|

ಗುಂಟೂರು (ಆಂಧ್ರಪ್ರದೇಶ) – ಇಲ್ಲಿನ ವಿರೋಧ ಪಕ್ಷವಾದ ವೈ.ಎಸ್.ಆರ್. ಕಾಂಗ್ರೆಸ್ (ಯುವಜನ ಶ್ರಮಿಕ ರೈತ ಕಾಂಗ್ರೆಸ್) ಅಧ್ಯಕ್ಷ ಅಂಬಾಟಿ ರಾಂಬಾಬು ಅವರು ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರಿಗೆ ಅವಾಚ್ಯ ಪದಗಳಿಂದ ನಿಂದಿಸಿದರು. ಈ ಹಿನ್ನೆಲೆಯಲ್ಲಿ ಆಡಳಿತಾರೂಢ ತೆಲುಗು ದೇಶಂ ಪಕ್ಷದ (‘ಟಿಡಿಪಿ’) ಕಾರ್ಯಕರ್ತರು ರಾಂಬಾಬು ಅವರ ಮನೆಯ ಮೇಲೆ ದಾಳಿ ನಡೆಸಿದರು. ದೂರಿನ ನಂತರ ಪೊಲೀಸರು ರಾಂಬಾಬು ಅವರನ್ನು ಅವರ ಮನೆಯಿಂದ ಬಂಧಿಸಿದ್ದಾರೆ. ಇದೀಗ ವೈ.ಎಸ್.ಆರ್. ಕಾಂಗ್ರೆಸ್ ಈ ವಿಷಯದಲ್ಲಿ ರಾಜಕೀಯ ಮಾಡಲು ಆರಂಭಿಸಿದೆ.
ರಾಂಬಾಬು ಅವರು ನಾಯ್ಡು ಅವರ ವಿರುದ್ಧ ಅಪಶಬ್ದಗಳನ್ನು ಬಳಸಿದ ನಂತರ, ಟಿಡಿಪಿ ಕಾರ್ಯಕರ್ತರು ಗುಂಟೂರಿನ ರಸ್ತೆಗಳಲ್ಲಿ ಹಾಗೂ ರಾಂಬಾಬು ಅವರ ಮನೆಯ ಬಳಿ ಹಲವು ಗಂಟೆಗಳ ಕಾಲ ಪ್ರತಿಭಟನೆ ನಡೆಸಿದರು. ತದನಂತರ ಅಂಬಾಟಿ ಅವರ ಮನೆ ಮತ್ತು ಕಾರುಗಳನ್ನು ಧ್ವಂಸಗೊಳಿಸಿದ್ದಲ್ಲದೆ, ಬೆಂಕಿ ಹಚ್ಚಿದರು. ರಾಂಬಾಬು ಅವರು ಈ ಹಿಂದಿನ ಸರಕಾರದಲ್ಲಿ ಜಲಸಂಪನ್ಮೂಲ ಸಚಿವರಾಗಿದ್ದರು.
‘ಸರಕಾರವನ್ನು ಪ್ರಶ್ನಿಸುವವರ ಧ್ವನಿಯನ್ನು ಅಡಗಿಸುವ ವ್ಯವಸ್ಥಿತ ಸಂಚು!’ – ವೈ.ಎಸ್.ಆರ್. ಕಾಂಗ್ರೆಸ್ ಆರೋಪವೈ.ಎಸ್.ಆರ್. ಕಾಂಗ್ರೆಸ್ ಆರೋಪದ ಪ್ರಕಾರ, ರಾಂಬಾಬು ಅವರ ಮೇಲೆ ಮಾರಣಾಂತಿಕ ದಾಳಿ ನಡೆಸಲಾಗಿದೆ. ಅವರ ಜೀವಕ್ಕೆ ಗಂಭೀರ ಅಪಾಯವಿದೆ. ಆಂಧ್ರಪ್ರದೇಶದಲ್ಲಿ ಜಂಗಲ್ ರಾಜ್ ಅಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಮುಖ್ಯಮಂತ್ರಿ ನಾಯ್ಡು ಅವರು ಆರಾಜಕತೆ ಮತ್ತು ರಾಜಕೀಯ ಸೇಡಿನ ವಾತಾವರಣದ ಅಧ್ಯಕ್ಷತೆ ವಹಿಸುತ್ತಿದ್ದಾರೆ ಎಂದು ದೂರಿದೆ. ಸರಕಾರವನ್ನು ಪ್ರಶ್ನಿಸುವ ಧ್ವನಿಗಳನ್ನು ಹೆದರಿಸಲು ಉದ್ದೇಶಪೂರ್ವಕವಾಗಿ ಹೀಗೆ ಮಾಡಲಾಗುತ್ತಿದೆ. ಇದು ಒಂದು ವ್ಯವಸ್ಥಿತ ಪಿತೂರಿಯಾಗಿದೆ, ಎಂದು ಹೇಳಿದರು. ಮುಖ್ಯಮಂತ್ರಿಯನ್ನು ನಿಂದಿಸುವುದು ಎಂದರೆ ಸರಕಾರದ ವಿರುದ್ಧ ಧ್ವನಿ ಎತ್ತುವುದು ಎಂದು ಹೇಳುವ ವೈ.