ದಳವಾಯಿಯಿಂದ ವಕ್ಫ್ ಹಣ ದುರುಪಯೋಗ: ಸರಕಾರ ವಸೂಲಿ ಮಾಡಲಿ ಎಂದು ಹಿಂದೂ ವಿಧಿಜ್ಞ ಪರಿಷತ್ ಆಗ್ರಹ

ಮುಂಬಯಿ, ಫೆಬ್ರವರಿ 28 (ಸುದ್ದಿ) – ಮಹಾರಾಷ್ಟ್ರ ರಾಜ್ಯ ವಕ್ಫ್ ಮಂಡಳಿಯ ಸದಸ್ಯರಾಗಿದ್ದಾಗ ಮಾಜಿ ಸಂಸದ ಮತ್ತು ಕಾಂಗ್ರೆಸ್ ಹಿರಿಯ ನಾಯಕ ಹುಸೇನ್ ದಳವಾಯಿ ಹಾಗೂ ಇತರ ಸದಸ್ಯರು ವಕ್ಫ್ ಮಂಡಳಿಯ ಹಣವನ್ನು ದುರುಪಯೋಗಪಡಿಸಿಕೊಂಡಿದ್ದಾರೆ. ಈ ಹಣವನ್ನು ಅವರಿಂದ ವಸೂಲಿ ಮಾಡಬೇಕೆಂದು ಹಿಂದೂ ವಿಧಿಜ್ಞ ಪರಿಷತ್ ರಾಷ್ಟ್ರೀಯ ಅಧ್ಯಕ್ಷರಾದ ನ್ಯಾಯವಾದಿ ವೀರೇಂದ್ರ ಇಚಲಕರಂಜಿಕರ್ ಅವರು ಸರಕಾರದ ಬಳಿ ಒತ್ತಾಯಿಸಿದ್ದಾರೆ. ಈ ಕುರಿತು ನ್ಯಾಯವಾದಿ ಇಚಲಕರಂಜಿಕರ್ ಅವರು ಮುಖ್ಯಮಂತ್ರಿ ಫಡ್ನವಿಸ್ ಮತ್ತು ಅಲ್ಪಸಂಖ್ಯಾತ ಅಭಿವೃದ್ಧಿ ಸಚಿವರಾದ ಸುನೇತ್ರಾ ಪವಾರ್ ಅವರಿಗೆ ಪತ್ರ ಬರೆದು ಈ ಗಂಭೀರ ವಿಚಾರವನ್ನು ಗಮನಕ್ಕೆ ತಂದಿದ್ದಾರೆ.

ಸರಕಾರಿ ಅಥವಾ ಅರೆ ಸರಕಾರಿ ಅಧಿಕಾರಿಗಳು ಸರಕಾರಿ ಕೆಲಸಕ್ಕಾಗಿ ಪ್ರಯಾಣಿಸುವಾಗ ಕೇವಲ ಕಾರ್ಯದರ್ಶಿ ಮಟ್ಟದ ಅಧಿಕಾರಿಗಳಿಗೆ ಮಾತ್ರ ವಿಮಾನ ಪ್ರಯಾಣಕ್ಕೆ ಅನುಮತಿಯಿದೆ. ಈ ಕುರಿತು ಸರಕಾರದ ನಿರ್ಧಾರವಿದೆ. ಹೀಗಿದ್ದರೂ ಹುಸೇನ್ ದಳವಾಯಿ ಮತ್ತು ಇತರ ಸದಸ್ಯರು 2017 ರಲ್ಲಿ ಮುಂಬಯಿನಿಂದ ಛತ್ರಪತಿ ಸಂಭಾಜಿನಗರಕ್ಕೆ ವಿಮಾನದ ಮೂಲಕ ಪ್ರಯಾಣಿಸಿದ್ದಾರೆ. ಎಸ್.ಸಿ. ತಡ್ವಿ, ಹಬೀಬ್ ಫಕೀಹ್, ಆಸಿಫ್ ಖುರೇಷಿ, ಖಾಲಾದ್ ಬಾಬು ಖುರೇಷಿ ಮತ್ತು ಇಮ್ತಿಯಾಜ್ ಕಾಜಿ ಸಾಹಬ್ ಅವರು ಹುಸೇನ್ ದಳವಾಯಿ ಅವರೊಂದಿಗೆ ವಿಮಾನದಲ್ಲಿ ಪ್ರಯಾಣಿಸಿದ್ದರು. ಇದಕ್ಕಾಗಿ ಒಟ್ಟು 69 ಸಾವಿರದ 783 ರೂಪಾಯಿ ವೆಚ್ಚವಾಗಿದೆ. ಸ್ಥಳೀಯ ನಿಧಿ ಲೆಕ್ಕಪರಿಶೋಧಕರು ಈ ವೆಚ್ಚವನ್ನು ಅಕ್ರಮ ಎಂದು ಘೋಷಿಸಿದ್ದಾರೆ. ಅವರು ಜುಲೈ 15, 2024 ರಂದು ವಕ್ಫ್ ಮಂಡಳಿಗೆ ಪತ್ರ ಕಳುಹಿಸಿ ಈ ಬಗ್ಗೆ ವಿವರಣೆ ಕೇಳಿದ್ದರು; ಆದರೆ ಇದಕ್ಕೆ ಇನ್ನು ಯಾವುದೇ ಉತ್ತರ ನೀಡಿಲ್ಲ ಎಂದು ನ್ಯಾಯವಾದಿ ಇಚಲಕರಂಜಿಕರ್ ಪತ್ರದಲ್ಲಿ ಬರೆದಿದ್ದಾರೆ. (ಇದರಿಂದ ವಕ್ಫ್ ಮಂಡಳಿಯೂ ಈ ಭ್ರಷ್ಟಾಚಾರಕ್ಕೆ ಕಾರಣ ಎಂಬುದು ತಿಳಿಯುತ್ತದೆ. ಆದ್ದರಿಂದ ದಳವಾಯಿ ಅವರೊಂದಿಗೆ ಮಂಡಳಿಯ ಮೇಲೆಯೂ ಕ್ರಮ ಏಕೆ ಕೈಗೊಳ್ಳಬಾರದು? – ಸಂಪಾದಕರು)

