
ನಾಗೌರ್ (ರಾಜಸ್ಥಾನ) – ಇಲ್ಲಿನ ಹರಸೌರ್ ಗ್ರಾಮದ ಜಮೀನೊಂದರಲ್ಲಿ ಪೊಲೀಸರು ಭಾರಿ ಪ್ರಮಾಣದ ಸ್ಫೋಟಕಗಳನ್ನು ವಶಪಡಿಸಿಕೊಂಡಿದ್ದಾರೆ. ಇಲ್ಲಿ 187 ಚೀಲಗಳಲ್ಲಿ ಸಂಗ್ರಹಿಸಿಟ್ಟಿದ್ದ 9,550 ಕೆಜಿ ಅಮೋನಿಯಂ ನೈಟ್ರೇಟ್ ಪತ್ತೆಯಾಗಿದೆ. ಇದರೊಂದಿಗೆ ದೊಡ್ಡ ಪ್ರಮಾಣದ ಡಿಟೋನೇಟರ್‌ಗಳು ಮತ್ತು ಫ್ಯೂಸ್ ವೈರ್‌ಗಳನ್ನು ಸಹ ಜಪ್ತಿ ಮಾಡಲಾಗಿದೆ. ಘಟನಾ ಸ್ಥಳದಲ್ಲಿ ಸುಲೇಮಾನ್ ಖಾನ್ (50 ವರ್ಷ) ಎಂಬಾತನನ್ನು ಬಂಧಿಸಲಾಗಿದ್ದು, ಈತನ ವಿರುದ್ಧ ಈಗಾಗಲೇ 3 ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ. ನವೆಂಬರ್ 10, 2025 ರಂದು ದೆಹಲಿಯ ಕೆಂಪು ಕೋಟೆಯ ಬಳಿ ನಡೆದ ಬಾಂಬ್ ಸ್ಫೋಟದಲ್ಲಿ ಅಮೋನಿಯಂ ನೈಟ್ರೇಟ್ ಬಳಸಲಾಗಿತ್ತು. ಅದರ ಒಂದು ದಿನ ಮೊದಲು ಹರಿಯಾಣದ ಧೌಜ್ ಗ್ರಾಮದಲ್ಲಿ ಸುಮಾರು 3,000 ಕೆಜಿ ಅಮೋನಿಯಂ ನೈಟ್ರೇಟ್ ವಶಪಡಿಸಿಕೊಳ್ಳಲಾಗಿತ್ತು.
🛡️ Security Alert: Huge Explosive Stock Seized in Rajasthan
On the eve of #RepublicDay, Rajasthan Police foiled a massive threat by seizing nearly 10,000 kg of explosives in Harsaur village (Thawla), Nagaur
👤 Accused Suleman Khan arrested.
pic.twitter.com/bzWhQGzHUW— Sanatan Prabhat (@SanatanPrabhat) January 26, 2026
ಪೊಲೀಸ್ ಅಧೀಕ್ಷಕರು ನೀಡಿರುವ ಮಾಹಿತಿ ಪ್ರಕಾರ, ಸುಲೇಮಾನ್ ಈ ಸ್ಫೋಟಕಗಳನ್ನು ಕಾನೂನುಬದ್ಧ ಮತ್ತು ಕಾನೂನುಬಾಹಿರ ಗಣಿಗಾರಿಕೆ ನಡೆಸುವವರಿಗೆ ಮಾರಾಟ ಮಾಡುತ್ತಿದ್ದ. ಆದರೂ, ಸ್ಫೋಟಕಗಳು ಪತ್ತೆಯಾಗಿರುವ ಬಗ್ಗೆ ಕೇಂದ್ರ ತನಿಖಾ ಸಂಸ್ಥೆಗಳಿಗೂ ಮಾಹಿತಿ ನೀಡಲಾಗಿದ್ದು, ಸುಲೇಮಾನ್‌ನನ್ನು ವಿಚಾರಣೆಗೆ ಒಳಪಡಿಸಲಿದ್ದಾರೆ.
ಅಮೋನಿಯಂ ನೈಟ್ರೇಟ್ ಬಗ್ಗೆ ಪ್ರಮುಖ ಮಾಹಿತಿ!
ಅಮೋನಿಯಂ ನೈಟ್ರೇಟ್ ಸ್ಫೋಟಕವಲ್ಲ; ಆದರೆ ಅದನ್ನು ಡೀಸೆಲ್ ಅಥವಾ ಇನ್ನಾವುದೇ ಇಂಧನದೊಂದಿಗೆ ಬೆರೆಸಿದರೆ, ಅದು ಅಪಾಯಕಾರಿ ಬಾಂಬ್ ಆಗಿ ರೂಪಾಂತರಗೊಳ್ಳುತ್ತದೆ. ಇದು ವಾಸನೆ ಇಲ್ಲದ, ಬಿಳಿ ಹರಳಿನ ರೂಪದ ರಾಸಾಯನಿಕವಾಗಿದೆ. ವಿಶೇಷವಾಗಿ ರಸಗೊಬ್ಬರ ತಯಾರಿಕೆಯಲ್ಲಿ ಇದನ್ನು ಬಳಸಲಾಗುತ್ತದೆ. ವಿಶ್ವಾದ್ಯಂತ ಬಳಸಲಾಗುವ ನೈಟ್ರೇಟ್ ಆಧಾರಿತ ಗೊಬ್ಬರಗಳ ಬಳಕೆ ಸಾಮಾನ್ಯವಾಗಿದೆ. |

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭಗವಾನ್ ಶಿವನ ರೂಪದಲ್ಲಿ ತೋರಿಸಿದ ‘ವಿಶ್ವವಾಣಿ’ ಪತ್ರಿಕೆ !
‘ಭಂಡಾರ ಎಂದರೆ ಶುದ್ಧ ಅರಿಶಿನ’ ಎಂದು ಘೋಷಿಸುವಂತೆ ಅನ್ನ ಮತ್ತು ಔಷಧ ಆಡಳಿತಕ್ಕೆ (FDA) ಆಗ್ರಹ!
ಪಾನ್ ಮಸಾಲಾ, ಗುಟ್ಕಾ ಮತ್ತು ಕಲಬೆರಕೆ ಆಹಾರ ಪದಾರ್ಥಗಳ ಒಂದೂವರೆ ಕೋಟಿಗೂ ಹೆಚ್ಚು ಮೌಲ್ಯದ ದಾಸ್ತಾನು ವಶ
‘ಲವ್ ಜಿಹಾದ್’, ‘ಲ್ಯಾಂಡ್ ಜಿಹಾದ್’ ಇವೆಲ್ಲಾ ಮೂರ್ಖತನದ ಸಂಗತಿಗಳಂತೆ !
ತುಮಕೂರಿನಲ್ಲಿ ಶ್ರೀರಾಮಮಂದಿರದ ಹತ್ತಿರ ಅಲ್ಪಸಂಖ್ಯಾತರ ವಸತಿಗೃಹ ನಿರ್ಮಿಸುವ ಸಂಚು !
ನಾಗಪುರ: ಮಾನಸಿಕ ಒತ್ತಡದಿಂದಾಗಿ ‘ನೀಟ್’ ಪರೀಕ್ಷೆಯ ವಿದ್ಯಾರ್ಥಿನಿ ಆತ್ಮಹತ್ಯೆ