“ಸಮೀರ್ ಅವರ ಸಾವು ವ್ಯವಸ್ಥೆಯು ತೆಗೆದುಕೊಂಡ ಬಲಿಯಾಗಿದೆ!” – ಸನಾತನ ಸಂಸ್ಥೆ

ಮಂಗಳೂರು – ಸನಾತನ ಸಂಸ್ಥೆಯ ಸಾಧಕರಾದ ಶ್ರೀ. ಸಮೀರ್ ಗಾಯಕ್ವಾಡ್ ಅವರು ಇಂದು ದುರದೃಷ್ಟವಶಾತ್ ನಿಧನರಾಗಿದ್ದಾರೆ. ಈಶ್ವರನು ಅವರ ಆತ್ಮಕ್ಕೆ ಸದ್ಗತಿಯನ್ನು ನೀಡಲಿ ಎಂದು ನಾವು ಪ್ರಾರ್ಥಿಸುತ್ತೇವೆ. 2015ರಲ್ಲಿ ಕಾಮ್ರೇಡ್ ಗೋವಿಂದ್ ಪಾನ್ಸರೆ ಹತ್ಯೆ ಪ್ರಕರಣದಲ್ಲಿ ಸಮೀರ್ ಅವರನ್ನು ಅನಗತ್ಯವಾಗಿ ಬಂಧಿಸಲಾಗಿತ್ತು. ಬೈಕಿನಲ್ಲಿ ಬಂದ ಇಬ್ಬರು ಹಂತಕರು ಈ ಕೃತ್ಯ ಎಸಗಿದ್ದಾರೆ, ಅದರಲ್ಲಿ ಒಬ್ಬರು ಸಮೀರ್ ಗಾಯಕ್ವಾಡ್ ಎಂದು ತನಿಖಾ ಸಂಸ್ಥೆಗಳು ಪ್ರತಿಪಾದಿಸಿದ್ದವು. ಒಬ್ಬ ಶಾಲಾ ಹುಡುಗನನ್ನು ಪ್ರತ್ಯಕ್ಷದರ್ಶಿ ಸಾಕ್ಷಿಯೆಂದು ಕರೆತರಲಾಗಿತ್ತು; ಆದರೆ ಕೇವಲ ಒಂದು ವರ್ಷದಲ್ಲೇ ಆ ಇಬ್ಬರು ಹಂತಕರು ಬೇರೆಯೇ ವ್ಯಕ್ತಿಗಳು ಎಂದು ಘೋಷಿಸಲಾಯಿತು. ಇದರರ್ಥ ಸಮೀರ್ ಗಾಯಕ್ವಾಡ್ ನಿರಪರಾಧಿಯಾಗಿದ್ದರು. ಸೆರೆಮನೆಯಲ್ಲೂ ಅವರು ಸಾಕಷ್ಟು ಕಿರುಕುಳ ಅನುಭವಿಸಿದರು. 19 ತಿಂಗಳುಗಳ ಕಾಲ ಅವರನ್ನು ಜೈಲಿನಲ್ಲಿ ಇರಿಸಲಾಗಿತ್ತು. ತದನಂತರ ಅವರು ಜಾಮೀನಿನ ಮೇಲೆ ಹೊರಬಂದಿದ್ದರು; ಆದರೆ ಮಾಡದ ತಪ್ಪಿಗೆ ಸಿಲುಕಿಸಿದ ಕಾರಣ ಅವರ ಮೇಲೆ ಮತ್ತು ಅವರ ಕುಟುಂಬದ ಮೇಲೆ ವಿಪರೀತ ಮಾನಸಿಕ ಒತ್ತಡವಿತ್ತು.
🚨 Innocent Sanatan Sanstha seeker Sameer Gaikwad passes away
A death caused by the ‘System’ – @SanatanSanstha
Sameer Gaikwad, falsely implicated in the murder case of Govind Pansare, passed away today.
