‘ಆಟೋ-ಟ್ಯಾಕ್ಸಿ, ಓಲಾ-ಉಬರ್ ಮೆನ್ಸ್ ಯೂನಿಯನ್’ ಮುಂಬಯಿ ಉಚ್ಚ ನ್ಯಾಯಾಲಯದಲ್ಲಿ ಅರ್ಜಿಯ ಮೂಲಕ ವಿಮಾನ ನಿಲ್ದಾಣದ ಪರಿಸರದಲ್ಲಿ ನಮಾಜ್ ಮಾಡಲು ಅವಕಾಶ ನೀಡಬೇಕು ಎಂದು ಬೇಡಿಕೆ ಇಟ್ಟಿತ್ತು

ಮುಂಬಯಿ – ಛತ್ರಪತಿ ಶಿವಾಜಿ ಮಹಾರಾಜ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಪರಿಸರದಲ್ಲಿ ಮುಸ್ಲಿಂ ರಿಕ್ಷಾ, ಟ್ಯಾಕ್ಸಿ ಮತ್ತು ಓಲಾ-ಉಬರ್ ಚಾಲಕರಿಗೆ ನಮಾಜ್ ಮಾಡಲು ಅನುಕೂಲವಾಗುವಂತೆ ತಾತ್ಕಾಲಿಕ ಶೆಡ್ ನಿರ್ಮಿಸಿಕೊಡಬೇಕು ಎಂದು ‘ಆಟೋ-ಟ್ಯಾಕ್ಸಿ, ಓಲಾ-ಉಬರ್ ಮೆನ್ಸ್ ಯೂನಿಯನ್’ ಬೇಡಿಕೆ ಇಟ್ಟಿತ್ತು. ಇದಕ್ಕಾಗಿ ಅವರು ಮುಂಬಯಿ ಉಚ್ಚ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು; ಆದರೆ ರಾಜ್ಯ ಸರಕಾರವು ಭದ್ರತೆಯ ಕಾರಣ ನೀಡಿ ‘ವಿಮಾನ ನಿಲ್ದಾಣದ ಪರಿಸರದಲ್ಲಿ ಇಂತಹ ಯಾವುದೇ ತಾತ್ಕಾಲಿಕ ರಚನೆಯನ್ನು ನಿರ್ಮಿಸಲು ಸಾಧ್ಯವಿಲ್ಲ’ ಎಂದು ಸ್ಪಷ್ಟಪಡಿಸಿದೆ. ರಂಜಾನ್ ತಿಂಗಳಾಗಿರುವುದರಿಂದ ಮತ್ತು ಇತರ ದಿನಗಳಲ್ಲಿ ಪ್ರಯಾಣಿಕರನ್ನು ಬಿಡಲು ಬರುವ ಚಾಲಕರಿಗೆ ನಮಾಜ್ ಗಾಗಿ ಅನುಕೂಲವಾಗಬೇಕು ಎಂಬುದು ಅರ್ಜಿದಾರರ ಬೇಡಿಕೆಯಾಗಿತ್ತು.
ಈ ಸಂದರ್ಭದಲ್ಲಿ ನಡೆದ ವಿಚಾರಣೆಯಲ್ಲಿ ರಾಜ್ಯ ಸರಕಾರವು ಉಚ್ಚ ನ್ಯಾಯಾಲಯಕ್ಕೆ ಪ್ರಮಾಣಪತ್ರ ಸಲ್ಲಿಸಿದೆ. ಇದರಲ್ಲಿ ರಾಜ್ಯ ಸರಕಾರವನ್ನು ಪ್ರತಿನಿಧಿಸಿದ ಹೆಚ್ಚುವರಿ ಸರಕಾರಿ ವಕೀಲೆ ಜ್ಯೋತಿ ಚೌಹಾಣ್ ಅವರು ಈ ಅಂಶಗಳನ್ನು ಸ್ಪಷ್ಟಪಡಿಸಿದರು,
೧. ರಂಜಾನ್ ತಿಂಗಳಾಗಿರಲಿ ಅಥವಾ ಇತರ ಯಾವುದೇ ವಿಶೇಷ ದಿನಗಳಾಗಿರಲಿ, ವಿಮಾನ ನಿಲ್ದಾಣವು ಅತ್ಯಂತ ಸೂಕ್ಷ್ಮ ಪ್ರದೇಶವಾಗಿದೆ. ಆದ್ದರಿಂದ ಅಲ್ಲಿ ಭದ್ರತೆಯ ಕಾರಣಗಳಿಗಾಗಿ ಇಂತಹ ವ್ಯವಸ್ಥೆ ಮಾಡಲು ಸಾಧ್ಯವಿಲ್ಲ. ವಿಮಾನ ನಿಲ್ದಾಣದ ಸುರಕ್ಷತೆಯನ್ನು ಕಾಪಾಡುವುದು ಹಾಗೂ ಸಂಚಾರ ಸುಗಮವಾಗಿರಬೇಕು ಎಂಬ ದೃಷ್ಟಿಯಿಂದ ಈ ಬೇಡಿಕೆಯನ್ನು ಒಪ್ಪುವುದು ಸರಿಯಲ್ಲ.
