|

ಅಮೃತಸರ (ಪಂಜಾಬ್) – ಶಾಲೆ, ಕಾಲೇಜು ಸೇರಿದಂತೆ ಮುಂತಾದ ಕಡೆಗಳಲ್ಲಿ ‘ವಂದೇ ಮಾತರಂ’ ಹಾಡುವುದನ್ನು ಕಡ್ಡಾಯಗೊಳಿಸುವ ನಿರ್ಧಾರವು ಭಾರತೀಯತೆಯ ಹೆಸರಿನಲ್ಲಿ ಸಿಖ್ ಸಮುದಾಯದ ಮೇಲೆ ಹಿಂದುತ್ವ ಸಿದ್ಧಾಂತವನ್ನು ಹೇರುವ ಪ್ರಯತ್ನವಾಗಿದೆ. ನಾವು ಸಿಖ್ಖರಾಗಿರುವುದರಿಂದ ಇದನ್ನು ಒಪ್ಪುವುದಿಲ್ಲ. ಈ ನಿರ್ಧಾರವು ಸಿಖ್ ಸಮುದಾಯದ ಭಾವನೆಗಳಿಗೆ ಮತ್ತು ಅವರ ಧಾರ್ಮಿಕ ಗುರುತಿಗೆ ವಿರುದ್ಧವಾಗಿದೆ ಎಂದು ಖಲಿಸ್ತಾನ್ ಬೆಂಬಲಿಸುವ ‘ದಳ ಖಾಲ್ಸಾ’ ಸಿಖ್ ಸಂಘಟನೆಯ ನಾಯಕ ಕನ್ವರ್‌ಪಾಲ್ ಸಿಂಗ್ ಬಿಟ್ಟು ಪ್ರಕಟಣೆಯ ಮೂಲಕ ಪ್ರತಿಕ್ರಿಯಿಸಿದ್ದಾರೆ.
ಕನ್ವರ್‌ಪಾಲ್ ಸಿಂಗ್ ಬಿಟ್ಟು ಇಡೀ ಸಿಖ್ ಸಮುದಾಯಕ್ಕೆ ಈ ನಿರ್ಧಾರವನ್ನು ಒಪ್ಪಬಾರದು ಮತ್ತು ಅದನ್ನು ರದ್ದುಗೊಳಿಸುವಂತೆ ಒತ್ತಾಯಿಸಬೇಕೆಂದು ಕರೆ ನೀಡಿದ್ದಾರೆ. ಅವರ ಪ್ರಕಾರ, ಈ ನಿರ್ಧಾರವು ಸಿಖ್ ಸಂಸ್ಕೃತಿಯ ಮೇಲೆ ಒಂದು ನಿರ್ದಿಷ್ಟ ಸಿದ್ಧಾಂತವನ್ನು ಹೇರುವುದಾಗಿದ್ದು, ಇದು ಸಿಖ್ ಸಂಪ್ರದಾಯಗಳಿಗೆ ಹೊಂದಿಕೆಯಾಗುವುದಿಲ್ಲ. ಇದೊಂದು ಸೂಕ್ಷ್ಮ ಆಕ್ರಮಣವಾಗಿದೆ. ಸಿಖ್ಖರು ಈ ವಿಷಯವನ್ನು ಗಂಭೀರವಾಗಿ ಅರ್ಥಮಾಡಿಕೊಳ್ಳಬೇಕು ಮತ್ತು ಇದನ್ನು ವಿರೋಧಿಸಬೇಕು. ಒಂದು ವೇಳೆ ಭಾರತ ಸರಕಾರ ಅಥವಾ ಪಂಜಾಬ್ ಸರಕಾರವು ಯಾವುದೇ ನಿರ್ಧಾರವನ್ನು ವಂಚನೆ ಅಥವಾ ಯಾವುದೇ ಗುಪ್ತ ಕಾರ್ಯಸೂಚಿಯ ಅಡಿಯಲ್ಲಿ ಸಿಖ್ ಸಮುದಾಯದ ಮೇಲೆ ಹೇರಿದರೆ, ಅದನ್ನು ಈ ಹಿಂದೆಯೂ ವಿರೋಧಿಸಲಾಗಿದೆ ಮತ್ತು ಮುಂದೆಯೂ ವಿರೋಧಿಸಲಾಗುವುದು ಎಂದು ಅವರು ಹೇಳಿದ್ದಾರೆ.
