|

ಮುಂಬಯಿ – ಮುಂಬಯಿಯಲ್ಲಿ ಜನಸಂಖ್ಯೆಯ ರಚನೆಯು ವೇಗವಾಗಿ ಬದಲಾಗುತ್ತಿರುವ ಚಿತ್ರಣ ಹೊರಬಂದಿದೆ. ಇಲ್ಲಿ ಮುಸಲ್ಮಾನರ ಜನಸಂಖ್ಯೆ ಹೆಚ್ಚುತ್ತಿದೆ ಎಂಬ ಮಾಹಿತಿಯನ್ನು ಖ್ಯಾತ ಶಿಕ್ಷಣ ಸಂಸ್ಥೆಯಾದ ‘ಟಾಟಾ ಇನ್ಸ್ಟಿಟ್ಯೂಟ್ ಆಫ್ ಸೋಶಿಯಲ್ ಸೆನ್ಸಸ್’ (ಟಿ.ಐ.ಎಸ್.ಎಸ್.) ತನ್ನ ವರದಿಯಲ್ಲಿ ಹೇಳಿದೆ. ಈ ವರದಿಯ ಪ್ರಕಾರ, ಬಾಂಗ್ಲಾದೇಶದಿಂದ ನಡೆಯುತ್ತಿರುವ ನುಸುಳುವಿಕೆಯಿಂದ ಮುಂಬಯಿಯ ಸಾಮಾಜಿಕ ಭೂಪಟವೇ ಬದಲಾಗುತ್ತಿದೆ. ಬಾಂಗ್ಲಾದೇಶಿ ಮತ್ತು ರೋಹಿಂಗ್ಯಾ ಮುಸಲ್ಮಾನ್ ನುಸುಳುಕೋರರ ಸಂಖ್ಯೆ ಎಷ್ಟು ವೇಗವಾಗಿ ಹೆಚ್ಚಾಗುತ್ತಿದೆ ಎಂದರೆ, ೨೦೫೧ ರ ವೇಳೆಗೆ ನಗರದ ಜನಸಂಖ್ಯೆಯ ಸಮತೋಲನವು ಸಂಪೂರ್ಣವಾಗಿ ಏರುಪೇರಾಗಬಹುದು ಎಂದು ಅಂದಾಜಿಸಲಾಗಿದೆ.
🚨 Demographic alert 🚨
Reports from Tata Institute of Social Sciences (TISS) suggest Mumbai’s Muslim population could cross 30% by 2051, driven largely by illegal Bangladeshi infiltration.
📊 This trend isn’t limited to Mumbai – the upcoming census may reveal similar shifts… pic.twitter.com/XMTD78S6UA
— Sanatan Prabhat (@SanatanPrabhat) December 24, 2025
೧. ಟಿ.ಐ.ಎಸ್.ಎಸ್. ಪ್ರಕಾರ, ೧೯೬೧ ರಲ್ಲಿ ಮುಂಬಯಿಯಲ್ಲಿ ಮುಸಲ್ಮಾನರ ಜನಸಂಖ್ಯೆ ಸರಿಸುಮಾರು ಶೇ. ೮% ರಷ್ಟಿತ್ತು, ೨೦೧೧ ರಲ್ಲಿ ಶೇ. ೨೧% ಕ್ಕೆ ತಲುಪಿದೆ. ಇದು ಹೀಗೇ ಮುಂದುವರೆದರೆ, ೨೦೫೧ ರ ವೇಳೆಗೆ ಈ ಸಂಖ್ಯೆ ಶೇ. ೩೦% ರವರೆಗೆ ತಲುಪಬಹುದು ಎಂದು ಅಂದಾಜಿಸಲಾಗಿದೆ.
೨. ಮುಂಬಯಿಯಲ್ಲಿ ಅಕ್ರಮವಾಗಿ ವಾಸಿಸುತ್ತಿರುವ ಕೆಲವು ಬಾಂಗ್ಲಾದೇಶಿ ನುಸುಳುಕೋರರು ಇಲ್ಲಿ ಗಳಿಸಿದ ಹಣದ ಬಹುದೊಡ್ಡ ಭಾಗವನ್ನು ಮರಳಿ ಬಾಂಗ್ಲಾದೇಶಕ್ಕೆ ಕಳುಹಿಸುತ್ತಿದ್ದಾರೆ ಎಂದು ಕೂಡ ಈ ವರದಿಯಲ್ಲಿ ತಿಳಿಸಲಾಗಿದೆ.
ಹಿಂದೂಗಳ ಜನಸಂಖ್ಯೆಯ ಪ್ರಮಾಣ ಶೇ. ೫೪% ಕ್ಕಿಂತ ಕೆಳಗಿಳಿಯುವ ಸಾಧ್ಯತೆ!
