ಮಾನನಷ್ಟ ಮಾಡಿರುವುದಕ್ಕಾಗಿ ಕೇವಲ ಒಂದು ರೂಪಾಯಿ ಪರಿಹಾರಕ್ಕೆ ಬೇಡಿಕೆ

ನವದೆಹಲಿ: ಸುಪ್ರೀಂ ಕೋರ್ಟ್‌ನ ಹಿರಿಯ ವಕೀಲರಾದ ವಿಷ್ಣು ಶಂಕರ್ ಜೈನ್ ಅವರು ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ವಿರುದ್ಧ ದೆಹಲಿಯ ಪಟಿಯಾಲ ಹೌಸ್ ನ್ಯಾಯಾಲಯದಲ್ಲಿ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ. ಸಾಮಾಜಿಕ ಮಾಧ್ಯಮದ ಪೋಸ್ಟ್ ಮೂಲಕ ತಮ್ಮ ಘನತೆಗೆ ಕುಂದು ತಂದಿದ್ದಕ್ಕಾಗಿ ಈ ಅರ್ಜಿ ಸಲ್ಲಿಸಲಾಗಿದ್ದು, ಸಾಂಕೇತಿಕವಾಗಿ ಕೇವಲ ಒಂದು ರೂಪಾಯಿ ಪರಿಹಾರವನ್ನು ಕೋರಿದ್ದಾರೆ.
ಕಾನೂನು ನೋಟಿಸ್ ನೀಡಿದ ಹೊರತಾಗಿಯೂ ಅಖಿಲೇಶ್ ಯಾದವ್ ಅವರು ವಿಷಾದ ವ್ಯಕ್ತಪಡಿಸಿಲ್ಲ ಅಥವಾ ಕ್ಷಮೆಯಾಚಿಸಿಲ್ಲ, ಆದ್ದರಿಂದ ನ್ಯಾಯಾಲಯವು ಈ ವಿಷಯದಲ್ಲಿ ನ್ಯಾಯ ಒದಗಿಸಬೇಕೆಂದು ಈ ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.
ಏನಿದು ಪ್ರಕರಣ?
ವಕೀಲರಾದ ವಿಷ್ಣು ಶಂಕರ್ ಜೈನ್ ಅವರ ಆರೋಪದಂತೆ, ನವೆಂಬರ್ 2024 ರಲ್ಲಿ ಅಖಿಲೇಶ್ ಯಾದವ್ ಅವರು ತಮ್ಮ ವಿರುದ್ಧ ಮೂರು ಅವಹೇಳನಕಾರಿ ಟಿಪ್ಪಣಿಗಳನ್ನು ಮಾಡಿದ್ದರು. ಉತ್ತರಪ್ರದೇಶದ ಸಂಭಲ್‌ನಲ್ಲಿರುವ ಶಾಹಿ ಜಾಮಾ ಮಸೀದಿಗೆ ಸಂಬಂಧಿಸಿದ ಸಿವಿಲ್ ಮೇಲ್ಮನವಿ ಪ್ರಕರಣದಲ್ಲಿ ಅಖಿಲೇಶ್ ಯಾದವ್ ಅವರು ವಿಷ್ಣು ಶಂಕರ್ ಜೈನ್ ಅವರ ಮೇಲೆ ಟೀಕೆ ಮಾಡಿದ್ದರು. 24 ನವಂಬರ್.2024 ರಂದು ಶಾಹಿ ಜಮಾ ಮಸೀದಿ ಕಾನೂನಿನ ಆಯುಕ್ತರಿಂದ ನಡೆದಿರುವ ಸಮೀಕ್ಷೆಯ ವೇಳೆ ನಡೆದ ಹಿಂಸಾಚಾರಕ್ಕೆ ವಿಷ್ಣು ಶಂಕರ್ ಜೈನ್ ಅವರು ಜವಾಬ್ದಾರರೆಂದು ಸಮಾಜವಾದಿ ಪಕ್ಷದ ಸಾಮಾಜಿಕ ಮಾಧ್ಯಮದ ಖಾತೆಯಿಂದ ಆರೋಪಿಸಲಾಗಿತ್ತು. ನ್ಯಾಯಾಲಯದ ಆದೇಶದಂತೆ ಜೈನ್ ಅವರು ತಮ್ಮ ಜವಾಬ್ದಾರಿ ನೆರವೇರಿಸುತ್ತಿದ್ದರು. ಆಗ ಸೇರಿದ್ದ ಹಿಂಸಾತ್ಮಕ ಗುಂಪೊಂದು ನನ್ನ ಮೇಲೆ ದಾಳಿ ಮಾಡುವ ಉದ್ದೇಶದಿಂದ ಬಂದಿತ್ತು ಎಂದು ಜೈನ್ ಅವರು ಹೇಳಿದ್ದಾರೆ.
