ಬೆಂಗಳೂರಿನ ಉದ್ಯನಿ ಕೆ. ರಘುನಾಥ ಅವರ ನಿಗೂಢ ಸಾವಿನ ಪ್ರಕರಣ

ಬೆಂಗಳೂರು – ಸುಮಾರು ೬ ವರ್ಷಗಳ ನಂತರ ನಗರದ ಉದ್ಯನಿ ಕೆ. ರಘುನಾಥ ಅವರ ರಹಸ್ಯಮಯ ಸಾವಿಗೆ ಸಂಬಂಧಿಸಿದ ಪ್ರಕರಣದಲ್ಲಿ ಕೇಂದ್ರೀಯ ತನಿಖಾ ದಳವು (ಸಿಬಿಐ) ಆಂಧ್ರಪ್ರದೇಶದ ತೆಲುಗು ದೇಶಂ ಪಕ್ಷದ ಮಾಜಿ ಸಂಸದ ಡಿ.ಕೆ. ಆದಿಕೇಶವಲು ನಾಯ್ಡು ಅವರ ಪುತ್ರ ಡಿ.ಎ. ಶ್ರೀನಿವಾಸ, ಪುತ್ರಿ ಡಿ.ಎ. ಕಲ್ಪಜಾ ಮತ್ತು ಕರ್ನಾಟಕ ಪೊಲೀಸ್ ಉಪವರಿಷ್ಠಾಧಿಕಾರಿ ಎಸ್.ವೈ. ಮೋಹನ ಅವರನ್ನು ಬಂಧಿಸಿದೆ. ಆಸ್ತಿ ವಿವಾದದ ಹಿನ್ನೆಲೆಯಲ್ಲಿ ಈ ಕೊಲೆ ನಡೆದಿದೆ ಎಂದು ತಿಳಿದುಬಂದಿದೆ.

೧. ಕೆ. ರಘುನಾಥ ಅವರು ಮಾಜಿ ಸಂಸದ ನಾಯ್ಡು ಅವರ ಆಪ್ತ ಸಹಾಯಕ ಎಂದು ಪರಿಗಣಿಸಲ್ಪಟ್ಟಿದ್ದರು; ಆದರೆ ೨೦೧೯ ರಲ್ಲಿ ವೈಟ್ ಫೀಲ್ಡ್ ನ ಅತಿಥಿಗೃಹವೊಂದರಲ್ಲಿ ಅವರ ಮೃತದೇಹ ಪತ್ತೆಯಾಗಿತ್ತು. ಆರಂಭದಲ್ಲಿ ಇದನ್ನು ಆತ್ಮಹತ್ಯೆ ಎಂದು ಭಾವಿಸಲಾಗಿತ್ತು; ಆದರೆ ನಂತರ ಅವರ ಪತ್ನಿ ಮತ್ತು ಪುತ್ರ ಸಾವಿನ ಬಗ್ಗೆ ಸಂಶಯ ವ್ಯಕ್ತಪಡಿಸಿ ತನಿಖೆಗೆ ಆಗ್ರಹಿಸಿದ್ದರು.
೨. ‘ಸಿಬಿಐ’, ಆರೋಪಿಗಳನ್ನು ಕ್ರಿಮಿನಲ್ ಪಿತೂರಿ, ವಂಚನೆ, ಸಾಕ್ಷ್ಯ ನಾಶಪಡಿಸುವುದು ಮತ್ತು ನಕಲಿ ಸಾಕ್ಷ್ಯಗಳನ್ನು ಸೃಷ್ಟಿಸಿದ ಗಂಭೀರ ಆರೋಪಗಳ ಅಡಿಯಲ್ಲಿ ಬಂಧಿಸಲಾಗಿದೆ, ಎಂದು ಹೇಳಿದೆ.
