
ಕೋಲಕಾತಾ (ಬಂಗಾಳ) – ರಾಷ್ಟ್ರೀಯ ಸ್ವಯಂಸೇವಕ ಸಂಘದ ಉದ್ದೇಶವು ಹಿಂದೂ ಸಮಾಜವನ್ನು ಸಂಘಟಿಸುವುದಾಗಿದೆ, ಇದು ಯಾರ ವಿರೋಧಕ್ಕಾಗಿಯೂ ನಿಂತಿಲ್ಲ. ನೀವು ವ್ಯಾಯಾಮ ಮಾಡುತ್ತಿದ್ದರೆ, ಅದರರ್ಥ ನೀವು ಯಾರ ಮೇಲಾದರೂ ಆಕ್ರಮಣ ಮಾಡಲು ಯೋಜಿಸುತ್ತಿದ್ದೀರಿ ಎಂದಲ್ಲ. ವ್ಯಾಯಾಮ ಮಾಡುವ ಮೂಲಕ ನೀವು ಕೇವಲ ನಿಮ್ಮನ್ನು ಆರೋಗ್ಯವಾಗಿರಿಸಿಕೊಳ್ಳುತ್ತಿದ್ದೀರಿ, ಎಂದು ಪ.ಪೂ. ಸರಸಂಘಚಾಲಕ ಡಾ. ಮೋಹನಜೀ ಭಾಗವತ ಅವರು ಇಲ್ಲಿ ಹೇಳಿದರು. ಸಂಘಕ್ಕೆ ೧೦೦ ವರ್ಷಗಳು ಪೂರ್ಣಗೊಂಡ ನಿಮಿತ್ತ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.
ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಅವರು ಇತ್ತೀಚೆಗೆ ಜರ್ಮನಿಯಲ್ಲಿ ‘ಸಂಘದ ಮುಖ್ಯಸ್ಥರು ಬಹಿರಂಗವಾಗಿ ಸತ್ಯಕ್ಕಿಂತ ಶಕ್ತಿಯೇ ಮುಖ್ಯ ಎಂದು ಹೇಳುತ್ತಿದ್ದಾರೆ ಎಂದು ಹೇಳಿದ್ದರು. ಇದನ್ನು ಉಲ್ಲೇಖಿಸಿಯೇ ಪ.ಪೂ. ಭಾಗವತ ಅವರು ಈ ಮೇಲಿನ ಹೇಳಿಕೆಯನ್ನು ನೀಡಿದ್ದಾರೆ ಎಂದು ಹೇಳಲಾಗುತ್ತಿದೆ.
ಪ.ಪೂ. ಸರಸಂಘಚಾಲಕರು ಮಂಡಿಸಿದ ಕೆಲ ಸೂತ್ರಗಳು,
೧. ಸಂಘವನ್ನು ಭಾರತೀಯ ಸಮಾಜವನ್ನು ಸಿದ್ಧಪಡಿಸಲು ಸ್ಥಾಪಿಸಲಾಗಿತ್ತು. ಇದರಿಂದ ಭಾರತವು ಮತ್ತೊಮ್ಮೆ ವಿಶ್ವಗುರುವಾಗಲು ಸಾಧ್ಯವಾಗುತ್ತದೆ. ಸಂಘವು ಯಾವುದೇ ರಾಜಕೀಯ ಉದ್ದೇಶದಿಂದ, ಕೋಪದಿಂದ ಅಥವಾ ಸ್ಪರ್ಧೆಯ ಭಾವನೆಯಿಂದ ನಿರ್ಮಾಣವಾಗಿಲ್ಲ.
೨. ಸಂಘವನ್ನು ಹಿಂದೂ ಸಮಾಜದ ಸಂಘಟನೆ, ಪ್ರಗತಿ ಮತ್ತು ಭದ್ರತೆಗಾಗಿ, ಹಾಗೆಯೇ ಭಾರತದ ಮೌಲ್ಯಗಳು ಮತ್ತು ಚಾರಿತ್ರ್ಯವನ್ನು ಉಳಿಸಿಕೊಳ್ಳಲು ಸ್ಥಾಪಿಸಲಾಯಿತು. ಭಾರತವು ಕೇವಲ ಒಂದು ಭೂಗೋಳವಲ್ಲ, ಅದೊಂದು ಪರಂಪರೆ ಮತ್ತು ಜೀವನ ನಡೆಸುವ ಪದ್ಧತಿಯಾಗಿದೆ, ಎಂಬುದು ಸಂಘದ ಸ್ಥಾಪನೆಯ ಹಿಂದಿನ ಉದ್ದೇಶವಾಗಿತ್ತು.
೩. ಸಂಘದಂತಹ ಇನ್ನೊಂದು ಸಂಘಟನೆಯಿಲ್ಲ. ಇತರರೊಂದಿಗೆ ಹೋಲಿಕೆ ಮಾಡಿದರೆ ತಪ್ಪು ತಿಳುವಳಿಕೆಯಾಗುತ್ತದೆ. ನಾವು ಸಮವಸ್ತ್ರದಲ್ಲಿ ಸಂಚಲನ ಮಾಡುತ್ತೇವೆ ಎಂದ ಮಾತ್ರಕ್ಕೆ ಆರ್ ಎಸ್ ಎಸ್ ಅನ್ನು ‘ಅರೆಸೈನಿಕ ಪಡೆ’ ಎನ್ನುವುದು ತಪ್ಪಾಗುತ್ತದೆ.