ಅರ್ಜಿಯ ಪ್ರಕಾರ ಸಮೀಕ್ಷೆಗೆ ಹೋಗುವಾಗ ವಿಷ್ಣು ಶಂಕರ್ ಜೈನ್ ಅವರು ‘ಜೈ ಶ್ರೀರಾಮ್’ ಘೋಷಣೆಗಳನ್ನು ಕೂಗಿದ್ದರಿಂದಲೇ ಹಿಂಸಾಚಾರ ಭುಗಿಲೆದ್ದಿತು ಎಂದು ಸಮಾಜವಾದಿ ಪಕ್ಷ ಆರೋಪಿಸಿತ್ತು. ಆದರೆ, ಘೋಷಣೆಗಳಿಂದಲೇ ಹಿಂಸೆ ನಡೆದಿದೆ ಎಂದು ಸಾಬೀತುಪಡಿಸಲು ಅಖಿಲೇಶ್ ಯಾದವ್ ಅವರ ಬಳಿ ಯಾವುದೇ ಪುರಾವೆಗಳಿಲ್ಲ ಎಂದು ಅರ್ಜಿಯಲ್ಲಿ ಹೇಳಲಾಗಿದೆ.
ಮಹಿಳೆಯ ಎದೆಗೆ ಸ್ಪರ್ಶಿಸುವುದು ಅತ್ಯಾಚಾರದ ಪ್ರಯತ್ನವಲ್ಲ! – ಉಚ್ಚ ನ್ಯಾಯಾಲಯ : Attempt to Rape
ಅಮರಕಂಟಕ (ಮಧ್ಯಪ್ರದೇಶ)ಇಲ್ಲಿನ ನರ್ಮದಾ ಉಗಮ ದೇವಸ್ಥಾನದ ಚಿನ್ನ ಮತ್ತು ಬೆಳ್ಳಿ ನಾಪತ್ತೆ! : Amarkantak Temple Donation Scam
ಬೆಂಗಳೂರಿನಲ್ಲಿ ದೇಶದ ಮೊದಲ ‘ಎಐ’ ವಿಶ್ವವಿದ್ಯಾಲಯ ಆರಂಭ ! : Karnataka AI University
ಗುಜರಾತ್ ನ ಪ್ರಸಿದ್ಧ ಶಕ್ತಿಪೀಠ ಅಂಬಾಜಿ ದೇವಸ್ಥಾನದಲ್ಲೂ ನೋಟು ಎಣಿಕೆಯ ಸಮಯದಲ್ಲಿ ೨ ತಿಂಗಳ ಹಿಂದೆ ಕಳ್ಳತನ ನಡೆದಿರುವುದು ಬಹಿರಂಗ ! : Ambaji Temple Donation Theft
ಸಮಾಜವಾದಿ ಪಕ್ಷದ ಅಧಿಕಾರಾವಧಿಯಲ್ಲಿ ‘ವಕ್ಫ್ ಮಂಡಳಿ’ಯ ಶತಕೋಟಿ ರೂಪಾಯಿಗಳ ಹಗರಣ! – ಮೌಲಾನಾ ಶಹಾಬುದ್ದೀನ ರಿಜ್ವಿ ಬರೇಲವಿ
“ನಾನು ಛತ್ರಪತಿ ಶಿವಾಜಿ ಮಹಾರಾಜರ ಅನುಯಾಯಿಯಾಗಿದ್ದು ರಣರಂಗ ಬಿಟ್ಟು ಓಡಿಹೋಗುವವನಲ್ಲ!”