ಲಕ್ಷ್ಮಣಪುರಿಯಲ್ಲಿ ಗಾಳಿಪಟದ ದಾರದಿಂದ ಗಂಟಲು ಸೀಳಿ ಯುವಕನ ಸಾವು ಪ್ರಕರಣ

ಲಕ್ಷ್ಮಣಪುರಿ (ಉತ್ತರಪ್ರದೇಶ) – ರಾಜಧಾನಿ ಲಕ್ಷ್ಮಣಪುರಿಯ ಬಾಜಾರಖಾಲಾ ಪರಿಸರದಲ್ಲಿ ಚೀನಿ ಮಾಂಜಾದಲ್ಲಿ (ಗಾಳಿಪಟದ ದಾರ) ಸಿಲುಕಿ ಯುವಕನೊಬ್ಬ ಮೃತಪಟ್ಟ ನಂತರ ಉತ್ತರಪ್ರದೇಶ ಸರಕಾರವು ಕಠಿಣ ನಿರ್ಧಾರ ಕೈಗೊಂಡಿದೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ರಾಜ್ಯದಲ್ಲಿ ಚೀನಿ ಮಾಂಜಾ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಿದ್ದಾರೆ. ಈ ಕುರಿತು ಅವರು ಇಡೀ ರಾಜ್ಯಾದ್ಯಂತ ದಾಳಿ ನಡೆಸುವಂತೆ ಪೊಲೀಸ್ ಅಧಿಕಾರಿಗಳಿಗೆ ಆದೇಶ ನೀಡಿದ್ದಾರೆ. ‘ಚೀನಿ ಮಾಂಜಾದಿಂದ ಸಂಭವಿಸುವ ಸಾವುಗಳನ್ನು ಕೊಲೆ ಎಂದು ಪರಿಗಣಿಸಲಾಗುವುದು’ ಎಂದೂ ಅವರು ಸ್ಪಷ್ಟಪಡಿಸಿದ್ದಾರೆ.
೧. ಫೆಬ್ರವರಿ ೪ ರಂದು ಬಾಜಾರಖಾಲಾ ಪರಿಸರದಲ್ಲಿ ಗಾಳಿಪಟದ ದಾರದಿಂದ (ಚೀನಿ ಮಾಂಜಾ) ಯುವಕನೊಬ್ಬನ ಗಂಟಲು ಸೀಳಲ್ಪಟ್ಟಿತು. ಗಂಟಲಿನ ನರ ಕತ್ತರಿಸಲ್ಪಟ್ಟಿದ್ದರಿಂದ ಆ ಯುವಕ ಮೃತಪಟ್ಟನು. ಕೆಲವು ದಿನಗಳ ಹಿಂದೆ ಗಾಳಿಯಲ್ಲಿ ಹಾರುತ್ತಿದ್ದ ಗಾಳಿಪಟದ ದಾರವು ಅಧಿಕ ಒತ್ತಡದ ವಿದ್ಯುತ್ ತಂತಿಯ ಮೇಲೆ ಬಿದ್ದಿದ್ದರಿಂದ ಮೆಟ್ರೋ ರೈಲು ಸೇವೆ ಇದ್ದಕ್ಕಿದ್ದಂತೆ ಸ್ಥಗಿತಗೊಂಡಿತ್ತು.
೨. ಬಾಜಾರಖಾಲಾ ಪೊಲೀಸ್ ಠಾಣೆಯ ನಿರೀಕ್ಷಕ ಬೃಜೇಶ್ ಸಿಂಗ್ ಅವರು ಮಾಹಿತಿ ನೀಡಿ, ಮೇಲ್ಸೇತುವೆಯ ಮೇಲೆ ಹಠಾತ್ ಗಾಳಿಯಲ್ಲಿ ತೂಗಾಡುತ್ತಿದ್ದ ಚೀನಿ ಮಾಂಜಾವು ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದ ಶೋಯೆಬ್ ಎಂಬ ಯುವಕನ ಗಂಟಲಿಗೆ ಸಿಲುಕಿಕೊಂಡಿತು. ಮಾಂಜಾ ಅತ್ಯಂತ ಚೂಪಾಗಿದ್ದರಿಂದ ಅವನ ಗಂಟಲಿನ ನರ ಕತ್ತರಿಸಲ್ಪಟ್ಟಿತು. ಅಲ್ಲಿ ಹಾಜರಿದ್ದ ಜನರು ಅವನನ್ನು ತಕ್ಷಣ ಆಸ್ಪತ್ರೆಗೆ ಕರೆದೊಯ್ದರು; ಆದರೆ ಅತಿಯಾದ ರಕ್ತಸ್ರಾವದಿಂದಾಗಿ ಅವನು ಮೃತಪಟ್ಟನು ಎಂದು ತಿಳಿಸಿದರು.
ಸಂಪಾದಕೀಯ ನಿಲುವುಕೇವಲ ಉತ್ತರಪ್ರದೇಶದಲ್ಲಿ ಮಾತ್ರವಲ್ಲದೆ, ಇಡೀ ಭಾರತದಲ್ಲಿ ಇದರ ಮೇಲೆ ನಿಷೇಧ ಹೇರಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದು ಅವಶ್ಯಕ! |
ಕೇರಳಮ್ದಲ್ಲಿ ‘ಇಸ್ಲಾಂ ಫ್ರೆಂಡ್ಲಿ’ ಜಿಮ್ ಕುರಿತು ವಿವಾದ
ಪುಣೆ ನಗರದಲ್ಲಿ ಮತ್ತೆ ‘ಕಾರ್ಪೊರೇಟ್ ಜಿಹಾದ್’ ಪ್ರಕರಣ
‘ದಾರುಲ್ ಉಲೂಮ್ ದೇವಬಂದ್’ ಭಯೋತ್ಪಾದಕರ ಕೇಂದ್ರವಾಗಿರುವುದರಿಂದ ಅದನ್ನು ನೆಲಸಮ ಮಾಡಿ ! – ಹಿಂದೂ ರಕ್ಷಾ ದಳದ ಬೇಡಿಕೆ
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭಗವಾನ್ ಶಿವನ ರೂಪದಲ್ಲಿ ತೋರಿಸಿದ ‘ವಿಶ್ವವಾಣಿ’ ಪತ್ರಿಕೆ !
‘ಭಂಡಾರ ಎಂದರೆ ಶುದ್ಧ ಅರಿಶಿನ’ ಎಂದು ಘೋಷಿಸುವಂತೆ ಅನ್ನ ಮತ್ತು ಔಷಧ ಆಡಳಿತಕ್ಕೆ (FDA) ಆಗ್ರಹ!
ಪಾನ್ ಮಸಾಲಾ, ಗುಟ್ಕಾ ಮತ್ತು ಕಲಬೆರಕೆ ಆಹಾರ ಪದಾರ್ಥಗಳ ಒಂದೂವರೆ ಕೋಟಿಗೂ ಹೆಚ್ಚು ಮೌಲ್ಯದ ದಾಸ್ತಾನು ವಶ