೪. ಈ ದೇಶದಲ್ಲಿ ಏನಾದರೂ ಒಳ್ಳೆಯದು ಅಥವಾ ಕೆಟ್ಟದ್ದು ನಡೆದಾಗ, ಯಾರು ತಮ್ಮನ್ನು ಹಿಂದೂಗಳೆಂದು ಭಾವಿಸುವುದಿಲ್ಲವೋ ಅವರಿಗೆ ಅಪರೂಪದ ಪ್ರಶ್ನೆಗಳನ್ನು ಕೇಳಲಾಗುತ್ತದೆ; ಆದರೆ ಯಾರು ಅಭಿಮಾನದಿಂದ ತಮ್ಮನ್ನು ಹಿಂದೂಗಳೆಂದು ಕರೆದುಕೊಳ್ಳುತ್ತಾರೋ ಅವರಿಗೆ ಯಾವಾಗಲೂ ‘ನೀವು ದೇಶಕ್ಕಾಗಿ ಏನು ಮಾಡಿದ್ದೀರಿ?’ ಎಂದು ಕೇಳಲಾಗುತ್ತದೆ. ಹಿಂದೂಗಳು ಯಾವಾಗಲೂ ಈ ದೇಶಕ್ಕಾಗಿ ತಮ್ಮನ್ನು ತಾವು ಹೊಣೆಗಾರರು ಎಂದು ಭಾವಿಸಿದ್ದಾರೆ.
ಸಂಘವನ್ನು ಭಾಜಪ ದೃಷ್ಟಿಕೋನದಿಂದ ನೋಡಲು ಪ್ರಯತ್ನಿಸಬೇಡಿ!
ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು ಭಾಜಪ ದೃಷ್ಟಿಕೋನದಿಂದ ನೋಡಲು ಪ್ರಯತ್ನಿಸಬೇಡಿ. ಅನೇಕರಿಗೆ ಸಂಘವನ್ನು ಭಾಜಪ ಮಾಧ್ಯಮದ ಮೂಲಕ ಅರ್ಥಮಾಡಿಕೊಳ್ಳುವ ಪ್ರವೃತ್ತಿ ಇರುತ್ತದೆ. ಇದು ಬಹಳ ದೊಡ್ಡ ತಪ್ಪಾಗುತ್ತದೆ. ಸಂಘವನ್ನು ಅರ್ಥಮಾಡಿಕೊಳ್ಳಬೇಕಾದರೆ, ಸಂಘವನ್ನೇ ನೋಡಬೇಕಾಗುತ್ತದೆ. ಸಂಘವನ್ನು ನೋಡಿ ಮಾತ್ರ ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ, ಸಂಘದ ಅನುಭವ ಪಡೆಯಬೇಕಾಗುತ್ತದೆ, ಎಂದು ಪ.ಪೂ. ಸರಸಂಘಚಾಲಕರು ಹೇಳಿದರು.
ಮಹಿಳೆಯ ಎದೆಗೆ ಸ್ಪರ್ಶಿಸುವುದು ಅತ್ಯಾಚಾರದ ಪ್ರಯತ್ನವಲ್ಲ! – ಉಚ್ಚ ನ್ಯಾಯಾಲಯ : Attempt to Rape
ಅಮರಕಂಟಕ (ಮಧ್ಯಪ್ರದೇಶ)ಇಲ್ಲಿನ ನರ್ಮದಾ ಉಗಮ ದೇವಸ್ಥಾನದ ಚಿನ್ನ ಮತ್ತು ಬೆಳ್ಳಿ ನಾಪತ್ತೆ! : Amarkantak Temple Donation Scam
ಬೆಂಗಳೂರಿನಲ್ಲಿ ದೇಶದ ಮೊದಲ ‘ಎಐ’ ವಿಶ್ವವಿದ್ಯಾಲಯ ಆರಂಭ ! : Karnataka AI University
ಗುಜರಾತ್ ನ ಪ್ರಸಿದ್ಧ ಶಕ್ತಿಪೀಠ ಅಂಬಾಜಿ ದೇವಸ್ಥಾನದಲ್ಲೂ ನೋಟು ಎಣಿಕೆಯ ಸಮಯದಲ್ಲಿ ೨ ತಿಂಗಳ ಹಿಂದೆ ಕಳ್ಳತನ ನಡೆದಿರುವುದು ಬಹಿರಂಗ ! : Ambaji Temple Donation Theft
ಸಮಾಜವಾದಿ ಪಕ್ಷದ ಅಧಿಕಾರಾವಧಿಯಲ್ಲಿ ‘ವಕ್ಫ್ ಮಂಡಳಿ’ಯ ಶತಕೋಟಿ ರೂಪಾಯಿಗಳ ಹಗರಣ! – ಮೌಲಾನಾ ಶಹಾಬುದ್ದೀನ ರಿಜ್ವಿ ಬರೇಲವಿ
“ನಾನು ಛತ್ರಪತಿ ಶಿವಾಜಿ ಮಹಾರಾಜರ ಅನುಯಾಯಿಯಾಗಿದ್ದು ರಣರಂಗ ಬಿಟ್ಟು ಓಡಿಹೋಗುವವನಲ್ಲ!”