ಗುಜರಾತ್: ನೋಮಾನ್‌ನಿಂದ ೭ ವರ್ಷದ ಬಾಲಕನ ಮೇಲೆ ಮಸೀದಿಯ ಮೇಲ್ಛಾವಣಿಯಲ್ಲಿ ಅತ್ಯಾಚಾರ!

ಕರ್ಣಾವತಿ (ಗುಜರಾತ್) – ಇಲ್ಲಿನ ಜಮಾಲ್‌ಪುರ ಭಾಗದ ಗಾಯಕ್ವಾಡ್ ಹವೇಲಿ ಪ್ರದೇಶದಲ್ಲಿ ೨೩ ವರ್ಷದ ನೋಮಾನ್ ಶೇಖ್ ಎಂಬಾತ ೭ ವರ್ಷದ ಬಾಲಕನ ಮೇಲೆ ಅತ್ಯಾಚಾರ ಎಸಗಿದ್ದಾನೆ. ನಮಾಜ್ ಕಲಿಸುವ ನೆಪದಲ್ಲಿ ಬಾಲಕನನ್ನು ಮಸೀದಿಯ ಮೇಲ್ಛಾವಣಿಗೆ ಕರೆದೊಯ್ದ ನೋಮಾನ್ ಅಲ್ಲಿ ಆತನ ಮೇಲೆ ದೌರ್ಜನ್ಯ ಎಸಗಿದ್ದಾನೆ. ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ನೋಮಾನ್‌ನನ್ನು ಬಂಧಿಸಿದ್ದಾರೆ. ಈತ ಸಂತ್ರಸ್ತ ಬಾಲಕನ ನೆರೆಮನೆಯವನೇ ಆಗಿದ್ದಾನೆ.

ನೋಮಾನ್ ನಡೆಸಿದ ದೌರ್ಜನ್ಯದ ನಂತರ ಬಾಲಕನು ಮನೆಗೆ ಮರಳಿ ತನಗೆ ನಡೆದ ಅನ್ಯಾಯದ ಬಗ್ಗೆ ತಿಳಿಸಿದ್ದಾನೆ. ಬಾಲಕನ ಆರೋಗ್ಯ ಸ್ಥಿತಿ ಹದಗೆಟ್ಟಿರುವುದನ್ನು ಕಂಡ ಕುಟುಂಬಸ್ಥರು ತಕ್ಷಣ ಆಸ್ಪತ್ರೆಗೆ ದಾಖಲಿಸಿದ್ದಾರೆ. ಬಾಲಕನ ಹೇಳಿಕೆಯನ್ನು ದಾಖಲಿಸಿಕೊಂಡ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ. ಹತ್ತಿರದ ಸಿಸಿಟಿವಿ ದೃಶ್ಯಾವಳಿಗಳಲ್ಲಿ ನೋಮಾನ್ ಬಾಲಕನನ್ನು ಮಸೀದಿಯ ಮೇಲ್ಛಾವಣಿಗೆ ಕರೆದೊಯ್ಯುತ್ತಿರುವುದು ಕಂಡುಬಂದಿದೆ. ಇದರ ಆಧಾರದ ಮೇಲೆ ಪೊಲೀಸರು ನೋಮಾನ್‌ನನ್ನು ಬಂಧಿಸಿದ್ದಾರೆ.

ಸಂಪಾದಕೀಯ ನಿಲುವು

  • ಭಾರತದಲ್ಲಿ ಮದರಸಾಗಳು ಮಾತ್ರವಲ್ಲದೆ, ಮಸೀದಿಗಳೂ ಸಹ ಕಾಮದ ಹಸಿವನ್ನು ನೀಗಿಸುವ ಕೇಂದ್ರಗಳಾಗುತ್ತಿವೆ ಎಂಬುದು ಪದೇ ಪದೇ ನಡೆಯುತ್ತಿರುವ ಇಂತಹ ಘಟನೆಗಳಿಂದ ಸಾಬೀತಾಗುತ್ತಿದೆ. ಆದಾಗ್ಯೂ, ಇದರ ವಿರುದ್ಧ ನೀವು ಮಾತನಾಡಿದರೆ, ನಿಮ್ಮನ್ನು ಮತಾಂಧರು ಮತ್ತು ಮುಸ್ಲಿಂ ವಿರೋಧಿಗಳು (ಇಸ್ಲಾಮೋಫೋಬಿಕ್) ಎಂದು ಕರೆಯಲಾಗುತ್ತದೆ ಎಂಬುದು ನೆನಪಿರಲಿ!
  • ಇಂತಹ ಹೀನ ಕೃತ್ಯಗಳನ್ನು ಎಸಗುವ ಮೂಲಕ ಕಾಮುಕರು ಇಸ್ಲಾಂ ಧರ್ಮಕ್ಕೇ ಕಳಂಕ ತರುತ್ತಿದ್ದಾರೆ ಎಂಬುದನ್ನು ಇಸ್ಲಾಮಿಕ್ ಧರ್ಮಗುರುಗಳು, ಮುಲ್ಲಾ-ಮೌಲ್ವಿಗಳು ಗಮನಿಸುವರೇ? ನೋಮಾನ್ ವಿರುದ್ಧ ಶರಿಯತ್ ಪ್ರಕಾರ ಫತ್ವಾ ಹೊರಡಿಸುವರೇ?