‘ಎ.ಐ.ಎಮ್.ಐ.ಎಮ್.’ ನಾಯಕ ಇಮ್ತಿಯಾಜ್ ಜಲೀಲ್ ಅವರಿಂದ ಪ್ರಚೋದನಕಾರಿ ಹೇಳಿಕೆ!
(‘ಎ.ಐ.ಎಮ್.ಐ.ಎಮ್.’ ಎಂದರೆ ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ – ಅಖಿಲ ಭಾರತ ಮುಸ್ಲಿಂ ಏಕತಾ ಸಂಘ)

ಮುಂಬ್ರಾ (ಜಿಲ್ಲೆ ಠಾಣೆ) – ಮುಂಬರುವ ದಿನಗಳಲ್ಲಿ ಕೇವಲ ಮುಂಬ್ರಾ ಕ್ಷೇತ್ರ ಮಾತ್ರವಲ್ಲದೆ, ಇಡೀ ಮಹಾರಾಷ್ಟ್ರದಲ್ಲಿ ಹಸಿರು ಬಣ್ಣವನ್ನು ಹರಡುತ್ತೇವೆ ಎಂದು ‘ಎ.ಐ.ಎಮ್.ಐ.ಎಮ್.’ ನಾಯಕ ಇಮ್ತಿಯಾಜ್ ಜಲೀಲ್ ಪ್ರಚೋದನಕಾರಿ ಹೇಳಿಕೆ ನೀಡಿದ್ದಾರೆ. ಹೊಸದಾಗಿ ಚುನಾಯಿತರಾಗಿರುವ ನಗರಸೇವಕಿ ಸಹರ್ ಶೇಖ್ ಅವರನ್ನು ಭೇಟಿ ಮಾಡಲು ಅವರು ಮುಂಬ್ರಾಕ್ಕೆ ಬಂದಿದ್ದರು. ಸಹರ್ ಶೇಖ್ ಅವರು ಸಭೆಯಲ್ಲಿ ಪ್ರಚೋದನಕಾರಿ ಹೇಳಿಕೆಗಳನ್ನು ನೀಡಿದ ಪ್ರಕರಣದಲ್ಲಿ ಪೊಲೀಸರು ಅವರಿಗೆ ನೋಟಿಸ್ ನೀಡಿದ್ದರು.
🚨 Sahar Shaikh Row: AIMIM Doubles Down on Provocative ‘Green’ Remark 🚨
MP Imtiaz Jaleel fuels controversy, declaring:
🟢 “We will spread the color green not just in Mumbra, but across Maharashtra.”
He openly backed Sahar Shaikh, said she should not have apologised, and… https://t.co/gkwMrZG2Cj pic.twitter.com/l6ssQ2Basr— Sanatan Prabhat (@SanatanPrabhat) January 25, 2026
ಜಲೀಲ್ ಮಾತನಾಡುತ್ತಾ,
೧. ನಮ್ಮ ಪಕ್ಷ ಸಂಪೂರ್ಣವಾಗಿ ಸಹರ್ ಶೇಖ್ ಅವರ ಬೆನ್ನಿಗೆ ನಿಂತಿದೆ. ಆಕೆ ನೀಡಿದ ಹೇಳಿಕೆಗೆ ನನ್ನ ಸಂಪೂರ್ಣ ಬೆಂಬಲವಿದೆ. ನಾವು ‘ಸಹರ್ ಕ್ಷಮೆ ಕೇಳಬೇಕು’ ಎಂದು ಬಯಸಲಿಲ್ಲ. (ಹೀಗಿದ್ದಲ್ಲಿ, ಇದು ಒಂದು ರೀತಿಯಲ್ಲಿ ದ್ವೇಷಪೂರಿತ ಹೇಳಿಕೆಗಳನ್ನು ಬೆಂಬಲಿಸುವುದು ಮತ್ತು ರಕ್ಷಿಸುವುದೇ ಆಗಿದೆ! – ಸಂಪಾದಕರು) ಆಕೆಯ ಮೇಲೆ ಒತ್ತಡ ಹೇರಲಾಗಿತ್ತು.
