ಒಂದು ಕಾರ್ಯಕ್ರಮದಲ್ಲಿ ‘ಕಾರ್ತಿಗೈ ದೀಪಂ’ ಮಾದರಿಯ ದೀಪವನ್ನು ಬೆಳಗಿಸುವಾಗ ಮದ್ರಾಸ್ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಸ್ವಾಮಿನಾಥನ್ ಅವರ ಮಾರ್ಮಿಕ ಹೇಳಿಕೆ !

ಚೆನ್ನೈ (ತಮಿಳುನಾಡು) – ಇಲ್ಲಿ ಜನವರಿ 24 ರಂದು ನಡೆದ ‘ಧಾರಾ ಡಿವೈನ್ ಅವಾರ್ಡ್ಸ್’ ಕಾರ್ಯಕ್ರಮವನ್ನು ಮದ್ರಾಸ್ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಜಿ.ಆರ್. ಸ್ವಾಮಿನಾಥನ್ ಅವರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ನ್ಯಾಯಮೂರ್ತಿ ಸ್ವಾಮಿನಾಥನ್ ಅವರು ಈ ಹಿಂದೆ ರಾಜ್ಯದ ತಿರುಪ್ಪರನ್ಕುಂಡ್ರಂ ಬೆಟ್ಟದ ಮೇಲಿರುವ ಕಲ್ಲಿನ ಸ್ತಂಭದ ಮೇಲೆ ‘ಕಾರ್ತಿಗೈ ದೀಪಂ’ ಬೆಳಗಿಸಲು ಅನುಮತಿ ನೀಡಿದ್ದರು. ಪ್ರಸ್ತುತ ಕಾರ್ಯಕ್ರಮದಲ್ಲಿ ಅವರು ಬೆಳಗಿದ ದೀಪವೂ ಅದೇ ಮಾದರಿಯದ್ದಾಗಿತ್ತು. ಇದನ್ನು ಗಮನಿಸಿ ನ್ಯಾಯಮೂರ್ತಿ ಸ್ವಾಮಿನಾಥನ್ ಅವರು ಹಾಸ್ಯ ಮಾಡುತ್ತಾ, “ನಾನು ಸರಿಯಾದ ದೀಪವನ್ನೇ ಹಚ್ಚುತ್ತಿದ್ದೇನೆ ತಾನೇ? ಅಥವಾ ಇದೇನಾದರೂ ಸಮೀಕ್ಷೆಗಾಗಿ ಇಟ್ಟಿರುವ ಕಲ್ಲೇ? ನನ್ನ ಸೇವಾವಧಿಯಲ್ಲಿ ಇನ್ನು ನಾಲ್ಕುವರೆ ವರ್ಷಗಳು ಬಾಕಿ ಇವೆ, ಅಷ್ಟರೊಳಗೆ ನನ್ನ ಅಮಾನತು ಆಗಬಾರದು” ಎಂದು ಹೇಳಿದರು. ಇಂದಿನ ಕಾರ್ಯಕ್ರಮವು ಸನಾತನ ಧರ್ಮವು ಮತ್ತಷ್ಟು ಬಲಗೊಳ್ಳುತ್ತದೆ ಎಂಬ ಭರವಸೆಯನ್ನು ನೀಡುತ್ತದೆ ಎಂದೂ ಅವರು ಉಲ್ಲೇಖಿಸಿದರು.
ತಿರುಪ್ಪರನ್ಕುಂಡ್ರಂ ದೇವಸ್ಥಾನದಲ್ಲಿ ದೀಪ ಬೆಳಗಲು ನೀಡಿದ ತೀರ್ಪಿನಿಂದಾಗಿ, ನ್ಯಾಯಮೂರ್ತಿ ಸ್ವಾಮಿನಾಥನ್ ಅವರು ರಾಜ್ಯದ ಆಡಳಿತಾರೂಢ ಡಿಎಂಕೆ (ದ್ರಾವಿಡ ಮುನ್ನೇಟ್ರ ಕಳಗಂ) ಪಕ್ಷದಿಂದ ಟೀಕೆಗಳನ್ನು ಎದುರಿಸಬೇಕಾಗಿ ಬಂದಿತ್ತು.
‘ಎನ್ಸಿಇಆರ್ಟಿ’ಯ 9ನೇ ತರಗತಿಯ ಪುಸ್ತಕದಲ್ಲಿ ತುರ್ತು ಪರಿಸ್ಥಿತಿಯ ಮಾಹಿತಿ ಸೇರ್ಪಡೆ : NCERT Introduces Emergency
ಆರೋಪಿ ಭೀಮರಾವ್ ಕಾಂಬ್ಳೆಗೆ ದೋಷಿ ಎಂದು ತೀರ್ಪು; ಜೂನ್ 29 ರಂದು ಅಂತಿಮ ಶಿಕ್ಷೆ ಪ್ರಕಟ : Nasrapur Case
ಎನ್ಸಿಇಆರ್ಟಿ ಪಠ್ಯದಲ್ಲಿ ಮರಾಠಾ ಸಾಮ್ರಾಜ್ಯದ ಇತಿಹಾಸ: ಮಹಾರಾಷ್ಟ್ರ ಶಿಕ್ಷಣ ಸಚಿವರ ಆಗ್ರಹ
ಶ್ರೀರಾಮಮಂದಿರದಲ್ಲಿ ದೇಣಿಗೆ ಕಳ್ಳತನ ಪ್ರಕರಣ: ಅಂತಿಮವಾಗಿ ದೂರು ದಾಖಲು
ಘಾಜಿಯಾಬಾದ್ (ಉತ್ತರ ಪ್ರದೇಶ) ಇಲ್ಲಿ ವೈದ್ಯ ನದೀಮ್ ನಿಂದ ರೋಗಿಯ ತಪ್ಪು ರಕ್ತನಾಳ ಕತ್ತರಿಸಿದ! : Doctor cuts wrong Vein
ದೇವತೆ, ಭಾರತಮಾತೆ ಮತ್ತು ರಾಜಕೀಯ ಹುತಾತ್ಮರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಲು ಸಾಧ್ಯವಿಲ್ಲ !