
ಗುರುದಾಸಪುರ (ಪಂಜಾಬ್) – ಇಲ್ಲಿನ ಭಾರತ-ಪಾಕಿಸ್ತಾನ ಗಡಿಯ ಅಧಿಯಾ ಗ್ರಾಮದ ತಪಾಸಣಾ ಚೌಕಿಯಲ್ಲಿ ಎರಡು ದಿನಗಳ ಹಿಂದೆ ಅಪರಿಚಿತರು ರಾತ್ರಿ ಗುಂಡಿನ ದಾಳಿ ನಡೆಸಿ ಪೊಲೀಸ್ ಅಧಿಕಾರಿ ಮತ್ತು ಗೃಹರಕ್ಷಕ ದಳದ ಸೈನಿಕನನ್ನು ಹತ್ಯೆ ಮಾಡಿದ್ದರು. ಈ ಬಗ್ಗೆ ಪೊಲೀಸರಿಂದ ತನಿಖೆ ನಡೆಯುತ್ತಿರುವಾಗಲೇ, ‘ತೆಹ್ರೀಕ್-ಎ-ತಾಲಿಬಾನ್ ಹಿಂದೂಸ್ತಾನ್’ ಎಂಬ ಸಂಘಟನೆಯು ಈ ಹತ್ಯೆಯ ಹೊಣೆ ಹೊತ್ತುಕೊಂಡಿದೆ ಎಂದು ಹೇಳಲಾದ ಕರಪತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಈ ಪೋಸ್ಟ್‌ನಲ್ಲಿ ಸಂಘಟನೆಯ ಧ್ವಜ, ಲಾಂಛನ ಮತ್ತು ಮೃತರಾದ ಇಬ್ಬರ ಛಾಯಾಚಿತ್ರಗಳನ್ನು ಪ್ರಸಾರ ಮಾಡಲಾಗಿದೆ. ಈ ಮಾಹಿತಿಯನ್ನು ಹಿಂದಿ ಮತ್ತು ಇಂಗ್ಲಿಷ್ ಎರಡೂ ಭಾಷೆಗಳಲ್ಲಿ ಪ್ರಸಾರ ಮಾಡಲಾಗಿದೆ. ಪೊಲೀಸರು ಈ ದಾವೆಗಳ ಸತ್ಯಾಸತ್ಯತೆಯನ್ನು ಪರಿಶೀಲಿಸುತ್ತಿದ್ದು, ಪ್ರಾಥಮಿಕ ಹಂತದಲ್ಲಿ ಇದು ಅಪರಿಚಿತ ಸಂಘಟನೆ ಆಗಿದೆ ಎಂದು ಹೇಳುತ್ತಿದ್ದಾರೆ.
ಸಂಪಾದಕೀಯ ನಿಲುವುಪಂಜಾಬ್ ಮೇಲೆ ಭಯೋತ್ಪಾದನೆಯ ನೆರಳು ಆವರಿಸಿರುವುದನ್ನು ತೋರಿಸುವ ಘಟನೆ! |
ಯುರೋಪಿಯನ್ ದೇಶಗಳಂತೆ ಭಾರತದ ಮಕ್ಕಳಲ್ಲೂ ಸ್ಥೂಲಕಾಯದ ಅಪಾಯ ಹೆಚ್ಚುತ್ತಿದೆ!
ದೇವಸ್ಥಾನದ ಹಣವನ್ನು ಧಾರ್ಮಿಕ ಕಾರ್ಯಗಳಿಗಾಗಿಯೇ ಖರ್ಚು ಮಾಡುವ ತಮಿಳುನಾಡು ಸರಕಾರದ ನೀತಿಯನ್ನು ಟೀಕಿಸಿದ ಹಿಂದೂದ್ವೇಷಿ ಉದಯನಿಧಿ ಸ್ಟಾಲಿನ್
ಮುಂಬಯಿ ಲೋಕಲ್ ರೈಲಿನಲ್ಲಿ ಕ್ಷುಲ್ಲಕ ಕಾರಣಕ್ಕೆ ಪ್ರಯಾಣಿಕನ ಹತ್ಯೆ; ಆರೋಪಿ ಬಂಧನ
ಮಹಾರಾಷ್ಟ್ರ : ಅಕೋಲಾ ಮಹಾನಗರ ಪಾಲಿಕೆಯ ಸ್ಥಾಯಿ ಸಮಿತಿ ಸಭಾಂಗಣಕ್ಕೆ ನೀಡಲಾದ ‘ಟಿಪ್ಪು ಸುಲ್ತಾನ್’ ಹೆಸರು ಅಕ್ರಮ!
ಮಹಾರಾಷ್ಟ್ರ : ದೇವಸ್ಥಾನ ಭೂಮಿಗೆ ಸಂಬಂಧಿಸಿದಂತೆ ಸರಕಾರಿ ದೇವಸ್ಥಾನ ಸಮಿತಿಯ ಮೊದಲ ಸಭೆ ಮುಕ್ತಾಯ!
ಹುಡುಗಿಯ ಮೃತದೇಹವು ಕೆರೆಯಲ್ಲಿ ತೇಲುತ್ತಿದ್ದ ಸ್ಥಿತಿಯಲ್ಲಿ ಪತ್ತೆ!