🙏 While praying for his soul to attain Sadgati, Sanatan Sanstha states… pic.twitter.com/HWi0xJXnNo
— Sanatan Prabhat (@SanatanPrabhat) January 20, 2026
ಸನಾತನ ಸಂಸ್ಥೆಯ ಪತ್ರಿಕಾ ಪ್ರಕಟಣೆ |
ಪಾನ್ಸರೆ ಕೊಲೆ ಪ್ರಕರಣದ ಆರೋಪಿ ಎಂದು ಮಾಧ್ಯಮಗಳಲ್ಲಿ ಬಿಂಬಿತವಾದ ಕಾರಣ ಅವರ ಮಾನಹಾನಿ ಎಷ್ಟು ದೊಡ್ಡ ಮಟ್ಟದಲ್ಲಿ ಆಗಿತ್ತೆಂದರೆ, ಅವರಿಗೆ ವ್ಯವಹಾರ ಮತ್ತು ಉದ್ಯೋಗದ ಎಲ್ಲ ಸ್ಥಳಗಳಲ್ಲೂ ತೊಂದರೆಯಾಯಿತು. ಸಾಮಾನ್ಯ ರೈತ ಕುಟುಂಬದ ಈ ನಿರಪರಾಧಿ ಸಾಧಕನನ್ನು ತನಿಖಾ ಸಂಸ್ಥೆಗಳು ನಡೆಸಿದ ಕಿರುಕುಳ ಮತ್ತು ಪ್ರಗತಿಪರರು ಮಾಡಿದ ಅಪಪ್ರಚಾರವು ಅವರ ಜೀವನವನ್ನೇ ಧ್ವಂಸಗೊಳಿಸಿತ್ತು. ಪ್ರಜಾಪ್ರಭುತ್ವ ಮತ್ತು ವೈಯಕ್ತಿಕ ಸ್ವಾತಂತ್ರ್ಯವನ್ನು ಗಾಳಿಗೆ ತೂರಿ, ಸಮೀರ್ ಗಾಯಕ್ವಾಡ್ ಅವರಿಗೆ ಕೊಲ್ಹಾಪುರದಲ್ಲಿ ವಕೀಲರೂ ಸಿಗದಂತೆ ಮಾಡಲಾಗಿತ್ತು. ಇಂತಹ ವ್ಯವಸ್ಥಿತ ದೌರ್ಜನ್ಯಗಳನ್ನು ಅವರು ಎದುರಿಸಬೇಕಾಯಿತು; ದುರದೃಷ್ಟವಶಾತ್ ಇಂದು ಅವರು ಮೃತಪಟ್ಟಿದ್ದಾರೆ. “ಇದು ಕೇವಲ ಸಾವಲ್ಲ, ಬದಲಿಗೆ ವ್ಯವಸ್ಥೆಯು ಪಡೆದ ಬಲಿ” ಎಂದು ಸನಾತನ ಸಂಸ್ಥೆಯ ವಕ್ತಾರರಾದ ಶ್ರೀ. ಚೇತನ್ ರಾಜಹಂಸ್ ಅವರು ಪ್ರತಿಕ್ರಿಯಿಸಿದ್ದಾರೆ.

ಸಮೀರ್ ಗಾಯಕ್ವಾಡ್ ಅವರನ್ನು ಬಂಧಿಸಿದಾಗ, ತನಿಖೆಯ ಸಮಯದಲ್ಲಿ ಪೊಲೀಸರಿಗೆ ಪಾನ್ಸರೆ ಹತ್ಯೆಯ ದಿನದಂದು ಸಮೀರ್ ಪಾಲ್ಘರ್‌ನಲ್ಲಿದ್ದರು ಎಂಬ ವಿಷಯ ತಿಳಿದುಬಂದಿತ್ತು; ಆದರೆ ಒತ್ತಡದ ಕಾರಣ ಅವರು ಅದನ್ನು ನ್ಯಾಯಾಲಯದ ಮುಂದೆ ತರಲಿಲ್ಲ. ಸಮೀರ್ ಅವರು ನ್ಯಾಯಾಲಯದ ಮುಂದೆ ಈ ವಿಷಯವನ್ನು ಪ್ರಸ್ತಾಪಿಸಿ ತಮ್ಮನ್ನು ರಕ್ಷಿಸಿಕೊಳ್ಳಬಹುದಿತ್ತು; ಆದರೆ ಬಹುಶಃ ಈಗ ಆ ಅವಕಾಶ ಕೈತಪ್ಪಿ ಹೋಗಿದೆ.