೩. ೨೦೨೨ ರಲ್ಲಿ ಕರ್ನಾಟಕ ಉಚ್ಚ ನ್ಯಾಯಾಲಯದ ಆದೇಶದಂತೆ ಈ ಪ್ರಕರಣದ ಮುಂದಿನ ತನಿಖೆಯ ಜವಾಬ್ದಾರಿಯನ್ನು ‘ಸಿಬಿಐ’ಗೆ ವಹಿಸಲಾಗಿತ್ತು. ತದನಂತರ ಸರ್ವೋಚ್ಚ ನ್ಯಾಯಾಲಯವೂ ‘ಸಿಬಿಐ’ ತನಿಖೆಗೆ ಅನುಮತಿ ನೀಡಿತ್ತು.
೪. ‘ಸಿಬಿಐ’ ತನಿಖೆಯಲ್ಲಿ, ಕೆ. ರಘುನಾಥ ಅವರನ್ನು ಆರೋಪಿಗಳು ಎರಡು ದಿನಗಳ ಕಾಲ ಅತಿಥಿಗೃಹದಲ್ಲಿ ಬಲವಂತವಾಗಿ ಇರಿಸಿದ್ದರು. ನಂತರ ಅವರ ಹತ್ಯೆ ಮಾಡಿ, ಅದು ಆತ್ಮಹತ್ಯೆಯಂತೆ ಬಿಂಬಿಸಿದ್ದರು, ಎಂದು ತಿಳಿಸಿದ್ದಾರೆ.
೫. ಎಲ್ಲಾ ಆರೋಪಿಗಳನ್ನು ಡಿಸೆಂಬರ್ ೨೯, ೨೦೨೫ ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಈ ಪ್ರಕರಣದಲ್ಲಿ ‘ಸಿಬಿಐ’ ಮುಂದಿನ ತನಿಖೆಯನ್ನು ನಡೆಸುತ್ತಿದೆ.
ಮಹಿಳೆಯ ಎದೆಗೆ ಸ್ಪರ್ಶಿಸುವುದು ಅತ್ಯಾಚಾರದ ಪ್ರಯತ್ನವಲ್ಲ! – ಉಚ್ಚ ನ್ಯಾಯಾಲಯ : Attempt to Rape
ಅಮರಕಂಟಕ (ಮಧ್ಯಪ್ರದೇಶ)ಇಲ್ಲಿನ ನರ್ಮದಾ ಉಗಮ ದೇವಸ್ಥಾನದ ಚಿನ್ನ ಮತ್ತು ಬೆಳ್ಳಿ ನಾಪತ್ತೆ! : Amarkantak Temple Donation Scam
ಬೆಂಗಳೂರಿನಲ್ಲಿ ದೇಶದ ಮೊದಲ ‘ಎಐ’ ವಿಶ್ವವಿದ್ಯಾಲಯ ಆರಂಭ ! : Karnataka AI University
ಗುಜರಾತ್ ನ ಪ್ರಸಿದ್ಧ ಶಕ್ತಿಪೀಠ ಅಂಬಾಜಿ ದೇವಸ್ಥಾನದಲ್ಲೂ ನೋಟು ಎಣಿಕೆಯ ಸಮಯದಲ್ಲಿ ೨ ತಿಂಗಳ ಹಿಂದೆ ಕಳ್ಳತನ ನಡೆದಿರುವುದು ಬಹಿರಂಗ ! : Ambaji Temple Donation Theft
ಸಮಾಜವಾದಿ ಪಕ್ಷದ ಅಧಿಕಾರಾವಧಿಯಲ್ಲಿ ‘ವಕ್ಫ್ ಮಂಡಳಿ’ಯ ಶತಕೋಟಿ ರೂಪಾಯಿಗಳ ಹಗರಣ! – ಮೌಲಾನಾ ಶಹಾಬುದ್ದೀನ ರಿಜ್ವಿ ಬರೇಲವಿ
“ನಾನು ಛತ್ರಪತಿ ಶಿವಾಜಿ ಮಹಾರಾಜರ ಅನುಯಾಯಿಯಾಗಿದ್ದು ರಣರಂಗ ಬಿಟ್ಟು ಓಡಿಹೋಗುವವನಲ್ಲ!”