ಈ ಹಿಂದೆ ನವೆಂಬರ್ ೨೦೨೪ ರ ಮಧ್ಯಂತರ ವರದಿಯಲ್ಲಿಯೂ ಬಾಂಗ್ಲಾದೇಶಿ ಮತ್ತು ರೋಹಿಂಗ್ಯಾ ಮುಸಲ್ಮಾನರ ಹೆಚ್ಚುತ್ತಿರುವ ಸಂಖ್ಯೆಯು ನಗರದ ಸಾಮಾಜಿಕ ಮತ್ತು ಆರ್ಥಿಕ ಚೌಕಟ್ಟಿನ ಮೇಲೆ ಪರಿಣಾಮ ಬೀರುತ್ತಿದೆ ಎಂದು ನಮೂದಿಸಲಾಗಿತ್ತು. ಬಾಂಗ್ಲಾದೇಶ ಮತ್ತು ಮ್ಯಾನ್ಮಾರ್ ನಿಂದ ನಡೆಯುತ್ತಿರುವ ಅಕ್ರಮ ವಲಸೆಯನ್ನು ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳಲಾಗುತ್ತಿದೆ ಎಂದೂ ಹೇಳಲಾಗಿತ್ತು. ಅದರಂತೆ ೨೦೫೧ ರ ವೇಳೆಗೆ ಮುಂಬಯಿಯಲ್ಲಿ ಹಿಂದೂಗಳ ಜನಸಂಖ್ಯೆ ಶೇ. ೫೪% ಕ್ಕಿಂತ ಕೆಳಗಿಳಿಯುವ ಮತ್ತು ಮುಸಲ್ಮಾನರ ಜನಸಂಖ್ಯೆ ಸುಮಾರು ಶೇ. ೩೦% ರಷ್ಟು ಹೆಚ್ಚಾಗುವ ಸಾಧ್ಯತೆಯನ್ನು ವ್ಯಕ್ತಪಡಿಸಲಾಗಿದೆ.
ಸಂಪಾದಕೀಯ ನಿಲುವುಕೇವಲ ಮುಂಬಯಿಯಲ್ಲಿ ಮಾತ್ರವಲ್ಲದೆ, ಇಡೀ ದೇಶದಲ್ಲಿ ಮುಸಲ್ಮಾನರ ಜನಸಂಖ್ಯೆ ಹೆಚ್ಚುತ್ತಿದೆ ಮತ್ತು ಮುಂಬರುವ ಜನಗಣತಿಯಲ್ಲಿ ಇದರ ಸ್ಪಷ್ಟ ಚಿತ್ರಣ ಹೊರಬರಲಿದೆ. ೨೦೪೭ ರ ವೇಳೆಗೆ ಜನಸಂಖ್ಯೆಯ ಆಧಾರದ ಮೇಲೆ ಭಾರತವನ್ನು ‘ಇಸ್ಲಾಮಿ ದೇಶ’ವನ್ನಾಗಿ ಮಾಡುವ ಪಿತೂರಿಯು ಈಗಾಗಲೇ ಬಯಲಾಗಿದೆ. ಆದ್ದರಿಂದ ಹಿಂದೂಗಳು ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳಬೇಕಾದರೆ, ‘ಹಿಂದೂ ರಾಷ್ಟ್ರ’ವನ್ನು ಸ್ಥಾಪಿಸುವುದನ್ನು ಬಿಟ್ಟು ಬೇರೆ ಪರ್ಯಾಯವೇ ಇಲ್ಲ. |
ಮಹಿಳೆಯ ಎದೆಗೆ ಸ್ಪರ್ಶಿಸುವುದು ಅತ್ಯಾಚಾರದ ಪ್ರಯತ್ನವಲ್ಲ! – ಉಚ್ಚ ನ್ಯಾಯಾಲಯ : Attempt to Rape
ಅಮರಕಂಟಕ (ಮಧ್ಯಪ್ರದೇಶ)ಇಲ್ಲಿನ ನರ್ಮದಾ ಉಗಮ ದೇವಸ್ಥಾನದ ಚಿನ್ನ ಮತ್ತು ಬೆಳ್ಳಿ ನಾಪತ್ತೆ! : Amarkantak Temple Donation Scam
ಬೆಂಗಳೂರಿನಲ್ಲಿ ದೇಶದ ಮೊದಲ ‘ಎಐ’ ವಿಶ್ವವಿದ್ಯಾಲಯ ಆರಂಭ ! : Karnataka AI University
ಗುಜರಾತ್ ನ ಪ್ರಸಿದ್ಧ ಶಕ್ತಿಪೀಠ ಅಂಬಾಜಿ ದೇವಸ್ಥಾನದಲ್ಲೂ ನೋಟು ಎಣಿಕೆಯ ಸಮಯದಲ್ಲಿ ೨ ತಿಂಗಳ ಹಿಂದೆ ಕಳ್ಳತನ ನಡೆದಿರುವುದು ಬಹಿರಂಗ ! : Ambaji Temple Donation Theft
ಸಮಾಜವಾದಿ ಪಕ್ಷದ ಅಧಿಕಾರಾವಧಿಯಲ್ಲಿ ‘ವಕ್ಫ್ ಮಂಡಳಿ’ಯ ಶತಕೋಟಿ ರೂಪಾಯಿಗಳ ಹಗರಣ! – ಮೌಲಾನಾ ಶಹಾಬುದ್ದೀನ ರಿಜ್ವಿ ಬರೇಲವಿ
“ನಾನು ಛತ್ರಪತಿ ಶಿವಾಜಿ ಮಹಾರಾಜರ ಅನುಯಾಯಿಯಾಗಿದ್ದು ರಣರಂಗ ಬಿಟ್ಟು ಓಡಿಹೋಗುವವನಲ್ಲ!”