ಆದಿವಾಸಿಗಳನ್ನು ಹಿಂದೂ ಧರ್ಮಕ್ಕೆ ಘರವಾಪಸಿ ಮಾಡುವಾಗ ಅವರ ಪಾದಗಳನ್ನು ತೊಳೆಯುತ್ತಿರುವ ಶ್ರೀ. ಜುದೇವ್
ಆದಿವಾಸಿಗಳನ್ನು ಹಿಂದೂ ಧರ್ಮಕ್ಕೆ ಘರವಾಪಸಿ ಮಾಡುವಾಗ ಅವರ ಪಾದಗಳನ್ನು ತೊಳೆಯುತ್ತಿರುವ ಶ್ರೀ. ಜುದೇವ್

ಸುಂದರಗಢ (ಒಡಿಶಾ)ದ 210 ಆದಿವಾಸಿ ಬಂಧು-ಭಗಿನಿಯರು ಹಿಂದೂ ಧರ್ಮಕ್ಕೆ ಘರವಾಪಸಿ!
ಸುಂದರಗಢ (ಒಡಿಶಾ) – ಆದಿವಾಸಿ ಸಮುದಾಯವು ಭಾರತದ ಆಧಾರಸ್ತಂಭವಾಗಿದೆ, ಆದ್ದರಿಂದಲೇ ರಾಷ್ಟ್ರವಿರೋಧಿ ಶಕ್ತಿಗಳು ಆದಿವಾಸಿಗಳನ್ನು ಗುರಿ ಮಾಡುತ್ತವೆ. ಇಂದು ಬ್ರಿಟಿಷರನ್ನು ಓಡಿಸಲಾಗಿದ್ದರೂ, ಅವರು ಕ್ರೈಸ್ತ ಮತಾಂತರದ ಬೀಜಗಳನ್ನು ಬಿತ್ತಿದ್ದಾರೆ, ಇದು ನಮ್ಮ ಧರ್ಮ, ಸಂಸ್ಕೃತಿ ಮತ್ತು ರಾಷ್ಟ್ರಕ್ಕೆ ದೊಡ್ಡ ಅಪಾಯವಾಗಿದೆ. ಇದಕ್ಕಾಗಿ ನಾವು ಸಂಘಟಿತರಾಗಿ ಈ ರಾಷ್ಟ್ರವಿರೋಧಿ ರಾಕ್ಷಸ ಶಕ್ತಿಗಳ ವಿರುದ್ಧ ಹೋರಾಡಬೇಕು. ಆದಿವಾಸಿ ಹಿಂದೂ ಸಮುದಾಯದ ಏಕತೆಯೇ ರಾಷ್ಟ್ರದ ಶಕ್ತಿ ಎಂದು ಭಾಜಪದ ಛತ್ತೀಸ್‌ಗಢ ರಾಜ್ಯ ಉಪಾಧ್ಯಕ್ಷ ಮತ್ತು ಅಖಿಲ ಭಾರತ ಘರ್ ವಾಪಸಿ (ಹಿಂದೂ ಧರ್ಮಕ್ಕೆ ಘರವಾಪಸಿ) ಮುಖ್ಯಸ್ಥ ಪ್ರಬಲ್ ಪ್ರತಾಪ್ ಸಿಂಗ್ ಜುದೇವ್ ಹೇಳಿದರು.

ಶುದ್ಧಿ ಚಳವಳಿಯ ಪ್ರವರ್ತಕ ಸ್ವಾಮಿ ಶ್ರದ್ಧಾನಂದ ಅವರ ಜನ್ಮದಿನದ ಅಂಗವಾಗಿ ವಿಶ್ವ ಹಿಂದೂ ಪರಿಷತ್ತಿನ ವತಿಯಿಂದ ಇಲ್ಲಿನ ಕರುವ ಬಹಲ್‌ನಲ್ಲಿ ‘ಪ್ರಾಂತೀಯ ಆದಿವಾಸಿ ಧಾರ್ಮಿಕ ಸಂರಕ್ಷಣಾ ಮಹಾಯಜ್ಞ’ವನ್ನು ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ಜುದೇವ್ ಅವರು 210 ಆದಿವಾಸಿ ಬಂಧು-ಭಗಿನಿಯರನ್ನು ವೈದಿಕ ಮಂತ್ರಗಳನ್ನು ಪಠಿಸುವ ಮೂಲಕ ಮತ್ತು ಯಜ್ಞದ ನಂತರ ಅವರ ಪಾದಗಳನ್ನು ತೊಳೆದು ಸನಾತನ ಹಿಂದೂ ಧರ್ಮಕ್ಕೆ ಮರಳಿ ಕರೆತಂದರು. (ಶುದ್ಧಿ ಚಳವಳಿಯನ್ನು ಸ್ವಾಮಿ ಶ್ರದ್ಧಾನಂದ ಮತ್ತು ಆರ್ಯ ಸಮಾಜವು 1920 ರ ದಶಕದಲ್ಲಿ ಪ್ರಾರಂಭಿಸಿತ್ತು. ಇದರ ಅಡಿಯಲ್ಲಿ ಸಾವಿರಾರು ಹಿಂದೂಗಳನ್ನು ಕ್ರೈಸ್ತ ಧರ್ಮದಿಂದ ಹಿಂದೂ ಧರ್ಮಕ್ಕೆ ಮರಳಿ ತರಲಾಗಿತ್ತು.)

