
ಶ್ರೀನಗರ (ಜಮ್ಮು- ಕಾಶ್ಮೀರ) – ಜಮ್ಮು – ಕಾಶ್ಮೀರದ ಸಾಂಬಾ, ಪೂಂಚ್ ಮತ್ತು ರಾಜೌರಿ ಜಿಲ್ಲೆಗಳಲ್ಲಿ ಅಂತರರಾಷ್ಟ್ರೀಯ ಗಡಿ ಮತ್ತು ನಿಯಂತ್ರಣ ರೇಖೆಯ ಬಳಿಯ ಪ್ರದೇಶಗಳಲ್ಲಿ ಜನವರಿ ೧೧ ರಂದು ಸಂಶಯಾಸ್ಪದ ಡ್ರೋನ್‌ಗಳ ಚಲನೆ ಕಂಡುಬಂದಿದೆ. ಈ ಡ್ರೋನ್‌ಗಳನ್ನು ಪಾಕಿಸ್ತಾನದಿಂದ ಭಾರತಕ್ಕೆ ಕಳುಹಿಸಲಾಗಿದೆ. ಭಾರತೀಯ ಗಡಿಯೊಳಗೆ ಡ್ರೋನ್ ನುಗ್ಗಿದ ನಂತರ, ಭಾರತದ ಕಡೆಯಿಂದ ಗುಂಡು ಹಾರಿಸಲಾಯಿತು. ಡ್ರೋನ್ ಕಾಣಿಸಿಕೊಂಡ ನಂತರ ಭಾರತೀಯ ಭದ್ರತಾ ತಂಡಗಳು ತಕ್ಷಣವೇ ತನಿಖೆಯನ್ನು ಪ್ರಾರಂಭಿಸಿವೆ. ಕಳೆದ ಕೆಲವು ದಿನಗಳಿಂದ ಪಾಕಿಸ್ತಾನದ ಕಡೆಯಿಂದ ಒಳನುಸುಳುವ ಪ್ರಯತ್ನಗಳನ್ನು ನಿರಂತರವಾಗಿ ನಡೆಯುತ್ತಿದೆ. ಪಾಕಿಸ್ಥಾನದಿಂದ ಡ್ರೋನ್‌ಗಳ ಮೂಲಕ ಭಾರತಕ್ಕೆ ಶಸ್ತ್ರಾಸ್ತ್ರಗಳನ್ನು ಕಳುಹಿಸುವ ಪ್ರಯತ್ನ ಮಾಡಲಾಗುತ್ತಿದೆ.
Pakistani drone violates Indian airspace along the Kashmir border 🇮🇳🚨
Repeated provocations won’t stop with words alone.
A firm, decisive response is essential to deter Pakistan and safeguard India’s sovereignty – once and for all. pic.twitter.com/OtiaBXbaa2
— Sanatan Prabhat (@SanatanPrabhat) January 12, 2026
೧. ರಾಜೌರಿ ಜಿಲ್ಲೆಯ ತೇರಯಾಥ್ ಗ್ರಾಮದಲ್ಲಿ ಡ್ರೋನ್ ತಲುಪಿತು. ಮುಂದೆ ಕಾಲಾಕೋಟ್ ಮತ್ತು ಧರ್ಮಸಾಲ್ ಗ್ರಾಮಗಳ ದಿಕ್ಕಿಗೆ ಡ್ರೋನ್ ಹೋಯಿತು. ಡ್ರೋನ್‌ನಲ್ಲಿ ಸ್ಪಷ್ಟವಾಗಿ ಮಿನುಗುವ ದೀಪಗಳು ಕಾಣಿಸುತ್ತಿದ್ದವು. ರಾಮ್‌ಗಢ ಸೆಕ್ಟರ್‌ನ ಬಬ್ರಾಲ್ ಗ್ರಾಮದಲ್ಲಿ ಎರಡನೇ ಡ್ರೋನ್ ಕಾಣಿಸಿಕೊಂಡಿತು. ಈ ಡ್ರೋನ್ ಕೆಲವೇ ಸೆಕೆಂಡುಗಳ ಕಾಲ ಗ್ರಾಮದ ಮೇಲೆ ಸುತ್ತುತ್ತಿರುವುದು ಕಾಣಿಸಿದೆ. ಆ ನಂತರ, ಆ ಡ್ರೋನ್ ನೇರವಾಗಿ ಪಾಕಿಸ್ತಾನದ ಕಡೆಗೆ ವೇಗವಾಗಿ ಹೊರಟು ಹೋಯಿತು.
