Rajasthan Violence : ಚೋಮು (ರಾಜಸ್ಥಾನ): ಮಸೀದಿ ಬಳಿಯ ಕಲ್ಲುಗಳನ್ನು ತೆರವುಗೊಳಿಸಿದ್ದಕ್ಕೆ ಪೊಲೀಸರ ಮೇಲೆ ಮುಸ್ಲಿಮರಿಂದ ಕಲ್ಲುತೂರಾಟ

  • ಹಲವು ಪೊಲೀಸರಿಗೆ ಗಾಯ

  • ಇಂಟರ್ ನೆಟ್ ಸ್ಥಗಿತ

ಜೈಪುರ (ರಾಜಸ್ಥಾನ) – ಜಿಲ್ಲೆಯ ಚೋಮುವಿನಲ್ಲಿ ಡಿಸೆಂಬರ್ 25ರ ಮಧ್ಯರಾತ್ರಿಯ ನಂತರ ಮಸೀದಿಗೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಮತಾಂಧರು ಪೊಲೀಸರ ಮೇಲೆ ಕಲ್ಲುತೂರಾಟ ನಡೆಸಿದರು. ಈ ಘಟನೆಯಲ್ಲಿ ಹಲವಾರು ಪೊಲೀಸ್ ಸಿಬ್ಬಂದಿಗಳು ಗಾಯಗೊಂಡರು. ಪರಿಸ್ಥಿತಿ ಹದಗೆಡುತ್ತಿದ್ದಂತೆ ಪೊಲೀಸರು ಅಶ್ರುವಾಯು ಪ್ರಯೋಗಿಸಬೇಕಾಯಿತು ಮತ್ತು ಲಾಠಿ ಚಾರ್ಜ ನಡೆಸಬೇಕಾಯಿತು. ಕಠಿಣ ಕ್ರಮದ ನಂತರ ಕೆಲವು ಗಂಟೆಗಳಲ್ಲಿ ಪರಿಸ್ಥಿತಿ ಹತೋಟಿಗೆ ಬಂದಿದೆ. ಈ ಘಟನೆಯ ನಂತರ ಮುನ್ನೆಚ್ಚರಿಕಾ ಕ್ರಮವಾಗಿ ಚೋಮು ಬಸ್ ನಿಲ್ದಾಣ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ಭಾರಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದೆ.

ಮಸೀದಿ ಪ್ರದೇಶದ ಕಲ್ಲುಗಳನ್ನು ತೆರವುಗೊಳಿಸುವಾಗ ವಿವಾದ

ಲಭ್ಯವಿರುವ ಮಾಹಿತಿಯ ಪ್ರಕಾರ, ಡಿಸೆಂಬರ್ 25ರ ಸಂಜೆಯಿಂದ ಮಸೀದಿ ಪ್ರದೇಶದ ಸಮೀಪವಿರುವ ರಸ್ತೆಬದಿಯಲ್ಲಿ ಸಂಗ್ರಹವಾಗಿದ್ದ ಕಲ್ಲುಗಳನ್ನು ತೆರವುಗೊಳಿಸುವ ಕೆಲಸ ನಡೆಯುತ್ತಿತ್ತು. ಈ ಕಲ್ಲುಗಳು ಬಹಳ ದಿನಗಳಿಂದ ರಸ್ತೆಯಲ್ಲೇ ಬಿದ್ದಿದ್ದರಿಂದ ಸಂಚಾರಕ್ಕೆ ಅಡ್ಡಿಯಾಗುತ್ತಿತ್ತು ಮತ್ತು ಸಂಚಾರ ದಟ್ಟಣೆ ಉಂಟಾಗುತ್ತಿತ್ತು. ಕಲ್ಲು ತೆರವುಗೊಳಿಸುವ ಕ್ರಮಕ್ಕೆ ಸ್ಥಳೀಯ ಮುಸ್ಲಿಮರಿಂದ ವಿರೋಧ ವ್ಯಕ್ತವಾಯಿತು ಮತ್ತು ಹೆಚ್ಚಿನ ಸಂಖ್ಯೆಯಲ್ಲಿ ಮುಸ್ಲಿಮರು ಜಮಾಯಿಸಿದರು. ಈ ವೇಳೆ ಕೆಲವು ಮುಸ್ಲಿಮರು ಇದ್ದಕ್ಕಿದ್ದಂತೆ ಪೊಲೀಸರ ಮೇಲೆ ತೀವ್ರ ಕಲ್ಲು ತೂರಾಟ ನಡೆಸಲಾರಂಭಿಸಿದರು. ಶಾಂತಿ ಕಾಪಾಡುವ ಉದ್ದೇಶದಿಂದ ವಿಭಾಗೀಯ ಆಯುಕ್ತರು ಆದೇಶ ಹೊರಡಿಸಿದ್ದು, ಚೋಮು ಪ್ರದೇಶದಲ್ಲಿ ಡಿಸೆಂಬರ್ 26ರ ಬೆಳಿಗ್ಗೆ 7 ಗಂಟೆಯಿಂದ ಡಿಸೆಂಬರ್ 27ರ ಬೆಳಿಗ್ಗೆ 7 ಗಂಟೆಯವರೆಗೆ ಇಂಟರನೆಟ್ ಸೇವೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.

ಸಂಪಾದಕೀಯ ನಿಲುವು

ಮತಾಂಧ ಮುಸ್ಲಿಮರಿಗೆ ಹಿಂದೂಗಳು ಮತ್ತು ಪೊಲೀಸರ ಮೇಲೆ ದಾಳಿ ಮಾಡಲು ಒಂದು ಕಾರಣವಿದ್ದರೂ ಸಾಕಾಗುತ್ತದೆ ಎಂಬುದು ಈ ಘಟನೆಯಿಂದ ಮತ್ತೊಮ್ಮೆ ತಿಳಿಯುತ್ತದೆ. ರಾಜಸ್ಥಾನದಲ್ಲಿ ಭಾಜಪ ಸರಕಾರವಿರುವಾಗ ಮತಾಂಧರು ಇಂತಹ ಕೆಲಸ ಮಾಡಲು ಧೈರ್ಯ ಮಾಡದಂತೆ ಭಯ ಹುಟ್ಟಿಸುವಂತಹ ಕಠಿಣ ಕ್ರಮವನ್ನು ಸರಕಾರ ಕೈಗೊಳ್ಳಬೇಕು ಎಂಬುದೇ ಹಿಂದೂಗಳಿಗೆ ಅನಿಸುತ್ತದೆ.