#Sanatan_Sanstha seeker Sameer Gaikwad, falsely arrested in the Comrade Govind Pansare murder case, passed away today.
He spent 19 months in prison, faced harassment by investigating agencies, severe media defamation, denial of a lawyer, and difficulties everywhere including… pic.twitter.com/SnJvdZ2NFX
— Sanatan Sanstha (@SanatanSanstha) January 20, 2026
ಈ ಪ್ರಕರಣದಲ್ಲಿ ಇಂದಿಗೂ ಅವರ ಹೆಸರು ‘ಆರೋಪಿ ನಂ. 1’ ಎಂದೇ ದಾಖಲಾಗಿದೆ; ಆದರೆ ಸಮೀರ್ ಅವರಿಗೆ ಜಾಮೀನು ಸಿಕ್ಕ ನಂತರ ಪೊಲೀಸರು ಹೊಸ ಸಿದ್ಧಾಂತವನ್ನು (Theory) ಮಂಡಿಸಿ, ಪಾನ್ಸರೆ ಕೊಲೆಯನ್ನು ಸಾರಂಗ್ ಅಕೋಲ್ಕರ್ ಮತ್ತು ವಿನಯ್ ಪವಾರ್ ಮಾಡಿದ್ದಾರೆ ಎಂದು ಘೋಷಿಸಿದರು. ಕೆಲವು ತಿಂಗಳುಗಳ ನಂತರ ಮತ್ತೆ ಹೊಸ ಇಬ್ಬರ ಹೆಸರನ್ನು ಮುನ್ನೆಲೆಗೆ ತಂದರು. ಸಮೀರ್ ಈ ದೋಷಪೂರಿತ ತನಿಖೆಯ ಬಲಿಪಶುವಾದರು.
पानसरे हत्या मामले में फँसाए गए निर्दोष समीर गायकवाड का निधन!
यह समीर का मात्र निधन नहीं है, बल्कि #कम्युनिस्ट इकोसिस्टम द्वारा लगाए गए झूठे आरोपों का बली है! – @1chetanrajhans, राष्ट्रीय प्रवक्ता, सनातन संस्था pic.twitter.com/aNE1abcsvr
— Sanatan Sanstha (@SanatanSanstha) January 20, 2026
ಪ್ರಗತಿಪರರ ಒತ್ತಡಕ್ಕೆ ಮಣಿದು ಪೊಲೀಸರು ಸನಾತನದ ಸಾಧಕರನ್ನು ಸಿಲುಕಿಸುವ ಪಾಪದ ಕೆಲಸ ಮಾಡಿದರೇ?
