ಭಾರತೀಯ ಮುಸಲ್ಮಾನರೂ ಹಿಂದೂಗಳೇ ಆಗಿರುವುದರಿಂದ ಅವರ ‘ಘರ್ ವಾಪಸಿ’ ಮಾಡಬೇಕಿದೆ! – ಪ.ಪೂ. ಸರಸಂಘಚಾಲಕ ಡಾ. ಮೋಹನ ಜೀ ಭಾಗವತ

ಪ.ಪೂ. ಸರಸಂಘಚಾಲಕ ಡಾ. ಮೋಹನ ಜೀ ಭಾಗವತ ಅವರ ಹೇಳಿಕೆ

(ಘರ್ ವಾಪಸಿ ಎಂದರೆ ಹಿಂದೂ ಧರ್ಮಕ್ಕೆ ಮರುಪ್ರವೇಶ)

ಲಕ್ಷ್ಮಣಪುರಿ (ಉತ್ತರ ಪ್ರದೇಶ) – ಭಾರತದಲ್ಲಿ ವಾಸಿಸುವ ಮುಸಲ್ಮಾನರೂ ಹಿಂದೂಗಳೇ ಆಗಿದ್ದಾರೆ, ಅವರು ಅರಬ್ ದೇಶಗಳಿಂದ ಬಂದವರಲ್ಲ. ಅವರನ್ನೂ ‘ಘರ್ ವಾಪಸಿ’ (ಹಿಂದೂ ಧರ್ಮಕ್ಕೆ ಮರುಪ್ರವೇಶ) ಮಾಡಿಸಬೇಕಿದೆ; ಆದರೆ ಈ ಕೆಲಸವು ಹಂತಹಂತವಾಗಿ ನಡೆಯಲಿದೆ ಎಂದು ಪ.ಪೂ. ಸರಸಂಘಚಾಲಕ ಡಾ. ಮೋಹನ ಜೀ ಭಾಗವತ ಅವರು ಇಲ್ಲಿ ಹೇಳಿದರು.

ಪ.ಪೂ. ಸರಸಂಘಚಾಲಕರು ಮಂಡಿಸಿದ ಅಂಶಗಳು,

೧. ಒಂದು ಕುಟುಂಬದಲ್ಲಿ ಕನಿಷ್ಠ ೩ ಮಕ್ಕಳಿರಲಿ: ಈಗ ಯಾರಾದರೂ ಮದುವೆಯಾಗುತ್ತಿದ್ದರೆ, ಅವರಿಗೆ ಕನಿಷ್ಠ ಮೂರು ಮಕ್ಕಳನ್ನು ಹೊಂದಲು ಹೇಳಬೇಕು.

೨. ವಿಶ್ವವಿದ್ಯಾಲಯ ಅನುದಾನ ಆಯೋಗದ ಮಾರ್ಗಸೂಚಿಗಳು ಯಾರ ವಿರೋಧಿಯೂ ಅಲ್ಲ

ವಿಶ್ವವಿದ್ಯಾಲಯ ಅನುದಾನ ಆಯೋಗದ ಮಾರ್ಗಸೂಚಿಗಳು ಯಾರ ವಿರೋಧಿಯೂ ಅಲ್ಲ: ಎಲ್ಲರನ್ನೂ ಜೊತೆಗೂಡಿಸಿಕೊಂಡು ಹೋಗಬೇಕಾಗುತ್ತದೆ. ಈ ನಿಟ್ಟಿನಲ್ಲಿ ಒಂದು ವರ್ಗಕ್ಕೆ ಇದು ನಮ್ಮ ವಿರುದ್ಧವಾಗಿದೆ ಎಂದು ಅನ್ನಿಸಿದರೆ, ಇನ್ನೊಂದು ವರ್ಗಕ್ಕೆ ಇದು ನಮ್ಮ ಪರವಾಗಿದೆ ಎಂದು ಅನ್ನಿಸುತ್ತದೆ. ಸರಕಾರವು ನಿಯಮಗಳನ್ನು ಮಾಡುತ್ತದೆ. ಒಂದು ವೇಳೆ ಯಾರಿಗಾದರೂ ಅದು ಸರಿ ಅನಿಸದಿದ್ದರೆ, ಅವರು ತಮ್ಮ ನಿಲುವನ್ನು ಮಂಡಿಸಬೇಕು. ಈ ಪ್ರಕರಣವು ಸದ್ಯ ಸರ್ವೋಚ್ಚ ನ್ಯಾಯಾಲಯದಲ್ಲಿ ಬಾಕಿ ಉಳಿದಿದೆ. ಸರಕಾರವು ಯಾವುದೇ ಕಾನೂನನ್ನು ಮಾಡಿದರೂ, ಅದನ್ನು ಪಾಲಿಸುವುದು ಅಗತ್ಯವಾಗಿದೆ.