ಎಸ್.ಆರ್. ಕಾಂಗ್ರೆಸ್‌ನ ವೈಚಾರಿಕ ದಿವಾಳಿತನ ಇದರಿಂದ ಸ್ಪಷ್ಟವಾಗುತ್ತದೆ! |
ಸಂಪಾದಕೀಯ ನಿಲುವುಭಾರತೀಯ ರಾಜಕಾರಣದ ಅಧಃಪತನವನ್ನು ತೋರಿಸುವ ಘಟನೆ ಇದು! ವಿರೋಧ ಪಕ್ಷದ ಅಧ್ಯಕ್ಷರು ಸಾಂವಿಧಾನಿಕ ಹುದ್ದೆಯಲ್ಲಿರುವ ಮುಖ್ಯಮಂತ್ರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸುವುದು ಆಕ್ರೋಶದ ಸಂಗತಿ! ಇನ್ನೊಂದೆಡೆ ಆಡಳಿತ ಪಕ್ಷದ ಕಾರ್ಯಕರ್ತರು ಅವರ ಮನೆಯ ಮೇಲೆ ದಾಳಿ ಮಾಡುವುದು ಕೂಡ ಅಷ್ಟೇ ಅಸ್ವೀಕಾರಾರ್ಹ. ಇಂತಹ ಘಟನೆಗಳಿಂದ ‘ಯಥಾ ರಾಜಾ ತಥಾ ಪ್ರಜಾ’ ಎಂಬಂತೆ ರಾಜ್ಯದ ಜನರ ಮುಂದೆ ಯಾವ ಮಾದರಿಯನ್ನು ಇಡಲಾಗುತ್ತಿದೆ ಎಂಬುದು ಬೇರೆ ಹೇಳಬೇಕಿಲ್ಲ! |
‘ಜೀವೋತ್ತಮ ವಿದ್ಯಾಪೀಠಂ’ ಸನಾತನ ಧರ್ಮದ ರಕ್ಷಣೆಯಲ್ಲಿ ಮಹತ್ವದ ಪಾತ್ರ ವಹಿಸಲಿದೆ! – ಶ್ರೀಮದ್ ವಿದ್ಯಾಧೀಶ ತೀರ್ಥ ಶ್ರೀಪಾದ ವಡೇರ ಸ್ವಾಮೀಜಿ
‘ಎನ್ಸಿಇಆರ್ಟಿ’ಯ 9ನೇ ತರಗತಿಯ ಪುಸ್ತಕದಲ್ಲಿ ತುರ್ತು ಪರಿಸ್ಥಿತಿಯ ಮಾಹಿತಿ ಸೇರ್ಪಡೆ : NCERT Introduces Emergency
ಆರೋಪಿ ಭೀಮರಾವ್ ಕಾಂಬ್ಳೆಗೆ ದೋಷಿ ಎಂದು ತೀರ್ಪು; ಜೂನ್ 29 ರಂದು ಅಂತಿಮ ಶಿಕ್ಷೆ ಪ್ರಕಟ : Nasrapur Case
ಎನ್ಸಿಇಆರ್ಟಿ ಪಠ್ಯದಲ್ಲಿ ಮರಾಠಾ ಸಾಮ್ರಾಜ್ಯದ ಇತಿಹಾಸ: ಮಹಾರಾಷ್ಟ್ರ ಶಿಕ್ಷಣ ಸಚಿವರ ಆಗ್ರಹ
ಶ್ರೀರಾಮಮಂದಿರದಲ್ಲಿ ದೇಣಿಗೆ ಕಳ್ಳತನ ಪ್ರಕರಣ ದೂರು ದಾಖಲು : ಇಬ್ಬರ ಬಂಧನ
ಘಾಜಿಯಾಬಾದ್ (ಉತ್ತರ ಪ್ರದೇಶ) ಇಲ್ಲಿ ವೈದ್ಯ ನದೀಮ್ ನಿಂದ ರೋಗಿಯ ತಪ್ಪು ರಕ್ತನಾಳ ಕತ್ತರಿಸಿದ! : Doctor cuts wrong Vein