ಮಹಾಶಿವರಾತ್ರಿಯ ದಿನದಂದು ಕಾವಡಿ ಯಾತ್ರಿಕರ ಮೇಲೆ ತಂಪು ಪಾನೀಯದ ಖಾಲಿ ಪ್ಯಾಕೆಟ್ಗಳನ್ನು ಎಸೆದ ಮುಸಲ್ಮಾನ ಮಕ್ಕಳು ! Muslims Kanwar Yatra

ಉತ್ತರಾಖಂಡದ ಉಧಮಸಿಂಗ್ ನಗರದಲ್ಲಾದ ಘಟನೆ

(‘ಕಾವಡಿಗಳು’ ಅಥವಾ ‘ಕಾವಡಿ ಯಾತ್ರಿಕರು’ ಎಂದರೆ ಗಂಗಾಜಲವನ್ನು ತೆಗೆದುಕೊಂಡು ಊರಿನ ಶಿವಮಂದಿರಕ್ಕೆ ಹೋಗಿ ಜಲಾಭಿಷೇಕ ಮಾಡುವವರು)

ಡೆಹ್ರಾಡೂನ (ಉತ್ತರಾಖಂಡ) – ರಾಜ್ಯದ ಉಧಮಸಿಂಗ್ ನಗರ ಜಿಲ್ಲೆಯ ಜಸಪುರದಲ್ಲಿ ಮಹಾಶಿವರಾತ್ರಿಯ ಪವಿತ್ರ ದಿನದಂದು ಅಬ್ದುಲವಾರಿ ವೃತ್ತದ ಸಮೀಪವಿರುವ ಒಂದು ಮನೆಯ ಛಾವಣಿಯ ಮೇಲಿಂದ ಕೆಲವು ಮುಸಲ್ಮಾನ ಮಕ್ಕಳು ಕೆಲ ಕಾವಡಿಗಳ ಮೇಲೆ ಮೊದಲು ಫ್ರೂಟಿ ಪಾನೀಯದ ಖಾಲಿ ಪ್ಯಾಕೆಟ್ ಗಳನ್ನು ಎಸೆದರು ಮತ್ತು ತದನಂತರ ಮರದ ಕೋಲುಗಳನ್ನು ಸಹ ಎಸೆದರು. ಈ ಘಟನೆಯ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದ್ದಂತೆಯೇ ಸಂಪೂರ್ಣ ಪ್ರದೇಶದಲ್ಲಿ ಆಕ್ರೋಶ ಭುಗಿಲೆದ್ದಿತು ಮತ್ತು ಉದ್ವಿಗ್ನ ವಾತಾವರಣ ಉಂಟಾಯಿತು.

ಭಾಜಪ ಕಾರ್ಯಕರ್ತರು ಮತ್ತು ಹಿಂದುತ್ವನಿಷ್ಠ ಸಂಘಟನೆಗಳಿಗೆ ಸಂಬಂಧಿಸಿದ ಸದಸ್ಯರು ನೇರವಾಗಿ ಪೊಲೀಸ್ ಠಾಣೆಗೆ ತಲುಪಿದರು. ಇನ್ನೊಂದೆಡೆ ಮುಸಲ್ಮಾನರು ಕೂಡ ಅಲ್ಲಿ ಜಮಾಯಿಸಿದರು. ಸ್ವಲ್ಪ ಸಮಯದವರೆಗೆ ಎರಡೂ ಗುಂಪುಗಳು ಮುಖಾಮುಖಿಯಾಗಿ ನಿಂತವು ಮತ್ತು ಪರಿಸ್ಥಿತಿ ಹದಗೆಡುವ ಹಂತಕ್ಕೆ ತಲುಪಿತು. ವಾತಾವರಣ ಎಷ್ಟೊಂದು ಕಾವೇರಿತ್ತೆಂದರೆ, ಪೊಲೀಸರು ಕೂಡಲೇ ಮಧ್ಯಪ್ರವೇಶಿಸಬೇಕಾಯಿತು, ಇಲ್ಲದಿದ್ದರೆ ಪ್ರಕರಣ ನಿಯಂತ್ರಣ ಮೀರಿ ಹೋಗುತ್ತಿತ್ತು.

ಪೊಲೀಸರು ಸಂಬಂಧಿತ ಮಕ್ಕಳು ಮತ್ತು ಅವರ ಪೋಷಕರನ್ನು ಪೊಲೀಸ್ ಠಾಣೆಗೆ ಕರೆಸಿ ವಿಚಾರಣೆ ನಡೆಸಿದರು ಹಾಗೂ ‘ಅವರ ಮೇಲೆ ಕಠಿಣ ಕ್ರಮ ಕೈಗೊಳ್ಳಲಿದ್ದೇವೆ’, ಎಂದು ಭರವಸೆ ನೀಡಿದ ನಂತರ ಪರಿಸ್ಥಿತಿ ಸ್ವಲ್ಪ ಶಾಂತವಾಯಿತು. ಭಾಜಪ ನಾಯಕ ಶ್ರೀ. ಶೀತಲ ಜೋಶಿ ಅವರು ಈ ಕೃತ್ಯವು ಪೂರ್ವನಿಯೋಜಿತ ಎಂದು ಆರೋಪಿಸಿದ್ದು, ಕಾವಡಿ ಯಾತ್ರೆಯಲ್ಲಿ ಅಡಚಣೆ ಉಂಟುಮಾಡುವ ಉದ್ದೇಶದಿಂದ ಇದನ್ನು ಮಾಡಲಾಗಿದೆ ಎಂದು ಹೇಳಿದ್ದಾರೆ. ಅಪರಾಧಿಗಳ ಮೇಲೆ ಕಠಿಣಾತಿಕಠಿಣ ಕ್ರಮಕ್ಕೆ ಅವರು ಆಗ್ರಹಿಸಿದ್ದಾರೆ. ಪೊಲೀಸರು ತನಿಖೆಗಾಗಿ ೨ ದಿನಗಳ ಕಾಲಾವಕಾಶ ತೆಗೆದುಕೊಂಡಿದ್ದು ಕೆಲವರನ್ನು ವಶಕ್ಕೆ ಪಡೆದಿದ್ದಾರೆ.

ಸಂಪಾದಕೀಯ ನಿಲುವು

  • ಮುಸಲ್ಮಾನರ ಮಕ್ಕಳಿಗೆ ಇದನ್ನು ಮದರಸಾಗಳಲ್ಲಿ ಕಲಿಸಲಾಗುತ್ತಿದೆಯೇ ಅಥವಾ ಮನೆಯಿಂದಲೇ ಹಿಂದೂದ್ವೇಷದ ಪಾಠ ಕಲಿಸಲಾಗುತ್ತಿದೆಯೇ, ಎಂಬುದನ್ನು ಕಪಟಿ ಜಾತ್ಯತೀತ ರಾಜಕೀಯ ಪಕ್ಷಗಳು ಹೇಳುತ್ತವೆಯೇ?
  • ಉತ್ತರಾಖಂಡದಲ್ಲಿ ಭಾಜಪ ಸರಕಾರ ಇರುವಾಗ ಇಂತಹ ಘಟನೆಗಳು ನಡೆಯಬಾರದು, ಎಂದೇ ಹಿಂದೂಗಳಿಗೆ ಅನ್ನಿಸುತ್ತದೆ!