೩. ಯಾರಾದರೂ ಗುಂಡಿಗೆ ಬಿದ್ದಿದ್ದರೆ, ಅವರನ್ನು ಹೊರಗೆ ತರಲು ಕೈ ನೀಡಬೇಕು ಮತ್ತು ಹೊರಗೆ ನಿಂತಿರುವ ವ್ಯಕ್ತಿಯು ಅವರನ್ನು ಮೇಲೆತ್ತಲು ಸ್ವಲ್ಪ ಬಾಗಿ ಕೈ ಚಾಚಬೇಕು. ಇಬ್ಬರೂ ಕೈ ಚಾಚಿದಾಗ ಮಾತ್ರ ಆ ಕಾರ್ಯ ಸಾಧ್ಯವಾಗುತ್ತದೆ.

೪. ನಮಗೆ ಜಾತಿ ಎಂಬ ಗೊಂದಲಕ್ಕೆ ಬೀಳುವ ಅಗತ್ಯವಿಲ್ಲ. ಜಾತಿಯು ದಶಕಗಳಿಂದ ನಾವು ತೊಡೆದುಹಾಕಲು ಪ್ರಯತ್ನಿಸುತ್ತಿರುವ ವಿಷಯವಾಗಿದೆ; ಆದರೆ ಈ ಜಾತಿಯು ಅಷ್ಟು ಸುಲಭವಾಗಿ ಹೋಗುತ್ತಿಲ್ಲ.

೫. ಮುಸಲ್ಮಾನರೂ ರಾಷ್ಟ್ರೀಯ ಸ್ವಯಂಸೇವಕ ಸಂಘದೊಂದಿಗೆ ಜೊತೆಗೂಡಲು ಇಚ್ಛಿಸುತ್ತಿದ್ದಾರೆ. ಅವರದೇ ಜನರು ರಾಷ್ಟ್ರೀಯ ಮುಸ್ಲಿಂ ಮಂಚ್’ ಎಂಬ ವೇದಿಕೆಯನ್ನು ರಚಿಸಿಕೊಂಡಿದ್ದಾರೆ.

ಮೊಘಲರು ಮತ್ತು ಬ್ರಿಟಿಷರಿಗೆ ಹಿಂದೂ ಧರ್ಮ ಹಾಗೂ ಸಂಸ್ಕೃತಿಯನ್ನು ಅಳಿಸಲು ಸಾಧ್ಯವಾಗಲಿಲ್ಲ

೫೦೦ ವರ್ಷಗಳ ಕಾಲ ಮೊಘಲರು ಮತ್ತು ೨೦೦ ವರ್ಷಗಳ ಕಾಲ ಬ್ರಿಟಿಷರು ದೇಶವನ್ನು ಆಳಿ ಹೊರಟು ಹೋದರು; ಆದರೆ ಹಿಂದೂ ಧರ್ಮ ಮತ್ತು ಸಂಸ್ಕೃತಿ ಎಷ್ಟು ಭದ್ರವಾಗಿದೆ ಎಂದರೆ, ಅವರಿಗೆ ಅದನ್ನು ಅಳಿಸಿಹಾಕಲು ಸಾಧ್ಯವಾಗಲಿಲ್ಲ. ಇಷ್ಟು ವರ್ಷಗಳಲ್ಲಿ ಹಿಂದೂ ಧರ್ಮಕ್ಕೆ ಯಾರೂ ಏನನ್ನೂ ಮಾಡಲು ಸಾಧ್ಯವಾಗದ ಮೇಲೆ, ಈಗ ಯಾರು ತಾನೇ ಏನು ಮಾಡಲು ಸಾಧ್ಯ?