ಗಾಯಕ್ವಾಡ್ ಕುಟುಂಬದ ದುಃಖದಲ್ಲಿ ಸನಾತನ ಪರಿವಾರ ಭಾಗಿಯಾಗಿದೆ. ಕುಟುಂಬದವರೊಂದಿಗೆ ಮಾತನಾಡಿದಾಗ, ಸುಳ್ಳು ಪ್ರಕರಣದಲ್ಲಿ ಸಿಲುಕಿದ ನೋವು ಸಮೀರ್ ಅವರ ಮನಸ್ಸಿನ ಮೇಲೆ ಸದಾ ಇತ್ತು ಎಂಬುದು ತಿಳಿಯಿತು. ಅವರ ಸಾರ್ವಜನಿಕ ಜೀವನ ನಾಶವಾಗಿತ್ತು. ಕೊಲೆ ಆರೋಪಿಯೆಂದು ಅವರಿಗೆ ಕೆಲಸ ಸಿಗುತ್ತಿರಲಿಲ್ಲ. ಈ ನಷ್ಟವನ್ನು ಯಾರು ತುಂಬಿಕೊಡುತ್ತಾರೆ ? ಅಜ್ಮಲ್ ಕಸಬ್‌ನಂತಹ ಕ್ರೂರ ಭಯೋತ್ಪಾದಕನಿಗೆ ಸರ್ಕಾರಿ ವೆಚ್ಚದಲ್ಲಿ ವಕೀಲರು ಸಿಗುತ್ತಾರೆ, ಮರಣದಂಡನೆ ಶಿಕ್ಷೆಯಾದವರಿಗಾಗಿ ಮಧ್ಯರಾತ್ರಿ 1 ಗಂಟೆಗೆ ಸುಪ್ರೀಂ ಕೋರ್ಟ್ ಬಾಗಿಲು ತೆರೆಯುತ್ತದೆ; ಆದರೆ ಕೇವಲ ಒಬ್ಬ ಹಿಂದೂ, ಸನಾತನ ಸಂಸ್ಥೆಯ ಸಾಧಕ ಮತ್ತು ಬಡ ರೈತನ ಮಗ ಎಂಬ ಕಾರಣಕ್ಕೆ ಸಮೀರ್ ಅವರಿಗೆ ವಕೀಲರು ಸಿಗದಂತೆ ಮಾಡಲಾಗುತ್ತದೆ. ಅವರ ಜಾಮೀನು ರದ್ದುಗೊಳಿಸಲು ಸರ್ಕಾರ ಉಚ್ಚ ನ್ಯಾಯಾಲಯಕ್ಕೆ ಹೋಗುತ್ತದೆ. ಪೊಲೀಸರು ಯಾರ ಒತ್ತಡದಿಂದ ನ್ಯಾಯಾಲಯದಲ್ಲಿ ಪರಸ್ಪರ ವಿರೋಧಾಭಾಸದ ಪುರಾವೆಗಳನ್ನು ಸಲ್ಲಿಸುತ್ತಾರೆ?
“ಪ್ರಗತಿಪರರ ವೈಚಾರಿಕ ಭಯೋತ್ಪಾದನೆಯು ಸರ್ಕಾರದ ಮೇಲೆ ಒತ್ತಡ ಹೇರಿತು ಮತ್ತು ಇಂದು ಒಬ್ಬ ನಿರಪರಾಧಿ ಬಲಿಯಾಗಿದ್ದಾನೆ ಎಂಬುದು ನಮಗೆ ಅತ್ಯಂತ ದುಃಖದ ಸಂಗತಿಯಾಗಿದೆ. ಭೀಮಾ ಕೋರೆಗಾಂವ್ ಪ್ರಕರಣದ ಆರೋಪಿ ಸ್ಟಾನ್ ಸ್ವಾಮಿ ನಿಧನರಾದಾಗ ಮುಂಬೈ ಉಚ್ಚ ನ್ಯಾಯಾಲಯದ ಪೀಠದ ನ್ಯಾಯಾಧೀಶರು ಶೋಕ ವ್ಯಕ್ತಪಡಿಸಿದ್ದರು. ವಿಶ್ವಸಂಸ್ಥೆಯು ಶೋಕ ಪತ್ರಿಕೆಯನ್ನು ಬಿಡುಗಡೆ ಮಾಡಿತ್ತು. ಆದರೆ ಸಮೀರ್ ಗಾಯಕ್ವಾಡ್ ಪರವಾಗಿ ಯಾರಾದರೂ ಧ್ವನಿ ಎತ್ತುತ್ತಾರೆಯೇ?” ಎಂಬ ಪ್ರಶ್ನೆಯನ್ನು ಶ್ರೀ. ರಾಜಹಂಸ್ ಅವರು ಈ ಸಂದರ್ಭದಲ್ಲಿ ಎತ್ತಿದ್ದಾರೆ.
