
ಬಾರ್ಶಿ – ನಗರದಲ್ಲಿ ಶಾಂತಿ ಮತ್ತು ಕಾನೂನು ಸುವ್ಯವಸ್ಥೆಯನ್ನು ಕಾಪಾಡಲು ಪೊಲೀಸ್ ಆಡಳಿತವು ಅನಧಿಕೃತ ಮೈಕ್‌ಗಳ ವಿರುದ್ಧ ವಿಶೇಷ ಕಾರ್ಯಾಚರಣೆ ನಡೆಸಿತು. ಇದರಲ್ಲಿ 22 ಮೈಕ್‌ಗಳು ಮತ್ತು ಧ್ವನಿವರ್ಧಕಗಳನ್ನು ತೆಗೆದುಹಾಕಲಾಗಿದೆ. ಸುಪ್ರೀಂ ಕೋರ್ಟ್‌ನ ನಿರ್ದೇಶನಗಳನ್ನು ಪಾಲಿಸುತ್ತಾ 8 ಮಸೀದಿಗಳು ಮತ್ತು 5 ಮಂದಿರಗಳ ಮೇಲಿನ ಮೈಕ್‌ಗಳ ವಿರುದ್ಧ ಈ ಕ್ರಮ ಕೈಗೊಳ್ಳಲಾಗಿದೆ. ಕೆಲವು ದಿನಗಳ ಹಿಂದೆ ಎರಡು ಗುಂಪುಗಳ ನಡುವೆ ನಡೆದ ಕಲ್ಲು ತೂರಾಟದ ಘಟನೆಯ ನಂತರ ಉಂಟಾದ ಉದ್ವಿಗ್ನತೆಯ ಹಿನ್ನೆಲೆಯಲ್ಲಿ ಪೊಲೀಸ್ ವರಿಷ್ಠಾಧಿಕಾರಿ ಅತುಲ್ ಕುಲಕರ್ಣಿ ಅವರು ಶಾಂತಿ ಸಮಿತಿಯ ಸಭೆ ನಡೆಸಿ ಸೌಹಾರ್ದಯುತವಾಗಿ ಸಮಸ್ಯೆ ಬಗೆಹರಿಸಿದರು ಮತ್ತು ನಿಯಮಬಾಹಿರ ಮೈಕ್‌ಗಳನ್ನು ತೆಗೆಯಲು ಸೂಚನೆ ನೀಡಿದರು. (ಮೈಕ್‌ಗಳನ್ನು ತೆಗೆಯಲು ಪೊಲೀಸರಿಗೆ ಇಷ್ಟೊಂದು ಸಮಯ ಏಕೆ ಬೇಕಾಯಿತು? ಯಾವುದಾದರೂ ಘಟನೆ ನಡೆದ ನಂತರವೇ ಪೊಲೀಸರು ಕ್ರಮ ಕೈಗೊಳ್ಳುತ್ತಾರೆಯೇ? – ಸಂಪಾದಕರು) ಫೆಬ್ರವರಿ 28 ರಂದು ಬಾರಂಗುಳೆ ಪ್ಲಾಟ್, ಮಂಗಳವಾರ ಪೇಟೆ, ಖಾಜಾನಗರ, ಅಮನ ಚೌಕ್ ಮತ್ತು ಏಕವೀರಾ ಚೌಕ್ ಸೇರಿದಂತೆ ವಿವಿಧ ಭಾಗಗಳ ಧಾರ್ಮಿಕ ಸ್ಥಳಗಳನ್ನು ಪರಿಶೀಲಿಸಲಾಯಿತು. ಪರಿಶೀಲನೆಯ ವೇಳೆ 14 ಮಸೀದಿಗಳ ಪೈಕಿ 8 ಮಸೀದಿಗಳ ಮೇಲಿನ 14 ಮೈಕ್‌ಗಳು ಮತ್ತು 5 ಮಂದಿರಗಳ ಮೇಲಿನ 8 ಮೈಕ್‌ಗಳನ್ನು ತೆಗೆದುಹಾಕಲಾಯಿತು. ಈ ಕಾರ್ಯಾಚರಣೆಯು ಶಾಂತಿಯುತವಾಗಿ ನಡೆದಿದ್ದು, ‘ಇನ್ನು ಮುಂದೆ ಧ್ವನಿ ಮಾಲಿನ್ಯದ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು, ಇಲ್ಲದಿದ್ದರೆ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು’ ಎಂದು ಪೊಲೀಸರು ಸೂಚನೆ ನೀಡಿದ್ದಾರೆ.
ಹಸು ಹಿಂದೂಗಳಿಗೆ ಪವಿತ್ರ: ಅದರ ಹತ್ಯೆಯಿಂದ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗಬಹುದು! – ಗುಜರಾತ್ ಹೈಕೋರ್ಟ್
ಶನಿಶಿಂಗಣಾಪುರದ ಶ್ರೀ ಶನಿದೇವರ ಮೂರ್ತಿಯ ಸಂರಕ್ಷಣೆಗಾಗಿ ವಜ್ರಲೇಪನ ಮಾಡಲಾಗುವುದು !
ಹಿಂದೂ ವಿವಾಹ ಕಾಯ್ದೆಯಡಿ ವಿವಾಹ ಮಾನ್ಯವಾಗಲು ಕೇವಲ ವಿವಾಹ ಪ್ರಮಾಣಪತ್ರವಿದ್ದರೆ ಸಾಲದು !
ವಾರಾಣಸಿ: ದಾಲ್ಮಂಡಿ ರಸ್ತೆ ಅಗಲೀಕರಣ ಯೋಜನೆಯಡಿ ೫ ಮಸೀದಿಗಳ ಮೇಲೆ ಕ್ರಮ
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!