ಕೆಳಗೆ ಇಳಿದು ಬರಲು ಮದ್ಯದ ಬಾಟಲಿ ಕೇಳಿದ ಕುಡುಕ

ತಿರುಪತಿ (ಆಂಧ್ರಪ್ರದೇಶ) – ಇಲ್ಲಿನ ಶ್ರೀ ಗೋವಿಂದರಾಜಸ್ವಾಮಿ ದೇವಾಲಯದ ಭದ್ರತಾ ಸಿಬ್ಬಂದಿಯ ಕಣ್ತಪ್ಪಿಸಿ ದೇವಾಲಯದ ಆವರಣಕ್ಕೆ ಪ್ರವೇಶಿಸಿದ ಕುಡಿದ ವ್ಯಕ್ತಿಯೊಬ್ಬ ದೇವಾಲಯದ ಗೋಡೆಯ ಮೇಲೆ ಹತ್ತಿದನು. ಗೋಪುರದ ಮೇಲೆ ಹತ್ತಿ ಕಲಶದವರೆಗೆ ವ್ಯಕ್ತಿ ಹೋದದ್ದನ್ನು ಕಂಡು ದೇವಾಲಯದ ಅಧಿಕಾರಿಗಳು ಮತ್ತು ಸಿಬ್ಬಂದಿ ಜಮಾಯಿಸಿದರು. ಯಾವುದೇ ಅಹಿತಕರ ಘಟನೆ ನಡೆಯದಂತೆ, ದೇವಾಲಯದ ಆಡಳಿತವು ತಕ್ಷಣ ಪೊಲೀಸರು ಮತ್ತು ಅಗ್ನಿಶಾಮಕ ಇಲಾಖೆಗೆ ಮಾಹಿತಿ ನೀಡಿದರು. ಗೋಪುರದ ಕಲಶದ ಮೇಲೆ ಏರಿದ ನಂತರ, “ಮದ್ಯದ ಬಾಟಲಿ ತಂದುಕೊಟ್ಟರೆ ಮಾತ್ರ ಕೆಳಗಿಳಿಯುತ್ತೇನೆ” ಎಂದು ಆ ಕುಡುಕ ಷರತ್ತು ಹಾಕಿದನು. ದೇವಾಲಯದ ಭದ್ರತಾ ಅಧಿಕಾರಿಗಳು ಆತನ ಬೇಡಿಕೆಯನ್ನು ಒಪ್ಪಿಕೊಂಡ ನಂತರ, ಆತ ತಾನಾಗಿಯೇ ಸುರಕ್ಷಿತವಾಗಿ ಕೆಳಗಿಳಿದನು. ನಂತರ ಪೊಲೀಸರು ಆತನನ್ನು ಬಂಧಿಸಿದರು.
ಈ ಮದ್ಯವ್ಯಸನಿಯ ಹೆಸರು ಕುಟ್ಟಾಡಿ ತಿರುಪತಿ (ವಯಸ್ಸು ೪೫ ವರ್ಷ) ಎಂದು ಹೇಳಲಾಗಿದೆ. ಈತ ತೆಲಂಗಾಣದ ನಿಜಾಮಾಬಾದ್ ಜಿಲ್ಲೆಯ ಕುರ್ಮವಾಡದಲ್ಲಿರುವ ಪೆದ್ದಮಲ್ಲಾ ರೆಡ್ಡಿ ಕಾಲೋನಿಯ ನಿವಾಸಿ. ಅನ್ಯ ಭಕ್ತರಂತೆ ಈತ ಕೂಡ ದೇವಾಲಯ ಪ್ರವೇಶಿಸಿದ್ದ.
ಸಂಪಾದಕೀಯ ನಿಲುವು
|
‘ಎನ್ಸಿಇಆರ್ಟಿ’ಯ 9ನೇ ತರಗತಿಯ ಪುಸ್ತಕದಲ್ಲಿ ತುರ್ತು ಪರಿಸ್ಥಿತಿಯ ಮಾಹಿತಿ ಸೇರ್ಪಡೆ : NCERT Introduces Emergency
ಆರೋಪಿ ಭೀಮರಾವ್ ಕಾಂಬ್ಳೆಗೆ ದೋಷಿ ಎಂದು ತೀರ್ಪು; ಜೂನ್ 29 ರಂದು ಅಂತಿಮ ಶಿಕ್ಷೆ ಪ್ರಕಟ : Nasrapur Case
ಎನ್ಸಿಇಆರ್ಟಿ ಪಠ್ಯದಲ್ಲಿ ಮರಾಠಾ ಸಾಮ್ರಾಜ್ಯದ ಇತಿಹಾಸ: ಮಹಾರಾಷ್ಟ್ರ ಶಿಕ್ಷಣ ಸಚಿವರ ಆಗ್ರಹ
ಶ್ರೀರಾಮಮಂದಿರದಲ್ಲಿ ದೇಣಿಗೆ ಕಳ್ಳತನ ಪ್ರಕರಣ: ಅಂತಿಮವಾಗಿ ದೂರು ದಾಖಲು
ಘಾಜಿಯಾಬಾದ್ (ಉತ್ತರ ಪ್ರದೇಶ) ಇಲ್ಲಿ ವೈದ್ಯ ನದೀಮ್ ನಿಂದ ರೋಗಿಯ ತಪ್ಪು ರಕ್ತನಾಳ ಕತ್ತರಿಸಿದ! : Doctor cuts wrong Vein
ದೇವತೆ, ಭಾರತಮಾತೆ ಮತ್ತು ರಾಜಕೀಯ ಹುತಾತ್ಮರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಲು ಸಾಧ್ಯವಿಲ್ಲ !