ಸಮೀರ ಗಾಯಕವಾಡ ಇವರ ನಿಧನದಿಂದ ಅವರ ನಿರಪರಾಧಿತನವನ್ನು ಸಾಬೀತುಪಡಿಸುವ ಅವಕಾಶ ಕೈತಪ್ಪಿತು! – ನ್ಯಾಯವಾದಿ ವೀರೇಂದ್ರ ಇಚಲಕರಂಜಿಕರ್, ರಾಷ್ಟ್ರೀಯ ಅಧ್ಯಕ್ಷರು, ಹಿಂದೂ ವಿಧಿಜ್ಞ ಪರಿಷತ್

ಮುಂಬಯಿ, ಜನವರಿ 20 (ವಾರ್ತೆ) – ‘ಕೇಸರಿ ಭಯೋತ್ಪಾದನೆ’ಯನ್ನು ಸಾಬೀತುಪಡಿಸಲು ಪ್ರಗತಿಪರರು ಹೆಣೆದಿದ್ದ ‘ಫೇಕ್ ನೆರೇಟಿವ್’ (ಸುಳ್ಳು ಕಥಾನಕ) ಸರಣಿಯ ಭಾಗವಾಗಿಯೇ ಕಾಮ್ರೇಡ್ ಗೋವಿಂದ ಪಾನಸರೆ ಹತ್ಯೆ ಪ್ರಕರಣದಲ್ಲಿ ಸಮೀರ ಗಾಯಕವಾಡ ಅವರನ್ನು ಬಂಧಿಸಲಾಗಿತ್ತು. ಸಮೀರ ಗಾಯಕವಾಡ ಅವರ ನಿಧನದಿಂದಾಗಿ, ಈ ಪ್ರಕರಣದಲ್ಲಿ ಅವರನ್ನು ಹೇಗೆ ಸಿಲುಕಿಸಲಾಯಿತು ಎಂಬುದನ್ನು ಸಾಬೀತುಪಡಿಸುವ ಅವಕಾಶ ಕೈತಪ್ಪಿಹೋಗಿದೆ ಎಂದು ಈ ಪ್ರಕರಣದಲ್ಲಿ ಸಮೀರ ಅವರ ಪರ ವಾದ ಮಂಡಿಸುತ್ತಿದ್ದ ವಕೀಲ ಹಾಗೂ ಹಿಂದೂ ವಿಧಿಜ್ಞ ಪರಿಷತ್ತಿನ ರಾಷ್ಟ್ರೀಯ ಅಧ್ಯಕ್ಷ ನ್ಯಾಯವಾದಿ ವೀರೇಂದ್ರ ಇಚಲಕರಂಜಿಕರ್ ವಿಷಾದ ವ್ಯಕ್ತಪಡಿಸಿದ್ದಾರೆ.