೨. ಪೂಂಚ್ ಜಿಲ್ಲೆಯ ಮನ್ ಕೋಟ್ ಸೆಕ್ಟರ್‌ನಲ್ಲಿ ಸಂಜೆ ಡ್ರೋನ್ ಕಾಣಿಸಿದೆ. ಡ್ರೋನ್‌ಗಳು ನಿರಂತರವಾಗಿ ಕಾಣಿಸಿಕೊಳ್ಳುತ್ತಿರುವುದರಿಂದ ಭದ್ರತಾ ಸಂಸ್ಥೆಗಳು ಎಚ್ಚರವಾಗಿವೆ. ಸಾಂಬಾ ಜಿಲ್ಲೆಯ ಘಗ್ವಾಲ್‌ನ ಪಲೌರಾ ಗ್ರಾಮದ ಬಳಿ ಡ್ರೋನ್‌ಗಳ ಮೂಲಕ ಪಾಕಿಸ್ತಾನದಿಂದ ಕೆಲವು ಶಸ್ತ್ರಾಸ್ತ್ರಗಳನ್ನು ಭಾರತಕ್ಕೆ ಕಳುಹಿಸಲಾಗಿದೆ ಎಂಬ ಮಾಹಿತಿಯೂ ಲಭ್ಯವಾಗಿದೆ.
ಸಂಪಾದಕೀಯ ನಿಲುವುಪಾಕಿಸ್ತಾನದ ಉಪಟಳವನ್ನು ಶಾಶ್ವತವಾಗಿ ನಿಲ್ಲಿಸಲು ಅಂತಿಮ ಗುರಿಯನ್ನು ಸಾಧಿಸುವ ಕ್ರಮ ತೆಗೆದುಕೊಳ್ಳುವುದು ಅವಶ್ಯಕವಾಗಿದೆ! |
ಶ್ರೀನಗರದಲ್ಲಿ ಮಾದಕ ಪದಾರ್ಥ ಸಾಗಾಟಗಾರ ಶೇಖ್ ತಸದುಕ್ನ ಸರಕಾರಿ ಭೂಮಿಯ ಮೇಲಿನ ಅಕ್ರಮ 3 ಅಂತಸ್ತಿನ ಕಟ್ಟಡ ನೆಲಸಮ ! : Srinagar Drug Peddler House Demolished
ಬದಾಯೂ (ಉತ್ತರ ಪ್ರದೇಶ) ಇಲ್ಲಿ ಮುಸ್ಲಿಂ ಅಧಿಕಾರಿಯ ಧಾರ್ಮಿಕ ಕಿರುಕುಳದಿಂದಾಗಿ ಹಿಂದೂ ಪೊಲೀಸ್ ಇನ್ಸ್ಪೆಕ್ಟರ್ ಆತ್ಮಹತ್ಯೆ ! : Hindu Police Suicide
ಬುಲಂದ್ಶಹರ್ (ಉತ್ತರ ಪ್ರದೇಶ) ದಲ್ಲಿ ಹನುಮಾನ್ ದೇವಸ್ಥಾನದಲ್ಲಿ ಪ್ರಾರ್ಥನೆ ಮಾಡಿದ ಅಸರ್ ಮೊಹಮ್ಮದ್ ಬಂಧನ!
ನಾಗಪುರದಲ್ಲಿ ಶ್ರೀ ದುರ್ಗಾದೇವಿಯ ಮೂರ್ತಿಯ ಮೇಲಿದ್ದ ಚಿನ್ನದ ಸರ ಕಳ್ಳತನ ಮಾಡಿದ ೩ ಮತಾಂಧರ ಬಂಧನ !
ಕುತ್ತಿಗೆಯಲ್ಲಿದ್ದ ಆಭರಣಗಳನ್ನು ಕದಿಯುತ್ತಿದ್ದ ಕಾಮಿಲ್ ಮತ್ತು ಅಹ್ಮದ್ ಬಂಧನ !
ಖಾರ್ಘರ್ (ನವಿ ಮುಂಬಯಿ) ನಲ್ಲಿ ‘ಹೇರ್ ಸ್ಪಾ’ ಮಾಡುವಾಗ ಹಿಂದೂ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿದ ಮುಸ್ಲಿಂ ಯುವಕ !