Temple Thief : ಝಾನ್ಸಿ (ಉತ್ತರ ಪ್ರದೇಶ): ದೇವಸ್ಥಾನದ ಆಭರಣ ಕದ್ದು ತೆಗೆದುಕೊಂಡು ಹೋಗುವಾಗ ದೇವಿಯ ಕ್ಷಮೆ ಯಾಚಿಸಿದ ಕಳ್ಳ !

ಝಾನ್ಸಿ (ಉತ್ತರ ಪ್ರದೇಶ) – ಕಳ್ಳ ನೊಬ್ಬನು ದೇವಸ್ಥಾನವೊಂದರಲ್ಲಿ ದೇವಿಯ ವಿಗ್ರಹದ ಮೇಲಿರುವ ಆಭರಣಗಳನ್ನು ಕದ್ದಿದ್ದಾನೆ. ನಂತರ ಕೈ ಜೋಡಿಸಿ ಎರಡು ಬಾರಿ ದೇವಿಯ ಕ್ಷಮೆ ಯಾಚಿಸಿದ್ದಾನೆ. ಈ ಘಟನೆಯ ಸಿಸಿಟಿವಿ ವಿಡಿಯೋ ಬೆಳಕಿಗೆ ಬಂದಿದೆ. ಈ ವಿಡಿಯೋ ಪ್ರಸ್ತುತ ಸಾಮಾಜಿಕ ಮಾಧ್ಯಮಗಳಲ್ಲಿ ವೇಗವಾಗಿ ಪ್ರಸಾರವಾಗುತ್ತಿದೆ.
ಈ ಘಟನೆ ಝಾನ್ಸಿಯ ಗರೌಠಾ ಪ್ರದೇಶದಲ್ಲಿರುವ ಗರೌಠಾ ಮಢಾ ಮಾರ್ಗದಲ್ಲಿರುವ ದೊಡ್ಡ ಮಾತೆಯ ದೇವಸ್ಥಾನದಲ್ಲಿ ನಡೆದಿದೆ. ಜನವರಿ ೧೦ರ ರಾತ್ರಿ ಈ ಕಳ್ಳತನ ನಡೆದಿದೆ. ಕತ್ತಲೆಯ ಲಾಭ ಪಡೆದ ಕಳ್ಳನು ಮೊದಲು ದೇವಸ್ಥಾನದ ಬೀಗ ಮುರಿದನು ಮತ್ತು ನಂತರ ದೇವಿಗೆ ಅರ್ಪಿಸಿದ್ದ ಅಮೂಲ್ಯ ಆಭರಣಗಳನ್ನು ಕದ್ದಿದ್ದಾನೆ. ಬೆಳಿಗ್ಗೆ ಎಂದಿನಂತೆ ಪೂಜೆ ಮಾಡಲು ಭಕ್ತರು ದೇವಸ್ಥಾನಕ್ಕೆ ಬಂದಾಗ ಮುರಿದ ಬೀಗವನ್ನು ನೋಡಿ ಒಮ್ಮೆಲೆ ಗದ್ದಲ ಉಂಟಾಯಿತು. ಪೊಲೀಸರು ಈ ಪ್ರಕರಣದ ತನಿಖೆ ಪ್ರಾರಂಭಿಸಿದ್ದಾರೆ.

ಸಂಪಾದಕೀಯ ನಿಲುವು

ಪಾಪದ ಅರಿವಿನ ಕೊರತೆಗಿಂತ, ಪಾಪದ ಅರಿವಿದ್ದರೂ ಕೆಟ್ಟ ಕೆಲಸ ಮಾಡಿದರೆ ಧರ್ಮದ ಪ್ರಕಾರ ಪಾಪ ಹೆಚ್ಚೇ ಆಗುತ್ತದೆ !