#पानसरे हत्या प्रकरणात गोवण्यात आलेले निष्पाप समीर गायकवाड यांचे निधन !#निष्पाप समीर गायकवाड यांचा खटला आरोपपत्र दाखल झाल्यावरही न चालवता तसाच ठेवणे व त्यामुळे होत असलेला नाहक मानसिक त्रास व होत असलेल्या हेटाळणीमुळे त्याचा बळी गेला ! – अधिवक्ता @ssvirendra (समीर गायकवाड यांचे… pic.twitter.com/dnEQAxcnE0
— Sanatan Sanstha (@SanatanSanstha) January 20, 2026
ನ್ಯಾಯವಾದಿ ವೀರೇಂದ್ರ ಇಚಲಕರಂಜಿಕರ್ ಅವರು, ‘ಡಾ. ನರೇಂದ್ರ ದಾಬೋಲಕರ್ ಮೊಕದ್ದಮೆಯಲ್ಲಿ ಇಬ್ಬರಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿತ್ತು, ಅಂದಿನಿಂದ ಸಮೀರ ಗಾಯಕವಾಡ ಮಾನಸಿಕ ಕುಗ್ಗಿದರು. ಜಾಮೀನು ಸಿಗಲು ವಿಪರೀತ ವಿಳಂಬವಾದದ್ದು, ನಂತರ ಸರಕಾರವು ಆ ಜಾಮೀನಿನ ವಿರುದ್ಧ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದು ಮತ್ತು ವಿಚಾರಣೆ ತಡವಾಗಿ ಆರಂಭವಾದದ್ದು ಅವರನ್ನು ಬಹಳವಾಗಿ ದುಃಖಿತರನ್ನಾಗಿಸಿತ್ತು. ಈ ಇಡೀ ಅವಧಿಯಲ್ಲಿ ಕಾ.ಪಾನಸರೆ ಹತ್ಯೆ ಪ್ರಕರಣದ ಆರೋಪಿ’ ಎಂಬ ಹಣೆಪಟ್ಟಿಯಿಂದ ಅವರು ಅಪಖ್ಯಾತಿ ಮತ್ತು ಸಂಘರ್ಷವನ್ನು ಎದುರಿಸಬೇಕಾಯಿತು. ಈ ಪ್ರಕರಣದ ಕಾರಣದಿಂದಾಗಿ ಅವರಿಗೆ ಯಾರೂ ಕೆಲಸ ನೀಡುತ್ತಿರಲಿಲ್ಲ. ಸಮಾಜದಲ್ಲಿ ಅವರಿಗೆ ಎದುರಾದ ಅವಮಾನ ಮತ್ತು ತಿರಸ್ಕಾರ ಅತ್ಯಂತ ನೋವಿನ ಸಂಗತಿಯಾಗಿತ್ತು.
ವ್ಯವಸ್ಥೆಯ ಮೂಲಕ ತಿರಸ್ಕಾರಕ್ಕೆ ಬಲಿ !
ನ್ಯಾಯವಾದಿ ವೀರೇಂದ್ರ ಇಚಲಕರಂಜಿಕರ ಇವರು, ‘ದಾಭೋಲ್ಕರ್ ಹತ್ಯೆ ಪ್ರಕರಣದಲ್ಲಿ ಶರದ ಕಳಸ್ಕರ್ ಮತ್ತು ಸಚಿನ್ ಅಂಧುರೆ ಅವರಿಗೆ ಶಿಕ್ಷೆಯಾದಾಗ ಸಮೀರ್ ಅವರು, “ನಾನು ನಿರಪರಾಧಿಯಾಗಿದ್ದರೂ ನನಗೆ ಶಿಕ್ಷೆ ಏಕೆ ಆಗುತ್ತದೆ?” ಎಂದು ಕೇಳಿದ್ದರು. ನಿಜವೆಂದರೆ ಆ ಸಮಯದಲ್ಲಿ ಅವರನ್ನು ಬಿಡುಗಡೆಗೊಳಿಸಬೇಕಿತ್ತು. ಉಚ್ಚ ಅಥವಾ ಸರ್ವೋಚ್ಚ ನ್ಯಾಯಾಲಯದಲ್ಲಿ ಅವರು ನಿರ್ದೋಷಿ ಎಂದು ಬಿಡುಗಡೆ ಆಗುವರು, ಆದರೆ ಅದಕ್ಕೆ ಎಷ್ಟು ವರ್ಷಗಳ ಬೇಕಾಗುವುದು? ಇದು ಹೇಳಲು ಆಗುವುದಿಲ್ಲ ಎಂದು ನಾನು ಅವರಿಗೆ ಹೇಳಿದ್ದೆ. ಆ ಸಮಯದಲ್ಲಿ ನಡೆಯುತ್ತಿರುವ ಮಾಧ್ಯಮಗಳ ‘ಮೀಡಿಯಾ ಟ್ರಯಲ್’ (ಮಾಧ್ಯಮಗಳೇ ತೀರ್ಪುಗಾರರಂತೆ ವರ್ತಿಸುವುದು) ಅವರ ಬಾಡಿರುವ ಮುಖ ನನಗೆ ಇಂದಿಗೂ ನೆನಪಾಗುತ್ತದೆ. ಕಾ. ಪಾನ್ಸರೆ ಹತ್ಯೆಯ ಪ್ರಕಾರದಲ್ಲಿ ನಾನು ನೀರ್ದೋಷಿ ಆಗಿದ್ದರು ಕೂಡ ನನಗೆ ಶಿಕ್ಷೆ ಆಗುವುದೇ? ಎಂದು ಸಮೀರ್ ನನ್ನನ್ನು ಕೇಳಿದ್ದರು. ಇದರಿಂದ ಎಲ್ಲೋ, ವ್ಯವಸ್ಥೆಯ ಕಿರುಕುಳದಿಂದಾದ ಬಲಿ ಎಂದು ಇಚಲಕರಂಜಿಕರ್ ಅಭಿಪ್ರಾಯಪಟ್ಟಿದ್ದಾರೆ.
