ಬೆಳಕಿಗೆ ಬಂದಿದೆ. ನಂತರ ವಿಶ್ವವಿದ್ಯಾಲಯವು ವಿಖ್ಯಾತನಿಗೆ ಪರೀಕ್ಷೆಯ ಪರಿಷ್ಕೃತ ಫಲಿತಾಂಶವನ್ನು ನೀಡಿತು.
೪. ಈ ಘಟನೆಯ ಬಗ್ಗೆ ವಿಶ್ವವಿದ್ಯಾಲಯದ ಮುಖ್ಯ ಸಂಪರ್ಕ ಅಧಿಕಾರಿ ಅಂಜು ಮೋಹೂನ್ ಅವರು ಮಾತನಾಡಿ, ಹರಿಯಾಣ ಮಾನವ ಹಕ್ಕುಗಳ ಆಯೋಗವು ಈ ಪ್ರಕರಣವನ್ನು ಪರಿಶೀಲಿಸುತ್ತಿದೆ ಮತ್ತು ವಿಶ್ವವಿದ್ಯಾಲಯವು ಆಯೋಗದ ನಿರ್ದೇಶನಗಳನ್ನು ಪಾಲಿಸುತ್ತಿದೆ ಎಂದು ತಿಳಿಸಿದರು. ಜನವರಿ ೧೬, ೨೦೨೬ ರಂದು ಆಯೋಗವು ಸೋನಿಪತ್ ಪೊಲೀಸ್ ಕಮಿಷನರ್ ಮತ್ತು ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ ಅವರಿಂದ ವರದಿಯನ್ನು ಕೇಳಿದೆ.
ಸಂಪಾದಕೀಯ ನಿಲುವು
|
ಶ್ರೀನಗರದಲ್ಲಿ ಮಾದಕ ಪದಾರ್ಥ ಸಾಗಾಟಗಾರ ಶೇಖ್ ತಸದುಕ್ನ ಸರಕಾರಿ ಭೂಮಿಯ ಮೇಲಿನ ಅಕ್ರಮ 3 ಅಂತಸ್ತಿನ ಕಟ್ಟಡ ನೆಲಸಮ ! : Srinagar Drug Peddler House Demolished
ಬದಾಯೂ (ಉತ್ತರ ಪ್ರದೇಶ) ಇಲ್ಲಿ ಮುಸ್ಲಿಂ ಅಧಿಕಾರಿಯ ಧಾರ್ಮಿಕ ಕಿರುಕುಳದಿಂದಾಗಿ ಹಿಂದೂ ಪೊಲೀಸ್ ಇನ್ಸ್ಪೆಕ್ಟರ್ ಆತ್ಮಹತ್ಯೆ ! : Hindu Police Suicide
ಬುಲಂದ್ಶಹರ್ (ಉತ್ತರ ಪ್ರದೇಶ) ದಲ್ಲಿ ಹನುಮಾನ್ ದೇವಸ್ಥಾನದಲ್ಲಿ ಪ್ರಾರ್ಥನೆ ಮಾಡಿದ ಅಸರ್ ಮೊಹಮ್ಮದ್ ಬಂಧನ!
ನಾಗಪುರದಲ್ಲಿ ಶ್ರೀ ದುರ್ಗಾದೇವಿಯ ಮೂರ್ತಿಯ ಮೇಲಿದ್ದ ಚಿನ್ನದ ಸರ ಕಳ್ಳತನ ಮಾಡಿದ ೩ ಮತಾಂಧರ ಬಂಧನ !
ಕುತ್ತಿಗೆಯಲ್ಲಿದ್ದ ಆಭರಣಗಳನ್ನು ಕದಿಯುತ್ತಿದ್ದ ಕಾಮಿಲ್ ಮತ್ತು ಅಹ್ಮದ್ ಬಂಧನ !
ಖಾರ್ಘರ್ (ನವಿ ಮುಂಬಯಿ) ನಲ್ಲಿ ‘ಹೇರ್ ಸ್ಪಾ’ ಮಾಡುವಾಗ ಹಿಂದೂ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿದ ಮುಸ್ಲಿಂ ಯುವಕ !