
ಸೋಮನಾಥ (ಗುಜರಾತ್) – “ಒಂದು ಸಾವಿರ ವರ್ಷಗಳ ಹಿಂದೆ, ಆಕ್ರಮಣಕಾರರು ತಾವು ಗೆದ್ದಿದ್ದೇವೆ ಎಂದು ಭಾವಿಸಿದ್ದರು. ಗಜನಿಯು ಸೋಮನಾಥವನ್ನು ನಾಶಮಾಡಿದ್ದೇನೆ ಎಂದು ಅಂದುಕೊಂಡಿದ್ದ. ಆದರೆ, ಅದರ ಬೆನ್ನಲ್ಲೇ ದೇವಸ್ಥಾನವನ್ನು ಪುನರ್ನಿರ್ಮಿಸಲಾಯಿತು. ತದನಂತರ ಖಿಲ್ಜಿ ದೇವಸ್ಥಾನವನ್ನು ಧ್ವಂಸಗೊಳಿಸಿದನು, ಆದರೆ ಜುನಾಗಢದ ರಾಜರು ಅದನ್ನು ಮತ್ತೆ ಕಟ್ಟಿದರು. ಇಂದು ಸೋಮನಾಥ ದೇವಸ್ಥಾನದ ಮೇಲೆ ಹಾರಾಡುತ್ತಿರುವ ಧ್ವಜವು ಭಾರತದ ಶಕ್ತಿ ಮತ್ತು ಸಾಮರ್ಥ್ಯವನ್ನು ಪ್ರದರ್ಶಿಸುತ್ತಿದೆ. ಸೋಮನಾಥದ ಇತಿಹಾಸವು ವಿನಾಶ ಮತ್ತು ಸೋಲಿನದ್ದಲ್ಲ, ಬದಲಿಗೆ ವಿಕಾಸ ಮತ್ತು ಪುನರ್ನಿರ್ಮಾಣದ್ದಾಗಿದೆ,” ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇಲ್ಲಿ ಹೇಳಿದರು . ಪ್ರಧಾನಮಂತ್ರಿ ಮೋದಿ ಅವರು ಜನವರಿ 10ರ ಸಂಜೆ ಸೋಮನಾಥಕ್ಕೆ ತೆರಳಿದ್ದರು, ಕ್ರಿ.ಶ. 1026 ರಲ್ಲಿ ಸೋಮನಾಥ ದೇವಸ್ಥಾನದ ಮೇಲೆ ನಡೆದ ಮೊದಲ ಆಕ್ರಮಣಕ್ಕೆ 1,000 ವರ್ಷಗಳು ಪೂರ್ತಿಯಾದ ನೆನಪಿನಲ್ಲಿ ಆಯೋಜಿಸಲಾದ ‘ಸೋಮನಾಥ ಸ್ವಾಭಿಮಾನ ಪರ್ವ’ ಕಾರ್ಯಕ್ರಮದಲ್ಲಿ ಅವರು ಭಾಗವಹಿಸಿದರು. ಜನವರಿ 11ರಂದು ಬೆಳಿಗ್ಗೆ ಶಂಖ ಸರ್ಕಲ್‌ನಲ್ಲಿ ನಡೆದ ‘ಶೌರ್ಯ ಯಾತ್ರೆ’ಯ ನೇತೃತ್ವ ವಹಿಸಿ, ನಂತರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಸಭೆಯನ್ನು ಉದ್ದೇಶಿಸಿ ಪ್ರಧಾನಿ ಮಾತನಾಡಿದರು.
ಪ್ರಧಾನಿ ಮೋದಿ ಮಂಡಿಸಿದ ಪ್ರಮುಖ ಅಂಶಗಳು:
ಒಡಕು ಮೂಡಿಸುವ ಶಕ್ತಿಗಳ ಬಗ್ಗೆ ಎಚ್ಚರವಿರಲಿ! ಇಂದು ಕೂಡ ನಾವು ಜಾಗರೂಕರಾಗಿ ಮತ್ತು ಒಗ್ಗಟ್ಟಾಗಿರಬೇಕು. ನಮ್ಮಲ್ಲಿ ಭೇದ-ಭಾವ ಮೂಡಿಸಲು ಪ್ರಯತ್ನಿಸುವ ಶಕ್ತಿಗಳ ಬಗ್ಗೆ ನಾವು ಎಚ್ಚರದಿಂದಿರಬೇಕು. ಇಂದು ಪ್ರತಿಯೊಬ್ಬ ನಾಗರಿಕನಿಗೂ ‘ವಿಕಸಿತ ಭಾರತ’ದ ಮೇಲೆ ನಂಬಿಕೆಯಿದೆ. ಭಾರತವು ತನ್ನ ಹೆಮ್ಮೆಯನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಲಿದೆ ಮತ್ತು ನಾವು ಬಡತನದ ವಿರುದ್ಧದ ಹೋರಾಟವನ್ನು ಗೆಲ್ಲಲಿದ್ದೇವೆ.