ಈ ಬಗ್ಗೆ ಯಾರಾದರೂ ಸಂವೇದನೆ ವ್ಯಕ್ತಪಡಿಸುವರೇ?
2008ರ ಮಾಲೆಗಾಂವ ಬಾಂಬ್ ಸ್ಫೋಟ ಪ್ರಕರಣದ ಸಂದರ್ಭದಲ್ಲಿ ಸಾಧ್ವಿ ಪ್ರಜ್ಞಾಸಿಂಗ್ ಅವರನ್ನು ಕೋರ್ಟ್‌ಗೆ ಕರೆತಂದಾಗ, ಸಾಹು ಎಂಬ ಅವರ ಭಕ್ತರೊಬ್ಬರು ಹೃದಯಾಘಾತದಿಂದ ಸಾವನ್ನಪ್ಪಿದ್ದರು. ಆದರೆ ಅದರ ಸುದ್ದಿ ಎಲ್ಲಿಯೂ ಬರಲಿಲ್ಲ. ಭೀಮಾ-ಕೋರೆಗಾಂವ್ ಪ್ರಕರಣದ ಆರೋಪಿ ಸ್ಟಾನ್ ಸ್ವಾಮಿ ನಿಧನರಾದಾಗ ಹೈಕೋರ್ಟ್ ಮತ್ತು ವಿಶ್ವಸಂಸ್ಥೆಯೂ ಶೋಕ ವ್ಯಕ್ತಪಡಿಸಿತ್ತು. ಆದರೆ ಸಮೀರ್ ಗಾಯಕವಾಡ ಅವರ ನಿಧನದ ನೋವು ಯಾರಿಗಾದರೂ ತಲುಪುತ್ತದೆಯೇ? ಸಮೀರ ಮರಾಠ ಆಗಿದ್ದರೆಂದು ಜರಾಂಗೇ ಪಾಟಿಲ್ ಏನಾದರೂ ಮಾತನಾಡುವರೇ? ನಾನು ಒಬ್ಬ ನ್ಯಾಯವಾದಿ ಎಂದು ಕೂಡ ಮತ್ತು ಸಾಮಾನ್ಯ ನಾಗರೀಕನಾಗಿಯೂ ಕೂಡ ಇದು ನನ್ನ ನೋವು ಆಗಿದೆ, ಎಂದು ನ್ಯಾಯವಾದಿ ವೀರೇಂದ್ರ ಇಚಲಕರಂಜಿಕರ ಹೇಳಿದರು. ಸಮೀರ್ ಅವರು ಮರಾಠಾ ಸಮುದಾಯದವರಾಗಿದ್ದರು, ಹಾಗಿದ್ದರೂ ಮನೋಜ್ ಜಾರಂಗೆ ಪಾಟೀಲ್ ಅವರು ಈ ಬಗ್ಗೆ ಏನಾದರೂ ಮಾತನಾಡುವರೇ? ಒಬ್ಬ ವಕೀಲನಾಗಿ ಮತ್ತು ಸಾಮಾನ್ಯ ನಾಗರಿಕನಾಗಿ ಇದು ನನ್ನ ಕಳವಳವಾಗಿದೆ ಎಂದು ಅವರು ಹೇಳಿದ್ದಾರೆ.