ಖಲಿಸ್ತಾನ್ ಬೆಂಬಲಿತ ‘ದಳ ಖಾಲ್ಸಾ’ ಬಗ್ಗೆ ಮಾಹಿತಿ
‘ದಳ ಖಾಲ್ಸಾ’ ಒಂದು ಸಿಖ್ ಧಾರ್ಮಿಕ ಸಂಘಟನೆಯಾಗಿದೆ. ಇದು 1978 ರಲ್ಲಿ ಪಂಜಾಬ್‌ನಲ್ಲಿ ಸ್ಥಾಪನೆಯಾಯಿತು. ಈ ಸಂಘಟನೆಯು ಸಿಖ್ ಸಮುದಾಯದ ಧಾರ್ಮಿಕ ಮತ್ತು ರಾಜಕೀಯ ವಿಷಯಗಳ ಬಗ್ಗೆ ಧ್ವನಿ ಎತ್ತಲು ಪ್ರಯತ್ನಿಸುತ್ತದೆ. ಸಿಖ್ಖರ ತಥಾಕಥಿತ ಹಕ್ಕುಗಳಿಗಾಗಿ, ಪಂಜಾಬ್‌ಗೆ ಸಂಬಂಧಿಸಿದ ವಿಷಯಗಳಿಗಾಗಿ ಮತ್ತು ಖಲಿಸ್ತಾನ್ ಬೇಡಿಕೆಗಾಗಿ ಈ ಸಂಘಟನೆಯು ಯಾವಾಗಲೂ ಹೋರಾಟ ಮಾಡುತ್ತಾ ಬಂದಿದೆ.
ಸಂಪಾದಕೀಯ ನಿಲುವು
|
ಯುರೋಪಿಯನ್ ದೇಶಗಳಂತೆ ಭಾರತದ ಮಕ್ಕಳಲ್ಲೂ ಸ್ಥೂಲಕಾಯದ ಅಪಾಯ ಹೆಚ್ಚುತ್ತಿದೆ!
ದೇವಸ್ಥಾನದ ಹಣವನ್ನು ಧಾರ್ಮಿಕ ಕಾರ್ಯಗಳಿಗಾಗಿಯೇ ಖರ್ಚು ಮಾಡುವ ತಮಿಳುನಾಡು ಸರಕಾರದ ನೀತಿಯನ್ನು ಟೀಕಿಸಿದ ಹಿಂದೂದ್ವೇಷಿ ಉದಯನಿಧಿ ಸ್ಟಾಲಿನ್
ಮುಂಬಯಿ ಲೋಕಲ್ ರೈಲಿನಲ್ಲಿ ಕ್ಷುಲ್ಲಕ ಕಾರಣಕ್ಕೆ ಪ್ರಯಾಣಿಕನ ಹತ್ಯೆ; ಆರೋಪಿ ಬಂಧನ
ಮಹಾರಾಷ್ಟ್ರ : ಅಕೋಲಾ ಮಹಾನಗರ ಪಾಲಿಕೆಯ ಸ್ಥಾಯಿ ಸಮಿತಿ ಸಭಾಂಗಣಕ್ಕೆ ನೀಡಲಾದ ‘ಟಿಪ್ಪು ಸುಲ್ತಾನ್’ ಹೆಸರು ಅಕ್ರಮ!
ಮಹಾರಾಷ್ಟ್ರ : ದೇವಸ್ಥಾನ ಭೂಮಿಗೆ ಸಂಬಂಧಿಸಿದಂತೆ ಸರಕಾರಿ ದೇವಸ್ಥಾನ ಸಮಿತಿಯ ಮೊದಲ ಸಭೆ ಮುಕ್ತಾಯ!
ಕಳೆದ 24 ಗಂಟೆಗಳಲ್ಲಿ ಲವ್ ಜಿಹಾದ್ನ 4 ಮತ್ತು ಮತಾಂತರದ 2 ಘಟನೆಗಳು ಬೆಳಕಿಗೆ! : Love Jihad