ದೇಶದ ಕೆಲವು ಶಕ್ತಿಗಳಿಂದ ದೇವಸ್ಥಾನದ ಪುನರ್ನಿರ್ಮಾಣಕ್ಕೆ ವಿರೋಧ !
ಯಾವ ದೇಶಕ್ಕೆ ಶ್ರೀಮಂತ ಪರಂಪರೆ ಇರುತ್ತದೆಯೋ, ಆ ದೇಶಕ್ಕೆ ಅದರ ಬಗ್ಗೆ ಹೆಮ್ಮೆ ಇರುತ್ತದೆ. ಆದರೆ, ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬಂದ ನಂತರವೂ ಗುಲಾಮಿ ಮಾನಸಿಕತೆಯ ಜನರು ಆ ಪರಂಪರೆಯನ್ನು ಮರೆತರು. ಸರ್ದಾರ್ ಪಟೇಲರು ಸೋಮನಾಥ ದೇವಸ್ಥಾನದ ಪುನರ್ನಿರ್ಮಾಣದ ಪ್ರತಿಜ್ಞೆ ಮಾಡಿದಾಗ, ಅವರನ್ನು ತಡೆಯುವ ಪ್ರಯತ್ನಗಳು ನಡೆದವು. ಅಂದಿನ ರಾಷ್ಟ್ರಪತಿ ಡಾ. ರಾಜೇಂದ್ರ ಪ್ರಸಾದ್ ಅವರನ್ನೂ ದೇವಸ್ಥಾನಕ್ಕೆ ಭೇಟಿ ನೀಡದಂತೆ ತಡೆಯಲಾಗಿತ್ತು.
ಸೋಮನಾಥ ಅಥವಾ ಭಾರತ ಯಾವುದೂ ನಶಿಸಲಿಲ್ಲ!
ಇದೊಂದು ಅದ್ಭುತ ಯೋಗಾ-ಯೋಗವಾಗಿದೆ. ಸೋಮನಾಥದ ಮೇಲೆ ನಡೆದ ಆಕ್ರಮಣಕ್ಕೆ 1,000 ವರ್ಷಗಳಾಗಿವೆ ಮತ್ತು ಅದರ ಆಧುನಿಕ ಪುನರ್ನಿರ್ಮಾಣಕ್ಕೆ 75 ವರ್ಷಗಳು ತುಂಬಿವೆ. ಸೋಮನಾಥವನ್ನು ನಾಶಪಡಿಸಲು ಒಂದು ಸಲವಲ್ಲ, ಅಸಂಖ್ಯಾತ ಬಾರಿ ಪ್ರಯತ್ನಿಸಲಾಯಿತು. ವಿದೇಶಿ ಆಕ್ರಮಣಕಾರರು ಶತಮಾನಗಳ ಕಾಲ ಭಾರತವನ್ನು ಅಳಿಸಲು ಪ್ರಯತ್ನಿಸಿದರು; ಆದರೆ ಸೋಮನಾಥ ಅಳಿಯಲಿಲ್ಲ, ಭಾರತವೂ ನಶಿಸಲಿಲ್ಲ. ಇಂದು ನಿಮ್ಮ ಮುಂದೆ ಮಾತನಾಡುತ್ತಿರುವಾಗ ನನ್ನ ಮನಸ್ಸಿನಲ್ಲಿ ಒಂದು ಪ್ರಶ್ನೆ ಮೂಡುತ್ತಿದೆ—ನೀವು ಕುಳಿತಿರುವ ಈ ಜಾಗದಲ್ಲಿ 1,000 ವರ್ಷಗಳ ಹಿಂದೆ ವಾತಾವರಣ ಹೇಗಿದ್ದಿರಬಹುದು? ನಮ್ಮ ಪೂರ್ವಜರು ತಮ್ಮ ನಂಬಿಕೆ ಮತ್ತು ಶ್ರದ್ಧೆಗಾಗಿ ಪ್ರಾಣದ ಹಂಗು ತೊರೆದಿದ್ದರು.
ಸೋಮನಾಥದ ಗಾಥೆಯನ್ನು ಪದಗಳಲ್ಲಿ ವರ್ಣಿಸಲು ಸಾಧ್ಯವಿಲ್ಲ!