ಶ್ರೀ. ಸಮೀರ ಗಾಯಕವಾಡ್ ಅವರಿಗೆ ಹೃದಯಾಘಾತವಾದ ನಂತರ ಅವರನ್ನು ಸಾಂಗ್ಲಿಯ ಸರಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು; ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ನಿಧನರಾದರು. ಅವರು ತಾಯಿ, ಪತ್ನಿ ಹರ್ಷದಾ, ಒಬ್ಬ ಮಗ, ಒಬ್ಬ ಮಗಳು, ಇಬ್ಬರು ಸಹೋದರರು, ಸನಾತನ ಸಂಸ್ಥೆಯ ಸಾಧಕಿಯರಾದ ಸುಶ್ರೀ. ಸಂಗೀತಾ ಜಾಧವ್ ಮತ್ತು ಸುಶ್ರೀ. ಸವಿತಾ ಜಾಧವ್ ಎಂಬ ಇಬ್ಬರು ಚಿಕ್ಕಮ್ಮಂದಿರು ಸೇರಿದಂತೆ ದೊಡ್ಡ ಪರಿವಾರವನ್ನು ಅಗಲಿದ್ದಾರೆ. ‘ದಿವಂಗತ ಸಮೀರ್ ಗಾಯಕವಾಡ್ ಅವರಿಗೆ ಸದ್ಗತಿ ದೊರೆಯಲಿ’ ಎಂದು ಸನಾತನ ಪರಿವಾರದ ಪರವಾಗಿ ಭಗವಾನ್ ಶ್ರೀಕೃಷ್ಣನ ಪಾದಗಳಲ್ಲಿ ಪ್ರಾರ್ಥಿಸುತ್ತೇವೆ! |
ಕೇರಳಮ್ದಲ್ಲಿ ‘ಇಸ್ಲಾಂ ಫ್ರೆಂಡ್ಲಿ’ ಜಿಮ್ ಕುರಿತು ವಿವಾದ
ಪುಣೆ ನಗರದಲ್ಲಿ ಮತ್ತೆ ‘ಕಾರ್ಪೊರೇಟ್ ಜಿಹಾದ್’ ಪ್ರಕರಣ
‘ದಾರುಲ್ ಉಲೂಮ್ ದೇವಬಂದ್’ ಭಯೋತ್ಪಾದಕರ ಕೇಂದ್ರವಾಗಿರುವುದರಿಂದ ಅದನ್ನು ನೆಲಸಮ ಮಾಡಿ ! – ಹಿಂದೂ ರಕ್ಷಾ ದಳದ ಬೇಡಿಕೆ
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭಗವಾನ್ ಶಿವನ ರೂಪದಲ್ಲಿ ತೋರಿಸಿದ ‘ವಿಶ್ವವಾಣಿ’ ಪತ್ರಿಕೆ !
‘ಭಂಡಾರ ಎಂದರೆ ಶುದ್ಧ ಅರಿಶಿನ’ ಎಂದು ಘೋಷಿಸುವಂತೆ ಅನ್ನ ಮತ್ತು ಔಷಧ ಆಡಳಿತಕ್ಕೆ (FDA) ಆಗ್ರಹ!
ಪಾನ್ ಮಸಾಲಾ, ಗುಟ್ಕಾ ಮತ್ತು ಕಲಬೆರಕೆ ಆಹಾರ ಪದಾರ್ಥಗಳ ಒಂದೂವರೆ ಕೋಟಿಗೂ ಹೆಚ್ಚು ಮೌಲ್ಯದ ದಾಸ್ತಾನು ವಶ