ವಿಮಾನ ಅಪಘಾತದಲ್ಲಿ ಏನೋ ಸಂಚು ಇರಬಹುದು, ಆದ್ದರಿಂದ ಕೂಲಂಕುಷ ತನಿಖೆ ಆಗಬೇಕು!

ಅಜಿತ್ ಪವಾರ್ ಅವರ ವಿಮಾನ ಅಪಘಾತದ ಕುರಿತು ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಆಗ್ರಹ

ಕೋಲಕಾತಾ (ಬಂಗಾಳ) – ಅಜಿತ್ ಪವಾರ್ ಅವರು ಮೈತ್ರೀಕೂಟದಿಂದ ದೂರವಾಗುತ್ತಿದ್ದರು. ಅವರು ಮತ್ತೆ ಶರದ್ ಪವಾರ್ ಅವರೊಂದಿಗೆ ಹೋಗುವ ಬಗ್ಗೆ ಯೋಚಿಸುತ್ತಿದ್ದರು ಎಂದು ನನಗೆ ತಿಳಿದುಬಂದಿದೆ. ಆದ್ದರಿಂದ ಈ ಘಟನೆಯಲ್ಲಿ ಯಾವುದೋ ಸಂಚು ಇರುವ ಸಾಧ್ಯತೆಯಿದೆ. ಈ ಪ್ರಕರಣದ ಬಗ್ಗೆ ಕುಲಂಕುಶವಾಗಿ ತನಿಖೆಯಾಗಬೇಕು, ಎಂದು ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆಗ್ರಹಿಸಿದ್ದಾರೆ.

‘ದೇಶದಲ್ಲಿ ಈಗ ಯಾರೂ ಸುರಕ್ಷಿತವಾಗಿಲ್ಲ ಮತ್ತು ನಮಗೆ ಸುಪ್ರೀಂ ಕೋರ್ಟ್ ಹೊರತುಪಡಿಸಿ ಬೇರೆ ಯಾವುದೇ ವ್ಯವಸ್ಥೆಯ ಮೇಲೆ ನಂಬಿಕೆಯಿಲ್ಲ,’ ಎಂದೂ ಅವರು ಹೇಳಿದ್ದಾರೆ. (ಪ್ರತಿಯೊಂದು ಘಟನೆಯಲ್ಲೂ ರಾಜಕೀಯ ಮಾಡಲು ನೋಡುವ ಮಮತಾ ಬ್ಯಾನರ್ಜಿ ಅವರನ್ನು ಎಷ್ಟು ನಿಷೇಧಿಸಿದರೂ (ಖಂಡಿಸಿದರೂ) ಸಾಲದು! ಇಂತಹ ಸಮಾಜದ್ರೋಹಿ ನಾಯಕರಿಂದಲೇ ದೇಶಕ್ಕೆ ಹಾನಿಯಾಗುತ್ತಿದೆ ಎನ್ನುವುದೇ ನಿಜ! – ಸಂಪಾದಕರು)