ಓಂಕಾರದ ನಾದ ಮತ್ತು ಮಂತ್ರ ಘೋಷಗಳು ಸತತ 72 ಗಂಟೆಗಳ ಕಾಲ ಮೊಳಗಿವೆ. ಸೋಮನಾಥದ ಸಾವಿರ ವರ್ಷಗಳ ಪುರಾತನ ಇತಿಹಾಸ ಮತ್ತು ಶೌರ್ಯ ಯಾತ್ರೆಯ ವರ್ಣನೆಯು ಮಂತ್ರಮುಗ್ಧಗೊಳಿಸುವಂತಿದೆ. ಈ ಅನುಭವವನ್ನು ಶಬ್ದಗಳಲ್ಲಿ ವ್ಯಕ್ತಪಡಿಸಲು ಸಾಧ್ಯವಿಲ್ಲ. ಈ ಕಾಲ, ಈ ಪರಿಸರ ಮತ್ತು ಈ ಉತ್ಸವ—ಎಲ್ಲವೂ ಅದ್ಭುತವಾಗಿದೆ. ಒಂದೆಡೆ ಪರಶಿವನಾದ ಮಹಾದೇವನಿದ್ದರೆ, ಮತ್ತೊಂದೆಡೆ ಸಮುದ್ರದ ಅಲೆಗಳು, ಸೂರ್ಯನ ಕಿರಣಗಳು, ಮಂತ್ರಗಳ ಪ್ರತಿಧ್ವನಿ ಮತ್ತು ಭಕ್ತಿಯ ಅಲೆ ಇದೆ. ಈ ದಿವ್ಯ ವಾತಾವರಣದಲ್ಲಿ ನಿಮ್ಮೆಲ್ಲರ ಉಪಸ್ಥಿತಿಯು ಈ ಕ್ಷಣವನ್ನು ಭವ್ಯವಾಗಿಸಿದೆ. ಸೋಮನಾಥ ದೇವಸ್ಥಾನ ಟ್ರಸ್ಟ್‌ನ ಅಧ್ಯಕ್ಷನಾಗಿ ನನಗೆ ‘ಸೋಮನಾಥ ಸ್ವಾಭಿಮಾನ ಪರ್ವ’ದಲ್ಲಿ ಸೇವೆ ಸಲ್ಲಿಸುವ ಅವಕಾಶ ಸಿಕ್ಕಿರುವುದು ನನ್ನ ಸೌಭಾಗ್ಯವೆಂದು ಭಾವಿಸುತ್ತೇನೆ.
Muzaffarpur Hospital Fire : ಮುಜಫ್ಫರಪುರ (ಬಿಹಾರ)ದ ಖಾಸಗಿ ಆಸ್ಪತ್ರೆಯಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ 4 ಸಾವು, 20ಕ್ಕೂ ಹೆಚ್ಚು ಜನರಿಗೆ ಗಾಯ
90 ವರ್ಷದ ವಯೋವೃದ್ಧ ಅತ್ತೆಯನ್ನು ತನ್ನ ತಲೆಯ ಮೇಲೆ ಹೊತ್ತುಕೊಂಡು ಸವಾರಿ ಮಾಡುತ್ತಾ 84 ಕೋಸು ಪ್ರದಕ್ಷಿಣೆ ಪೂರ್ಣಗೊಳಿಸುತ್ತಿರುವ ಸೊಸೆ!
ಮುಜಫರ್ನಗರದಲ್ಲಿ(ಉತ್ತರ ಪ್ರದೇಶ) ಆಘಾತಕಾರಿ ಘಟನೆ; ಬಾಕಿ ಹಣ ಸಿಗದಿದ್ದಕ್ಕೆ ಜೋಡಿಸಿದ ಮೂಳೆಯನ್ನು ಮುರಿದ ವೈದ್ಯ!
Vande Mataram : ಬಂಗಾಳದ ಮದರಸಾಗಳಲ್ಲಿ ‘ವಂದೇ ಮಾತರಂ’ ಕಡ್ಡಾಯಗೊಳಿಸುವುದಕ್ಕೆ ‘ಆಲ್ ಇಂಡಿಯಾ ಮುಸ್ಲಿಂ ಪರ್ಸನಲ್ ಲಾ ಬೋರ್ಡ್’ ಆಕ್ಷೇಪ
ಕೊಲಕಾತಾ: ಟಿಎಂಸಿ ವಿದ್ಯಾರ್ಥಿ ಸಂಘಟನೆಯ ಕಚೇರಿಯಲ್ಲಿ ಭಾರಿ ನಗದು ಪತ್ತೆ
ಕೊಲಕಾತಾ: ತೃಣಮೂಲ ಕಾಂಗ್ರೆಸ್ನ ಮೇಯರ್ ಫಿರ್ಹಾದ್ ಹಕೀಮ್ ಅವರ ರಾಜೀನಾಮೆ