೨. ನಮಾಜ್ ಗಾಗಿ ದಿನಕ್ಕೆ ಐದು ಬಾರಿ ಸರಿಸುಮಾರು ೧ ಸಾವಿರದ ೫೦೦ ರಿಂದ ೨ ಸಾವಿರ ಜನರು ಸೇರಬಹುದು. ಈ ಜನದಟ್ಟಣೆಯಿಂದಾಗಿ ಜನರಿಗೆ ಭದ್ರತೆಯ ದೃಷ್ಟಿಯಿಂದ ಸಂಭವನೀಯ ಅಪಾಯ ಉಂಟಾಗಬಹುದು. ವಿಮಾನ ನಿಲ್ದಾಣ ಮತ್ತು ಪರಿಸರದ ಭದ್ರತೆಯ ಜವಾಬ್ದಾರಿ ಪೊಲೀಸರ ಮೇಲಿದೆ. ಇಷ್ಟು ದೊಡ್ಡ ಜನಸಮೂಹದ ಸುರಕ್ಷತೆಯನ್ನು ಕಾಪಾಡುವುದು ಕಷ್ಟಕರವಾಗಿದೆ.
ನಮಾಜ್ ಗಾಗಿ ಬೇರೆ ಪರ್ಯಾಯ ಸ್ಥಳ ಹುಡುಕಿ! – ಸರಕಾರಕ್ಕೆ ನ್ಯಾಯಾಲಯದ ಆದೇಶ
ರಾಜ್ಯ ಸರಕಾರವು ಅನುಮತಿಯನ್ನು ನಿರಾಕರಿಸಿದ್ದರೂ ಸಹ, ನ್ಯಾಯಮೂರ್ತಿ ಬಿ.ಪಿ. ಕುಲಾಬಾವಾಲಾ ಮತ್ತು ನ್ಯಾಯಮೂರ್ತಿ ಫಿರ್ದೌಸ್ ಪುನಿವಾಲಾ ಅವರ ಪೀಠವು ಸರಕಾರಿ ವಕೀಲರು ಮತ್ತು ಮುಂಬಯಿ ಮಹಾನಗರ ಪ್ರದೇಶ ಅಭಿವೃದ್ಧಿ ಪ್ರಾಧಿಕಾರಕ್ಕೆ ‘ಸುರಕ್ಷತೆಯೊಂದಿಗೆ ರಾಜಿ ಮಾಡಿಕೊಳ್ಳದೆ ವಿಮಾನ ನಿಲ್ದಾಣದ ಪರಿಸರದಲ್ಲಿ ನಮಾಜ್‌ಗಾಗಿ ಬೇರೆ ಪರ್ಯಾಯ ಸ್ಥಳವನ್ನು ಹುಡುಕಲು ಸಾಧ್ಯವೇ?’, ಎಂಬುದರ ಸಾಧ್ಯತೆಯನ್ನು ಪರಿಶೀಲಿಸಲು ನಿರ್ದೇಶನ ನೀಡಿದೆ.