ವಕ್ಫ್ ಮಂಡಳಿಯ ಹಣದ ದುರುಪಯೋಗ ಬಡ ಮುಸ್ಲಿಮರಿಗೆ ಮಾಡಿದ ದ್ರೋಹ !

ರಾಜ್ಯಸಭೆಯ ಸಂಸದರಾಗಿದ್ದವರು ಮತ್ತು ಕಾಂಗ್ರೆಸ್ ಹಿರಿಯ ನಾಯಕರಾದ ಹುಸೇನ್ ದಳವಾಯಿ ಈ ರೀತಿ ತಮಗಾಗಿ ವಕ್ಫ್ ಮಂಡಳಿಯ ಹಣವನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದರೆ, ಇದು ಬಡ ಮುಸ್ಲಿಂ ವ್ಯಕ್ತಿಗೆ ಮಾಡಿದ ದ್ರೋಹವಲ್ಲವೇ? ವಕ್ಫ್ ಮಂಡಳಿ ಮತ್ತು ಮುಸ್ಲಿಮರು ಅತ್ಯಂತ ಬಡವರು ಹಾಗೂ ಹಿಂದುಳಿದವರು ಎಂದು ಹೇಳಲಾಗುತ್ತದೆ. ಆದ್ದರಿಂದ ಎಲ್ಲಾ ಸರಕಾರಗಳು ಅವರ ಮೇಲೆ ತೆರಿಗೆದಾರರ ಹಣವನ್ನು ವ್ಯಯಿಸುತ್ತವೆ. ಈ ಹಣವನ್ನು ಬಡ ಮುಸ್ಲಿಮರಿಗಾಗಿ ಬಳಸಬೇಕು; ಇದರಿಂದ ಅವರು ಸಂವಿಧಾನದ ಹಾದಿಯಲ್ಲಿ ನಡೆಯುತ್ತಾರೆ ಎಂದು ನ್ಯಾಯವಾದಿ ಇಚಲಕರಂಜಿಕರ್ ಪತ್ರದಲ್ಲಿ ಬರೆದಿದ್ದಾರೆ.

ಸಂಪಾದಕೀಯ ನಿಲುವು

ಕಾಂಗ್ರೆಸ್ ಮುಸ್ಲಿಮರಿಗೆ ಅತಿ ಹೆಚ್ಚು ಹಾನಿ ಮಾಡಿದೆ ಎಂದು ಅನೇಕ ತಜ್ಞರು ಹೇಳುತ್ತಾ ಬಂದಿದ್ದಾರೆ. ಅದರ ಒಂದು ಉದಾಹರಣೆ ಇದು. ಇದು ಮಂಜುಗಡ್ಡೆಯ ತುದಿ ಮಾತ್ರ ಎಂಬುದನ್ನು ಮರೆಯುವಂತಿಲ್ಲ ! ಮುಸ್ಲಿಮರ ಕುರುಡು ಕಾಂಗ್ರೆಸ್ ಪ್ರೇಮವೂ ಇದಕ್ಕೆ ಕಾರಣ ಎಂಬುದು ಅಷ್ಟೇ ನಿಜ !