Sabarimala Gold Theft Row : ಶಬರಿಮಲೆ ದೇವಾಲಯದ ಮುಖ್ಯ ಅರ್ಚಕರ ಬಂಧನ !

ಶಬರಿಮಲೆ (ಕೇರಳ) ದೇವಾಲಯದಲ್ಲಿ ಚಿನ್ನ ಕಳುವು ಪ್ರಕರಣ

ತಿರುವನಂತಪುರಂ (ಕೇರಳ) – ಶಬರಿಮಲೆ ದೇವಾಲಯದಲ್ಲಿ ಚಿನ್ನ ಕಳುವಾದ ಪ್ರಕರಣಕ್ಕೆ ಸಂಬಂಧಿಸಿದಂತೆ, ರಾಜ್ಯ ಸರಕಾರದ ವಿಶೇಷ ತನಿಖಾ ತಂಡವು ಜನವರಿ ೯ ರಂದು ಮುಖ್ಯ ಅರ್ಚಕ ಕಂದರಾರು ರಾಜೀವರು ಅವರನ್ನು ವಶಕ್ಕೆ ಪಡೆದಿತ್ತು. ಈಗ ಅವರನ್ನು ಬಂಧಿಸಲಾಗಿದೆ. ‘ಈ ಪ್ರಕರಣದಲ್ಲಿ ಮುಖ್ಯ ಆರೋಪಿ ಉಣ್ಣಿಕೃಷ್ಣನ್ ಪೋಟ್ಟಿ ಅವರೊಂದಿಗೆ ರಾಜೀವರು ರಿಗೆ ನಿಕಟ ಸಂಬಂಧ ಇತ್ತು’ ಎಂದು ತನಿಖಾ ಅಧಿಕಾರಿಗಳು ಹೇಳಿದ್ದಾರೆ. ತನಿಖೆಯಲ್ಲಿ ಬಯಲಾಗಿರುವಂತೆ, ಅಯ್ಯಪ್ಪ ಸ್ವಾಮಿ ದೇವಾಲಯದಲ್ಲಿ ದ್ವಾರಪಾಲಕ ವಿಗ್ರಹ ಮತ್ತು ಶ್ರೀಕೋವಿಲ್ನ(ದೇವಸ್ಥಾನ) ಚಿನ್ನದ ಪಾತ್ರೆಯ ಸಂಶಯಾಸ್ಪದ ಖರೀದಿಯ ಶಿಫಾರಸ್ಸಿನಲ್ಲಿಯೂ ರಾಜೀವರು ಅವರ ಪಾತ್ರವಿತ್ತು. ಈ ಪ್ರಕರಣದಲ್ಲಿ ಇದು ೧೧ ನೇ ಬಂಧನವಾಗಿದೆ.

ಹಣದ ವರ್ಗಾವಣೆ ಪ್ರಕರಣದಲ್ಲಿ ದೂರು ದಾಖಲಿಸಿದ ಜಾರಿ ನಿರ್ದೇಶನಾಲಯ !

ಜಾರಿ ನಿರ್ದೇಶನಾಲಯವು (ED) ಸಹ ಈ ಪ್ರಕರಣದಲ್ಲಿ ತನ್ನದೇ ಆದ ಸ್ವತಂತ್ರ ತನಿಖೆಯನ್ನು ಕೈಗೆತ್ತಿಕೊಂಡಿದೆ.”. ಈ ಪ್ರಕರಣದಲ್ಲಿ ಹಣದ ಅಕ್ರಮ ವರ್ಗಾವಣೆಗೆ ಸಂಬಂಧಿಸಿದ ಕಲಂಗಳ ಅಡಿಯಲ್ಲಿ ಅಪರಾಧ ದಾಖಲಿಸಲಾಗಿದೆ. ಕೇರಳದ ಉಚ್ಚ ನ್ಯಾಯಾಲಯವು ಡಿಸೆಂಬರ್ನಲ್ಲಿ ವಿಶೇಷ ತನಿಖಾ ತಂಡದ ಆಕ್ಷೇಪಣೆಯನ್ನು ತಿರಸ್ಕರಿಸಿ, ನಿರ್ದೇಶನಾಲಯಕ್ಕೆ ಸ್ವತಂತ್ರವಾಗಿ ತನಿಖೆ ನಡೆಸಲು ಅನುಮತಿ ನೀಡಿತ್ತು.

ಸಂಪಾದಕೀಯ ನಿಲುವು

ಹಿಂದೂಗಳ ದೇವಾಲಯಗಳ ಸರಕಾರೀಕರಣದ ಪರಿಣಾಮ ತಿಳಿಯಿರಿ! ಮುಖ್ಯ ಅರ್ಚಕರನ್ನೇ ಬಂಧಿಸಿದರೆ, ದೇವಾಲಯ ಸಮಿತಿಯಲ್ಲಿ ಸರಕಾರದಿಂದ ನೇಮಕಗೊಂಡ ಜನರು ಎಷ್ಟೊಂದು ಭ್ರಷ್ಟರಾಗಿರಬಹುದು ಎಂಬುದನ್ನು ಊಹಿಸಬಹುದು. ಆದ್ದರಿಂದ, ಈಗಲಾದರೂ ಸರಕಾರೀಕರಣವನ್ನು ಶತಾಯಗತಾಯ ವಿರೋಧಿಸಿ!