
ಹೈದರಾಬಾದ್ (ತೆಲಂಗಾಣ) – ಭಾರತವು ಮತ್ತೊಮ್ಮೆ ‘ವಿಶ್ವಗುರು’ ಆಗುವ ದಿಕ್ಕಿನಲ್ಲಿ ಮುನ್ನಡೆಯಬೇಕು. ಇದು ಮಹತ್ವಾಕಾಂಕ್ಷೆಯಲ್ಲ, ಬದಲಾಗಿ ಸಂಪೂರ್ಣ ಜಗತ್ತಿನ ಹಿತಕ್ಕಾಗಿ ಕಾಲದ ಬೇಡಿಕೆಯಾಗಿದೆ, ಎಂದು ಪ.ಪೂ. ಸರಸಂಘಚಾಲಕ ಡಾ. ಮೋಹನ್‌ಜಿ ಭಾಗವತ್ ಅವರು ಹೇಳಿದರು. ಅವರು ಇಲ್ಲಿ ಒಂದು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ಪ.ಪೂ. ಭಾಗವತ್ ಅವರು ಮಾತು ಮುಂದುವರೆಸಿ, ಸನಾತನ ಧರ್ಮವನ್ನು ಪುನಃ ಜೀವಂತಗೊಳಿಸುವ ಸಮಯ ಬಂದಿದೆ. “ಸನಾತನ ಧರ್ಮವನ್ನು ಮತ್ತೆ ಜೀವಂತಗೊಳಿಸುವುದು ದೇವರ ಇಚ್ಛೆಯಾಗಿದ್ದು, ಹಿಂದೂ ರಾಷ್ಟ್ರದ ಉದಯವು ಸನಾತನ ಧರ್ಮವನ್ನು ಪುನರುಜ್ಜೀವನಗೊಳಿಸುವುದಕ್ಕಾಗಿಯೇ ಇದೆ’, ಎಂದು ಯೋಗಿ ಅರವಿಂದರು ೧೦೦ ವರ್ಷಗಳ ಹಿಂದೆಯೆ ಹೇಳಿದ್ದರು.
ಪ.ಪೂ. ಸರಸಂಘಚಾಲಕರು ಮಂಡಿಸಿದ ಮಹತ್ವಪೂರ್ಣ ಸೂತ್ರಗಳು!
೧. ಭಾರತದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ ಮತ್ತು ವಿದೇಶದಲ್ಲಿ ಹಿಂದೂ ಸ್ವಯಂಸೇವಕ ಸಂಘವು ಒಂದೇ ರೀತಿಯ ಕೆಲಸ ಮಾಡುತ್ತಿವೆ. ಎರಡೂ ಸಂಘಟನೆಗಳು ಹಿಂದೂಗಳ ಸಂಘಟನೆಗಾಗಿ ಕಾರ್ಯನಿರ್ವಹಿಸುತ್ತಿವೆ.
೨. ಭಾರತ, ಹಿಂದೂ ರಾಷ್ಟ್ರ, ಸನಾತನ ಧರ್ಮ ಮತ್ತು ಹಿಂದುತ್ವವು ಒಂದೇ ಸಿದ್ಧಾಂತದ ವಿಭಿನ್ನ ರೂಪಗಳಾಗಿವೆ.
೩. ಭಾರತೀಯರು ಭಾರತವನ್ನು ‘ವಿಶ್ವಗುರು’ ಮಾಡುವುದಕ್ಕಾಗಿ ನಿರಂತರವಾಗಿ ಪ್ರಯತ್ನ ಮಾಡಬೇಕಾಗುತ್ತದೆ. ನಾವು ಇದೇ ದಿಕ್ಕಿನಲ್ಲಿ ಕೆಲಸ ಮಾಡುತ್ತಿದ್ದೇವೆ ಮತ್ತು ವಿವಿಧ ಮಾರ್ಗಗಳಿಂದ ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆಗಳನ್ನು ತರಲು ಪ್ರಯತ್ನಿಸುತ್ತಿದ್ದೇವೆ.
ಸಮಾಜವಾದಿ ಪಕ್ಷದ ಅಧಿಕಾರಾವಧಿಯಲ್ಲಿ ‘ವಕ್ಫ್ ಮಂಡಳಿ’ಯ ಶತಕೋಟಿ ರೂಪಾಯಿಗಳ ಹಗರಣ! – ಮೌಲಾನಾ ಶಹಾಬುದ್ದೀನ ರಿಜ್ವಿ ಬರೇಲವಿ
“ನಾನು ಛತ್ರಪತಿ ಶಿವಾಜಿ ಮಹಾರಾಜರ ಅನುಯಾಯಿಯಾಗಿದ್ದು ರಣರಂಗ ಬಿಟ್ಟು ಓಡಿಹೋಗುವವನಲ್ಲ!”
ಭೋಜಶಾಲೆಯ ಪ್ರಕರಣದಲ್ಲಿ ಮಧ್ಯಪ್ರದೇಶ ಉಚ್ಚ ನ್ಯಾಯಾಲಯದ ತೀರ್ಪಿಗೆ ತಡೆ ನೀಡಲು ಸರ್ವೋಚ್ಚ ನ್ಯಾಯಾಲಯದ ನಿರಾಕರಣೆ
ಮೇವು ಹಗರಣ ಪ್ರಕರಣದಲ್ಲಿ ಲಾಲು ಪ್ರಸಾದ್ ಯಾದವ್ ಅವರಿಗೆ ಮಂಜೂರಾದ ಜಾಮೀನು ರದ್ದುಗೊಳಿಸಲು ಸುಪ್ರೀಂ ಕೋರ್ಟ್ ನ ನಿರಾಕರಣೆ
ಭಗವಾನ್ ಜಗನ್ನಾಥರ ರಥಯಾತ್ರೆಗೂ ಮುನ್ನ ಗುಜರಾತ್ನಲ್ಲಿ ೫ ಭಯೋತ್ಪಾದಕರ ಬಂಧನ
ನ್ಯಾಯಾಧೀಶರ ಕುರ್ಚಿಯ ಮೇಲೆ ಮಾಟಮಂತ್ರ ಮಾಡಿದ ಆರೋಪದಡಿ ಮಹಿಳೆಯ ಬಂಧನ