|

ಪಣಜಿ, ಫೆಬ್ರವರಿ ೨೫ (ಸುದ್ದಿ) – ಗೋಮಾಂತಕವು ಪರಶುರಾಮ ಭೂಮಿಯಾಗಿದೆ. ಈ ಭೂಮಿಗೂ ಹಸುವಿಗೂ ನೇರ ಸಂಬಂಧವಿದೆ. ಗೋವಾವನ್ನು ಛತ್ರಪತಿ ಶಿವಾಜಿ ಮಹಾರಾಜರು ಆಳಿದ್ದರು. ಗೋವಾ ರಾಜ್ಯದ ಒಂದು ವಿಶೇಷ ವಿಷಯವನ್ನು ನಾನು ಹೇಳುತ್ತೇನೆ. ಇಲ್ಲಿ ಸನಾತನದ ಶುದ್ಧವಾದ ಸಂಸ್ಥೆಯೊಂದು ಕಾರ್ಯನಿರ್ವಹಿಸುತ್ತಿದೆ, ಅದೇ ಸನಾತನ ಸಂಸ್ಥೆ. ನಾನು ಗುರುದೇವ ಡಾ. ಆಠವಲೆ (ಸನಾತನ ಸಂಸ್ಥೆಯ ಸ್ಥಾಪಕರು) ಅವರ ಆಶೀರ್ವಾದವನ್ನೂ ಪಡೆದಿದ್ದೇನೆ. ಅವರು ಪವಿತ್ರ ಆತ್ಮರಾಗಿದ್ದಾರೆ! ನಮ್ಮ ವಾಣಿ, ಆಹಾರ, ವಿಚಾರ, ವ್ಯವಹಾರ ಮತ್ತು ಸ್ವಭಾವ ಇವೆಲ್ಲದರಲ್ಲೂ ಸನಾತನ ಧರ್ಮವು ಮೈಗೂಡಬೇಕು ಎಂಬ ಉದ್ದೇಶಕ್ಕಾಗಿ ಸನಾತನ ಸಂಸ್ಥೆಯು ಕೆಲಸ ಮಾಡುತ್ತಿದೆ. ಸನಾತನ ಧರ್ಮದ ಶಾಶ್ವತ ಸಿದ್ಧಾಂತಗಳು ಕೇವಲ ಒಂದು ವರ್ಗಕ್ಕಾಗಲಿ ಅಥವಾ ಒಂದು ಜಾತಿಗಾಗಲಿ ಸೀಮಿತವಾಗಿಲ್ಲ. ಅವು ಇಡೀ ವಿಶ್ವದ ಕಲ್ಯಾಣಕ್ಕಾಗಿ ಇವೆ. ಸನಾತನ ಧರ್ಮಯುಗವು ಪ್ರತಿಷ್ಠಾಪನೆಯಾಗಲಿ ಎಂಬ ಕಾರಣಕ್ಕೆ ಸನಾತನ ಸಂಸ್ಥೆಯು ಬಹಳ ದೊಡ್ಡ ಪುರುಷಾರ್ಥವನ್ನು ಮಾಡುತ್ತಿದೆ ಎಂದು ಯೋಗ ಋಷಿ ರಾಮದೇವ್ ಬಾಬಾ ಅವರು ಶ್ಲಾಘಿಸಿದರು.
Yogarishi Ramdev Baba praises @SanatanSanstha’s mission! 🔱
During his Goa visit, @yogrishiramdev expressed his deep appreciation for the Sanstha and shared his gratitude for the blessings of the "pure soul" Sachchidananda Parabrahman (Dr) Jayant Athavale#GoaNews… pic.twitter.com/XrgvokRQcp
— Sanatan Prabhat (@SanatanPrabhat) January 25, 2026
ಪಣಜಿಯಲ್ಲಿ ‘ಇಂಡಿಯಾ ಇಂಟರ್ನ್ಯಾಷನಲ್ ಆಯುರ್ವೇದ ಅಂಡ್ ವೆಲ್ನೆಸ್ ಎಕ್ಸ್‌ಪೋ ಅಂಡ್ ಸಮಿಟ್ ೨೦೨೬’ ಈ ಹೆಸರಿನಲ್ಲಿ ನಡೆದ ಕಾರ್ಯಕ್ರಮದ ನಂತರ ಅವರು ಮಾಧ್ಯಮಗಳೊಂದಿಗೆ ಮಾತನಾಡುತ್ತಿದ್ದರು. ಇದರ ಅಡಿಯಲ್ಲಿ ಯೋಗ ಋಷಿ ರಾಮದೇವ್ ಬಾಬಾ ಅವರು ಭಾರತೀಯ ಆಡಳಿತ ಸೇವಾ ಅಧಿಕಾರಿ (ಐ.ಎ.ಎಸ್), ಭಾರತೀಯ ಪೊಲೀಸ್ ಸೇವಾ ಅಧಿಕಾರಿ (ಐ.ಪಿ.ಎಸ್), ಪೊಲೀಸ್ ಸಿಬ್ಬಂದಿ ಹಾಗೂ ಎಲ್ಲಾ ಸರಕಾರಿ ಅಧಿಕಾರಿಗಳಿಗಾಗಿ ಪಣಜಿಯ ಯೋಗ-ಸೇತುವಿನಲ್ಲಿ ವಿಶೇಷ ಯೋಗ ತರಗತಿಯನ್ನು ಆಯೋಜಿಸಿದ್ದರು. ಆ ಸಮಯದಲ್ಲಿ ಯೋಗಋಷಿ ರಾಮದೇವ್ ಬಾಬಾ ಮಾತನಾಡುತ್ತಿದ್ದರು.
ಕೇರಳಮ್ದಲ್ಲಿ ‘ಇಸ್ಲಾಂ ಫ್ರೆಂಡ್ಲಿ’ ಜಿಮ್ ಕುರಿತು ವಿವಾದ
ಪುಣೆ ನಗರದಲ್ಲಿ ಮತ್ತೆ ‘ಕಾರ್ಪೊರೇಟ್ ಜಿಹಾದ್’ ಪ್ರಕರಣ
‘ದಾರುಲ್ ಉಲೂಮ್ ದೇವಬಂದ್’ ಭಯೋತ್ಪಾದಕರ ಕೇಂದ್ರವಾಗಿರುವುದರಿಂದ ಅದನ್ನು ನೆಲಸಮ ಮಾಡಿ ! – ಹಿಂದೂ ರಕ್ಷಾ ದಳದ ಬೇಡಿಕೆ
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭಗವಾನ್ ಶಿವನ ರೂಪದಲ್ಲಿ ತೋರಿಸಿದ ‘ವಿಶ್ವವಾಣಿ’ ಪತ್ರಿಕೆ !
‘ಭಂಡಾರ ಎಂದರೆ ಶುದ್ಧ ಅರಿಶಿನ’ ಎಂದು ಘೋಷಿಸುವಂತೆ ಅನ್ನ ಮತ್ತು ಔಷಧ ಆಡಳಿತಕ್ಕೆ (FDA) ಆಗ್ರಹ!
ಪಾನ್ ಮಸಾಲಾ, ಗುಟ್ಕಾ ಮತ್ತು ಕಲಬೆರಕೆ ಆಹಾರ ಪದಾರ್ಥಗಳ ಒಂದೂವರೆ ಕೋಟಿಗೂ ಹೆಚ್ಚು ಮೌಲ್ಯದ ದಾಸ್ತಾನು ವಶ