೨. ಈ ದೇಶವನ್ನು ಬಣ್ಣದ ಆಧಾರದ ಮೇಲೆ ವಿಭಜಿಸಲಾಗುತ್ತಿದೆ. (ಸಮಾಜದಲ್ಲಿ ಒಡಕು ಉಂಟುಮಾಡುವ ಹೇಳಿಕೆಗಳನ್ನು ಸ್ವತಃ ನೀಡುವುದು ಮತ್ತು ನಂತರ ಈ ರೀತಿ ಆಕ್ರೋಶ ವ್ಯಕ್ತಪಡಿಸುವುದು, ಇದರಿಂದಲೇ ಎಮ್.ಐ.ಎಮ್.ನ ತೋರಿಕೆಯ ಮನೋವೃತ್ತಿ ಕಂಡುಬರುತ್ತದೆ! – ಸಂಪಾದಕರು)
೩. ‘ಹಿಂದೂ-ಮುಸಲ್ಮಾನ್’ ಎಂಬ ರಾಜಕಾರಣವನ್ನು ನಿಲ್ಲಿಸಿ. (ಈ ರಾಜಕಾರಣವನ್ನು ಯಾರು ಆರಂಭಿಸಿದರು ಮತ್ತು ಇಂದಿಗೂ ಯಾರು ಮಾಡುತ್ತಿದ್ದಾರೆ ಎಂಬುದು ಎಲ್ಲರಿಗೂ ತಿಳಿದಿದೆ! – ಸಂಪಾದಕರು)
ಈ ವರ್ತನೆಯು ಕಾನೂನು-ಸುವ್ಯವಸ್ಥೆಯ ಬಹಿರಂಗ ಅಪಹಾಸ್ಯವಲ್ಲವೇ?ನಗರಸೇವಕಿ ಸಹರ್ ಶೇಖ್ ಅವರು ಈ ಹಿಂದೆ ಸಭೆಯಲ್ಲಿ ನೀಡಿದ್ದ ‘ಕೈಸೆ ಹರಾಯಾ’ (ಹೇಗೆ ಸೋಲಿಸಿದೆವು) ಎಂಬ ಹೇಳಿಕೆಯನ್ನು ಮತ್ತೆ ಪುನರಾವರ್ತಿಸುವಂತೆ ಜಲೀಲ್ ಹೇಳಿದರು. ಅದರಂತೆ ಸಹರ್ ಅವರು ಮತ್ತೆ ಆ ಹೇಳಿಕೆಯನ್ನು ನೀಡಿದರು. |
ಸಂಪಾದಕೀಯ ನಿಲುವು
|
ಕೇರಳಮ್ದಲ್ಲಿ ‘ಇಸ್ಲಾಂ ಫ್ರೆಂಡ್ಲಿ’ ಜಿಮ್ ಕುರಿತು ವಿವಾದ
ಪುಣೆ ನಗರದಲ್ಲಿ ಮತ್ತೆ ‘ಕಾರ್ಪೊರೇಟ್ ಜಿಹಾದ್’ ಪ್ರಕರಣ
‘ದಾರುಲ್ ಉಲೂಮ್ ದೇವಬಂದ್’ ಭಯೋತ್ಪಾದಕರ ಕೇಂದ್ರವಾಗಿರುವುದರಿಂದ ಅದನ್ನು ನೆಲಸಮ ಮಾಡಿ ! – ಹಿಂದೂ ರಕ್ಷಾ ದಳದ ಬೇಡಿಕೆ
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭಗವಾನ್ ಶಿವನ ರೂಪದಲ್ಲಿ ತೋರಿಸಿದ ‘ವಿಶ್ವವಾಣಿ’ ಪತ್ರಿಕೆ !
‘ಭಂಡಾರ ಎಂದರೆ ಶುದ್ಧ ಅರಿಶಿನ’ ಎಂದು ಘೋಷಿಸುವಂತೆ ಅನ್ನ ಮತ್ತು ಔಷಧ ಆಡಳಿತಕ್ಕೆ (FDA) ಆಗ್ರಹ!
ಪಾನ್ ಮಸಾಲಾ, ಗುಟ್ಕಾ ಮತ್ತು ಕಲಬೆರಕೆ ಆಹಾರ ಪದಾರ್ಥಗಳ ಒಂದೂವರೆ ಕೋಟಿಗೂ ಹೆಚ್ಚು ಮೌಲ್ಯದ ದಾಸ್ತಾನು ವಶ