ಇದಕ್ಕೂ ಮೊದಲು ನಡೆದ ವಿಚಾರಣೆಯಲ್ಲಿ ನ್ಯಾಯಾಲಯವು ಸರಕಾರಕ್ಕೆ ಮಾನವೀಯ ದೃಷ್ಟಿಕೋನವನ್ನು ತಳೆಯುವಂತೆ ಸಲಹೆ ನೀಡಿತ್ತು. ರಂಜಾನ್ ತಿಂಗಳವರೆಗೆ ತಾತ್ಕಾಲಿಕ ಅನುಮತಿ ನೀಡಿ ನಂತರ ಸ್ಥಳವನ್ನು ಮೊದಲಿನಂತೆ ಮಾಡುವ ಆಯ್ಕೆಯ ಬಗ್ಗೆ ಚರ್ಚೆ ನಡೆದಿತ್ತು. ಆಗ ‘ಅದಾನಿ ಏರ್‌ಪೋರ್ಟ್ ಹೋಲ್ಡಿಂಗ್ಸ್’ನ ವಕೀಲ ವಿಕ್ರಮ ನಾನಕಾನಿ ಅವರು ವಾದ ಮಂಡಿಸುತ್ತಾ, ಪ್ರಸ್ತಾವಿತ ಸ್ಥಳದ ಹತ್ತಿರದಲ್ಲೇ ಮೂರು ಮಸೀದಿಗಳು ಲಭ್ಯವಿವೆ ಎಂದು ತಿಳಿಸಿದರು. ಮೂರು ಮಸೀದಿಗಳು ಕ್ರಮವಾಗಿ ೧, ೧.೩ ಮತ್ತು ೩ ರಿಂದ ೪ ಕಿಲೋಮೀಟರ್ ದೂರದಲ್ಲಿವೆ. ಚಾಲಕರು ಸುಲಭವಾಗಿ ಹತ್ತಿರದ ಮಸೀದಿಗಳಿಗೆ ಹೋಗಿ ನಮಾಜ್ ಮಾಡಬಹುದು. (ಹೀಗಿರುವಾಗ ಇಂತಹ ಹಠವೇಕೆ? ಸರಕಾರವು ಇಂತಹವರನ್ನು ಹದ್ದುಬಸ್ತಿನಲ್ಲಿಡಬೇಕು. – ಸಂಪಾದಕರು)
ಸಂಪಾದಕೀಯ ನಿಲುವು‘ಪ್ರಜಾಪ್ರಭುತ್ವದ ಸ್ತಂಭಗಳನ್ನು ಹೇಗೆ ಬಗ್ಗಿಸಬೇಕು ಎಂಬುದು ಅರ್ಜಿದಾರರಿಗೆ ಚೆನ್ನಾಗಿ ತಿಳಿದಿದೆ’, ಎಂದು ಯಾರಾದರೂ ಸಂವೇದನಾಶೀಲ ರಾಷ್ಟ್ರಭಕ್ತನಿಗೆ ಅನಿಸಿದರೆ ಅದರಲ್ಲಿ ತಪ್ಪೇನಿದೆ ! |
ಮಹಿಳೆಯ ಎದೆಗೆ ಸ್ಪರ್ಶಿಸುವುದು ಅತ್ಯಾಚಾರದ ಪ್ರಯತ್ನವಲ್ಲ! – ಉಚ್ಚ ನ್ಯಾಯಾಲಯ : Attempt to Rape
ಅಮರಕಂಟಕ (ಮಧ್ಯಪ್ರದೇಶ)ಇಲ್ಲಿನ ನರ್ಮದಾ ಉಗಮ ದೇವಸ್ಥಾನದ ಚಿನ್ನ ಮತ್ತು ಬೆಳ್ಳಿ ನಾಪತ್ತೆ! : Amarkantak Temple Donation Scam
ಬೆಂಗಳೂರಿನಲ್ಲಿ ದೇಶದ ಮೊದಲ ‘ಎಐ’ ವಿಶ್ವವಿದ್ಯಾಲಯ ಆರಂಭ ! : Karnataka AI University
ಗುಜರಾತ್ ನ ಪ್ರಸಿದ್ಧ ಶಕ್ತಿಪೀಠ ಅಂಬಾಜಿ ದೇವಸ್ಥಾನದಲ್ಲೂ ನೋಟು ಎಣಿಕೆಯ ಸಮಯದಲ್ಲಿ ೨ ತಿಂಗಳ ಹಿಂದೆ ಕಳ್ಳತನ ನಡೆದಿರುವುದು ಬಹಿರಂಗ ! : Ambaji Temple Donation Theft
ಸಮಾಜವಾದಿ ಪಕ್ಷದ ಅಧಿಕಾರಾವಧಿಯಲ್ಲಿ ‘ವಕ್ಫ್ ಮಂಡಳಿ’ಯ ಶತಕೋಟಿ ರೂಪಾಯಿಗಳ ಹಗರಣ! – ಮೌಲಾನಾ ಶಹಾಬುದ್ದೀನ ರಿಜ್ವಿ ಬರೇಲವಿ
“ನಾನು ಛತ್ರಪತಿ ಶಿವಾಜಿ ಮಹಾರಾಜರ ಅನುಯಾಯಿಯಾಗಿದ್ದು ರಣರಂಗ ಬಿಟ್ಟು ಓಡಿಹೋಗುವವನಲ್ಲ!”