1. ಶ್ರೀ. ಜುದೇವ್ ಅವರು ನೆರೆದಿದ್ದವರನ್ನು ಉದ್ದೇಶಿಸಿ ಮಾತನಾಡುತ್ತಾ, ಸ್ವಾಮಿ ಲಕ್ಷ್ಮಣಾನಂದಜೀ ಅವರು ಒಡಿಶಾದ ಕಂಧಮಾಲ್‌ನಲ್ಲಿ ಆದಿವಾಸಿಗಳನ್ನು ಕ್ರೈಸ್ತ ಧರ್ಮಕ್ಕೆ ಮತಾಂತರಿಸಲು ಸಂಚು ರೂಪಿಸುತ್ತಿದ್ದ ಮಿಷನರಿ ಮಾಫಿಯಾಗಳ ವಿರುದ್ಧ ಹೋರಾಡಿದ್ದರು. ಈ ಕಾರಣಕ್ಕಾಗಿ 2008 ರಲ್ಲಿ ಅವರನ್ನು ಹೇಡಿತನದಿಂದ ಹತ್ಯೆ ಮಾಡಲಾಯಿತು. ಇಂದಿನ ಈ ಸ್ವದೇಶಿ ಪ್ರಯಾಣವನ್ನು ನಾವು ರಾಷ್ಟ್ರ ಮತ್ತು ಧರ್ಮಕ್ಕಾಗಿ ಪ್ರಾಣ ಅರ್ಪಿಸಿದ ಆ ಮಹಾನ್ ಸಂತರ ಪಾದಗಳಿಗೆ ಅರ್ಪಿಸುತ್ತೇವೆ ಎಂದು ಹೇಳಿದರು.

2. ಕಾರ್ಯಕ್ರಮದ ಕುರಿತು ಶ್ರೀ. ಜುದೇವ್ ಅವರು ‘ಸನಾತನ ಪ್ರಭಾತ’ದ ಪ್ರತಿನಿಧಿಗೆ ತಿಳಿಸುತ್ತಾ, ಇದು ಆದಿವಾಸಿ ಸಮುದಾಯದ ನಂಬಿಕೆಗಳು, ಸಂಪ್ರದಾಯಗಳು ಮತ್ತು ಸಾಂಸ್ಕೃತಿಕ ಗುರುತನ್ನು ರಕ್ಷಿಸುವ ಪ್ರಯತ್ನವಾಗಿದೆ. ರಾಷ್ಟ್ರ ಮತ್ತು ಧರ್ಮದ ಬಗೆಗಿನ ಸಮರ್ಪಣೆಯ ಇಂತಹ ಕಾರ್ಯಕ್ರಮಗಳು ಒಂದು ಶಕ್ತಿಯುತ ಉದಾಹರಣೆಯಾಗಿದೆ ಎಂದರು.

3. ಈ ಸಂದರ್ಭದಲ್ಲಿ ವಿಹಿಂಪ ರಾಜ್ಯ ಕಾರ್ಯಕಾರಿ ಮುಖ್ಯಸ್ಥ ಅಶೋಕ್ ಗಾಂಧಿ, ಕೇಂದ್ರ ಸಹ ಕಾರ್ಯದರ್ಶಿ ಅಚ್ಯುತ್ ನಂದಕರ್, ದಿಲೀಪ ಮೆಹೆರ್ (ವಿಹಿಂಪ, ಸುಂದರಗಢ), ಕರ್ನಲ್ ಸಿಂಗ್ (ವಿಹಿಂಪ, ಜಶ್‌ಪುರ), ಪರಮಾನಂದ ಬಾಗ್, ಅನಿಲ್ ಕುಮಾರ್ ಸಂತುಕ್ (ವಿಹಿಂಪ, ಒಡಿಶಾ) ಮತ್ತು ಇತರ ಗಣ್ಯರು ಉಪಸ್ಥಿತರಿದ್ದರು.

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭಗವಾನ್ ಶಿವನ ರೂಪದಲ್ಲಿ ತೋರಿಸಿದ ‘ವಿಶ್ವವಾಣಿ’ ಪತ್ರಿಕೆ !
‘ಭಂಡಾರ ಎಂದರೆ ಶುದ್ಧ ಅರಿಶಿನ’ ಎಂದು ಘೋಷಿಸುವಂತೆ ಅನ್ನ ಮತ್ತು ಔಷಧ ಆಡಳಿತಕ್ಕೆ (FDA) ಆಗ್ರಹ!
ಪಾನ್ ಮಸಾಲಾ, ಗುಟ್ಕಾ ಮತ್ತು ಕಲಬೆರಕೆ ಆಹಾರ ಪದಾರ್ಥಗಳ ಒಂದೂವರೆ ಕೋಟಿಗೂ ಹೆಚ್ಚು ಮೌಲ್ಯದ ದಾಸ್ತಾನು ವಶ
‘ಲವ್ ಜಿಹಾದ್’, ‘ಲ್ಯಾಂಡ್ ಜಿಹಾದ್’ ಇವೆಲ್ಲಾ ಮೂರ್ಖತನದ ಸಂಗತಿಗಳಂತೆ !
ತುಮಕೂರಿನಲ್ಲಿ ಶ್ರೀರಾಮಮಂದಿರದ ಹತ್ತಿರ ಅಲ್ಪಸಂಖ್ಯಾತರ ವಸತಿಗೃಹ ನಿರ್ಮಿಸುವ ಸಂಚು !
ನಾಗಪುರ: ಮಾನಸಿಕ ಒತ್ತಡದಿಂದಾಗಿ ‘ನೀಟ್’ ಪರೀಕ್ಷೆಯ ವಿದ್ಯಾರ್ಥಿನಿ ಆತ್ಮಹತ್ಯೆ