|
ಬೆಂಗಳೂರು – ಇಲ್ಲಿನ ಬನಶಂಕರಿ ಪ್ರದೇಶದಲ್ಲಿ ಮಧ್ಯರಾತ್ರಿ ೨ ಗಂಟೆಗೆ ರಾಷ್ಟ್ರರಕ್ಷಣಾ ದಳದ ಮಹಿಳಾ ಕಾರ್ಯಕರ್ತೆಯರು ಗೋವುಗಳನ್ನು ಕಸಾಯಿಖಾನೆಗೆ ಕರೆದೊಯ್ಯುತ್ತಿದ್ದ ಟ್ರಕ್ ಅನ್ನು ತಡೆದು ಹಸುಗಳನ್ನು ರಕ್ಷಿಸಿದರು. ರಾಷ್ಟ್ರರಕ್ಷಣಾ ದಳದ ಪುನೀತ್ ಕೆರೆಹಳ್ಳಿ ಅವರು ‘ಎಕ್ಸ್’ (X) ವೇದಿಕೆಯಲ್ಲಿ ವೀಡಿಯೊವನ್ನು ಪ್ರಸಾರ ಮಾಡುವ ಮೂಲಕ ಈ ಬಗ್ಗೆ ಮಾಹಿತಿ ನೀಡಿದ್ದಾರೆ.
ಬನಶಂಕರಿ ಕಸಾಯಿಖಾನೆಯ ಮಾಲೀಕ ಫಯಾಜ್, ರಾಷ್ಟ್ರರಕ್ಷಣಾ ದಳಕ್ಕೆ, ‘ನಿಮ್ಮ ತಂಡದಲ್ಲಿ ಪೌರುಷವಿದ್ದರೆ, ಬನಶಂಕರಿ ಪ್ರದೇಶದಲ್ಲಿ ನಮ್ಮ ವಾಹನವನ್ನು ತಡೆದು ತೋರಿಸಿ’ ಎಂದು ಸವಾಲು ಹಾಕಿದ್ದನು. ಈ ಸವಾಲನ್ನು ಸ್ವೀಕರಿಸಿ ರಾಷ್ಟ್ರರಕ್ಷಣಾ ದಳದ ಮಹಿಳಾ ಕಾರ್ಯಕರ್ತೆಯರು ಈ ಕಾರ್ಯಾಚರಣೆಯನ್ನು ನಡೆಸಿದರು. ರಾಷ್ಟ್ರರಕ್ಷಣಾ ದಳದ ಮಹಿಳಾ ಕಾರ್ಯಕರ್ತೆಯರು ಟ್ರಕ್ ಅನ್ನು ನಿಲ್ಲಿಸಿ ವಿಚಾರಣೆ ನಡೆಸಿದಾಗ, ಟ್ರಕ್ ಚಾಲಕ ಮತ್ತು ಇತರ ಸಿಬ್ಬಂದಿ ಓಡಿಹೋದರು. ನಂತರ ಹಸುಗಳನ್ನು ರಕ್ಷಿಸಿ ಗೋಶಾಲೆಗೆ ಒಪ್ಪಿಸಲಾಯಿತು.
ಸಂಪಾದಕೀಯ ನಿಲುವುಇಂತಹ ಕೃತ್ಯವನ್ನು ನಾಗರಿಕರು ಏಕೆ ಮಾಡಬೇಕಾಗುತ್ತದೆ? ಪೊಲೀಸರು ಮತ್ತು ಆಡಳಿತಕ್ಕೆ ಮಾಹಿತಿ ಸಿಗುವುದಿಲ್ಲವೇ? |

‘ಜೀವೋತ್ತಮ ವಿದ್ಯಾಪೀಠಂ’ ಸನಾತನ ಧರ್ಮದ ರಕ್ಷಣೆಯಲ್ಲಿ ಮಹತ್ವದ ಪಾತ್ರ ವಹಿಸಲಿದೆ! – ಶ್ರೀಮದ್ ವಿದ್ಯಾಧೀಶ ತೀರ್ಥ ಶ್ರೀಪಾದ ವಡೇರ ಸ್ವಾಮೀಜಿ
‘ಎನ್ಸಿಇಆರ್ಟಿ’ಯ 9ನೇ ತರಗತಿಯ ಪುಸ್ತಕದಲ್ಲಿ ತುರ್ತು ಪರಿಸ್ಥಿತಿಯ ಮಾಹಿತಿ ಸೇರ್ಪಡೆ : NCERT Introduces Emergency
ಆರೋಪಿ ಭೀಮರಾವ್ ಕಾಂಬ್ಳೆಗೆ ದೋಷಿ ಎಂದು ತೀರ್ಪು; ಜೂನ್ 29 ರಂದು ಅಂತಿಮ ಶಿಕ್ಷೆ ಪ್ರಕಟ : Nasrapur Case
ಎನ್ಸಿಇಆರ್ಟಿ ಪಠ್ಯದಲ್ಲಿ ಮರಾಠಾ ಸಾಮ್ರಾಜ್ಯದ ಇತಿಹಾಸ: ಮಹಾರಾಷ್ಟ್ರ ಶಿಕ್ಷಣ ಸಚಿವರ ಆಗ್ರಹ
ಶ್ರೀರಾಮಮಂದಿರದಲ್ಲಿ ದೇಣಿಗೆ ಕಳ್ಳತನ ಪ್ರಕರಣ ದೂರು ದಾಖಲು : ಇಬ್ಬರ ಬಂಧನ
ಘಾಜಿಯಾಬಾದ್ (ಉತ್ತರ ಪ್ರದೇಶ) ಇಲ್ಲಿ ವೈದ್ಯ ನದೀಮ್ ನಿಂದ ರೋಗಿಯ ತಪ್ಪು ರಕ್ತನಾಳ ಕತ್ತರಿಸಿದ! : Doctor cuts wrong Vein